ಬೆಂಗಳೂರಿನಿಂದ ಹೊರಕ್ಕೆ ಐಟಿ ವಿಸ್ತರಣೆ

ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಅ.22ರಿಂದ 24ರವರೆಗೆ ಮೂರು ದಿನಗಳ ಕಾಲ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಮೇಳ ಆಯೋಜಿಸಲಾಗಿದೆ. ಈ ಬಾರಿಯಿಂದ ಬೆಂಗಳೂರು IT.BIz ಇನ್ಮುಂದೆ ITE.Biz ಎಂದು ಕರೆಸಿಕೊಳ್ಳಲಿದೆ. 16ನೇ ಆವೃತ್ತಿಯ ಐಟಿ ಮೇಳ ಇದಾಗಿದೆ.
ಹೊಸ ಐಟಿ ನೀತಿ: ಒಂದಷ್ಟು ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ಎರಡನೇ ಹಂತದ ನಗರಗಳಲ್ಲಿ ತ್ವರಿತಗತಿಯ ಬೆಳವಣಿಗೆ ಸಾಧ್ಯವಾಗುತ್ತದೆ. ಈ ಕುರಿತು ಅ.22ರಂದು ಆರಂಭಗೊಳ್ಳಲಿರುವ ಸಮ್ಮೇಳನದಲ್ಲಿ ಯೋಜನೆಗಳನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎಸ್. ಆರ್. ಪಾಟೀಲ್ ಹೇಳಿದರು.
''ನಾಯಕತ್ವ, ಜ್ಞಾನ ಮತ್ತು ಉದ್ಯಮದ ಘೋಷಣೆಗಳೊಂದಿಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಐಟಿ ಹಾಗೂ ಬಿಟಿ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ರಾಜ್ಯ ಸರಕಾರದ ಹೊಸ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಲಿದ್ದಾರೆ,'' ಎಂದು ಪಾಟೀಲ್ ತಿಳಿಸಿದರು.
''ಕಾರ್ಯಕ್ರಮದ ಭಾಗವಾಗಿ ಸುಮಾರು ಒಂದು ಸಾವಿರ ಕೋಟಿ ರೂ. ರಫ್ತು ವ್ಯವಹಾರ ಮೀರಿದ ಕಂಪನಿಗಳನ್ನು ಒಂದು ಸೂರಿನಡಿ ತರುವ ಪ್ರಯತ್ನ ಮಾಡಲಾಗಿದೆ. ಒಟ್ಟು 17 ಕಂಪನಿಗಳನ್ನು ರಾಜ್ಯದ ಹೆಮ್ಮೆಯ ಪ್ರತೀಕ ಎಂದು ಪರಿಗಣಿಸಲಾಗುತ್ತಿದೆ. ಈ ಕುರಿತು ಸಮ್ಮೇಳನದ ಮೊದಲ ದಿನ ಮಾಹಿತಿ ನೀಡಲಾಗುವುದು,'' ಎಂದರು.
ಐಟಿ ಬಿಜ್ ಆಕರ್ಷಣೆ: ಗೂಗಲ್ ಇಂಟರ್ನೆಟ್ ಬಸ್, ವೈಇಎಸ್ ಎಸ್ ಎಸ್ ಫಾರ್ ಸ್ಟಾರ್ಟ್ ಆಪ್ಸ್, ಐಟಿ ಎಕ್ಸ್ ಪರ್ಟ್ ಪ್ರಶಸ್ತಿ
* ಹಾರ್ಡ್ ವೇರ್, ಸಾಫ್ಟ್ ವೇರ್, ಇಲೆಕ್ಟ್ರಾನಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, ಟೆಲಿಕಾಂ ಇನ್ನಿತರ ಕ್ಷೇತ್ರಗಳ ಹೊಸ ವಿದ್ಯಮಾನಗಳ ಮೇಲೆ ಫೋಕಸ್ ಹೊಂದಿರುವ 110 ಕ್ಕೂ ಅಧಿಕ ಮಳಿಗೆಗಳು
* ಉದಯೋನ್ಮುಖ ಉದ್ಯಮಿಗಳ ಉಪನ್ಯಾಸ, ಸಿಇಒ ಕಾನ್ ಕ್ಲೇವ್, ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್, ಕ್ಲೌಡ್ ಕಂಪ್ಯೂಟಿಂಗ್, ಎನ್ಎಎಸ್ ಎಸ್ ಸಿಒಎಂ ಮುಂತಾದ ವಿಷಯಗಳ ಮೇಲೆ 30 ಕ್ಕೂ ಭಾಷಣಗಳು
* ಸೈಬರ್ ಯಕ್ಷಗಾನ, ಬಿಟ್ ಜೆನ್ ಬೆಂಗಳೂರು ಐಟಿ ಜೆನಿ ಅನಾವರಣ












Click it and Unblock the Notifications