ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕಿನಲ್ಲಿ ಹಣ ಪಡೆಯಲು ಚೆಕ್ ಬುಕ್ ಬೇರೆ ಬೇಕಾ?

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 1: "ಹಣ ಕಡಿಮೆ ಇದೆ ನೀವು ಕೇಳಿದಷ್ಟು ಹಣವನ್ನು ಕೊಡಲಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ ಇನ್ನು ಕ್ಯೂನಲ್ಲಿ ನಿಂತಿರುವವರಿಗೆ ಕೊಡಬೇಕು" ಹೀಗೆ ಬ್ಯಾಂಕುಗಳಲ್ಲಿ ಖಾತೆದಾರರ ಮನವೊಲಿಸಿಲು ಮುಂದಾಗುತ್ತಿದ್ದಾರೆ.

ನೀವು ನಿಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ಮೊದಲು ಐಡಿಯನ್ನು ತೋರಿಸಬೇಕು. ನಂತರ ಅದರ ಜೆರಾಕ್ಸ್ ಪ್ರತಿಯನ್ನು ಅದರ ಜೊತೆಗಿಟ್ಟುಕೊಂಡಿರಬೇಕು. ಅಲ್ಲದೆ ಕೇಳಿದಾಗ ತೊರಿಸಲು ಪ್ಯಾನ್ ಕಾರ್ಡ್ ಇರಲೇಬೇಕು.[ಒಂದನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ..?]

pic hdfc

ಚಲನ್ ಅಲ್ಲಿ ನೀವು ಪಡೆಯಬೆಕಾದ ಹಣದ ವಿವರ ಅಕೌಂಟ್ ನಂಬರ್ ಎಲ್ಲವನ್ನು ಬರೆದು ನಂತರ ಅದನ್ನು ಒಂದು ಸ್ವೀಕೃತಿ ಕೌಂಟರಿನಲ್ಲಿ ಕೊಡಬೇಕು. ಕೌಂಡರಿನಲ್ಲಿ ಕೇಳಿದ ಮಾಹಿತಿಯನ್ನು ಒದಗಿದರೆ ಅವರು ಮುಂದಿನ ಕೌಟಂರಿಗೆ ಅದನ್ನು ವರ್ಗಾಯಿಸುತ್ತಾರೆ. ಆಗ ಅಲ್ಲಿ ನಿಮಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದರೂ ನಿಮ್ಮ ಮನವೊಲಿಸಿ ಕಡಿಮೆ ಹಣವನ್ನೇ ನೀಡುತ್ತಾರೆ.

ಇನ್ನು ಕೆಲವು ಖಾಸಗಿ ಬ್ಯಾಂಕುಗಳಲ್ಲಿ ನಿಮ್ಮ ಅಕೌಂಟಿನ ಹಣವನ್ನು ಪಡೆಯಬೇಕಾದರೆ ನಿಮ್ಮ ಚೆಕ್ಕಿನಲ್ಲಿ ಹಣದ ಮೊಬಲಗನ್ನು ಬರೆದು ಕೌಂಟರಿನಲ್ಲಿ ಅವರು ಕೇಳಿದ ಮಾಹಿತಿಯನ್ನು ನೀಡಿ ಪರೀಕ್ಷಿಸಿಕೊಂಡು ನಂತರ ಹಣ ಪಡೆಯಬಹುದಾಗಿದೆ. ಆದರೆ ಆರ್ ಬಿಐ ಹೇಳಿದಂತೆ ವಾರಕ್ಕೆ 24 ಸಾವಿರ ಹಣವನ್ನು ಯಾವ ಬ್ಯಾಂಕುಗಳಲ್ಲಿಯೂ ನೀಡುತ್ತಿಲ್ಲ. ಇನ್ನು ಕೆಲವು ಬ್ಯಾಂಕುಗಳಲ್ಲಿ ರು 50. ರು 10 ನೋಟುಗಳನ್ನು ನೀಡುತ್ತಿದ್ದಾರೆ.[ಡಿಸೆಂಬರ್ ಮೊದಲವಾರ ಶುರುವಾಯ್ತು ಆರ್ಥಿಕ ಬರಗಾಲ]

is it cheque book is comparably for withdrawn

ಜೊತೆಗೆ ಬೆಂಗಳೂರಿನ ಬ್ಯಾಂಕುಗಳ ಎಟಿಎಂಗಳು ಸ್ಥಬ್ಧವಾಗಿವೆ. ಕೆಲವು ಕಡೆ ಮಾತ್ರ ನಗದು ದೊರೆಯುತ್ತಿದೆ. ಆದರೆ ಒಂದು ಗಂಟೆ ಮುಂಚಿತವಾಗಿಯೇ ಹಣವಿಲ್ಲ ಎಂಬ ಕಾರಣಕ್ಕೆ ಬ್ಯಾಂಕನ್ನು ಮುಚ್ಚಿಬಿಡುತ್ತಾರೆ ಎನ್ನುವುದು ಖಾತೆದಾರರ ಅಳಲು.

English summary
December first the shart queue are forming in some Bank, some Bank expect to ID and pan. In some bank to comparably for cheque book to withdrawn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X