ನಿತೀಶ್ ಕುಮಾರ್ ಜೊತೆ ಬಿಜೆಪಿ ಮೈತಿ ಪವಿತ್ರವೇ? ಎಚ್ಡಿಕೆ ವ್ಯಂಗ್ಯ
Recommended Video

ನಿತೀಶ್ ಕುಮಾರ್ ಜೊತೆ ಬಿಜೆಪಿ ಮೈತಿ ಪವಿತ್ರವೇ? ಎಚ್ಡಿಕೆ ವ್ಯಂಗ್ಯ | Oneindia Kannada
ಬೆಂಗಳೂರು, ಫೆಬ್ರವರಿ 18: ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಬಿಜೆಪಿ ಮಾಡಿಕೊಂಡಿರುವ ಮೈತ್ರಿ ಪವಿತ್ರವೇ? ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
ಕೇಂದ್ರದಲ್ಲಿ ವಿಪಕ್ಷಗಳು ಒಂದಾಗಿ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು 'ಅಪವಿತ್ರ ಮೈತ್ರಿ' ಎಂದಿರುವ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ ಅವರು, ಬಿಹಾರದ ಮೈತ್ರಿ ಅಪವಿತ್ರವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಎನ್ ಡಿಟಿವಿಗೆ ಅವರು ನೀಡಿದ ಸಂದರ್ಶನದಲ್ಲಿ ಕೇಂದ್ರದ ಮೋದಿ ಸರ್ಕಾರ ಮತ್ತು ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶ ಸರ್ಕಾರಗಳ ಹಲವು ಯೋಜನೆಗಳನ್ನು ಟೀಕಿಸಿದರು.
ಬಿಹಾರದಲ್ಲಿ ಜನಾಭಿಪ್ರಾಯದ ವಿರುದ್ಧ ಬಿಜೆಪಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದ್ದು ಮಾತ್ರ ಪವಿತ್ರ, ನಾವೆಲ್ಲ ಮಾಡಿಕೊಳ್ಳುವುದು ಅಪವಿತ್ರ ಎಂದರೆ ಸರಿಯೇ ಎಂದು ಅವರು ಪ್ರಶ್ನಿಸಿದರು.











Click it and Unblock the Notifications