• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲು ಪ್ರಯಾಣ ಮಾಹಿತಿ ಗೂಗಲ್ ಮ್ಯಾಪ್ ನಲ್ಲೇ ಲಭ್ಯ!

By Mahesh
|

ಬೆಂಗಳೂರು, ಮೇ.13: ಬೆಂಗಳೂರು ಮೆಟ್ರೋ ರೈಲು ಸಂಚಾರ ಮಾಹಿತಿ ಸೇರಿದಂತೆ ದೇಶದ ಸುಮಾರು 12 ಸಾವಿರಕ್ಕೂ ಅಧಿಕ ರೈಲುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಗೂಗಲ್ ಮ್ಯಾಪ್ ನೀಡುತ್ತಿದೆ.

ಅಹಮದಾಬಾದ್‌, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಚೆನ್ನೈ, ಮುಂಬೈ, ನವದೆಹಲಿ, ಪುಣೆ ನಗರಗಳ ಮೆಟ್ರೋ, ಬಸ್‌ ಪ್ರಯಾಣ ಮಾಹಿತಿಗಳನ್ನು ಗೂಗಲ್ ಮ್ಯಾಪ್ ನೀಡಲಿದೆ ಎಂದು ಗೂಗಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಅಪ್ಲಿಕೇಷನ್ ಎಲ್ಲಿ ಲಭ್ಯ: ಕಂಪ್ಯೂಟರ್ ಡೆಸ್ಕ್ ಟಾಪ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ಆಗಿ ಕೂಡಾ ಲಭ್ಯವಿದೆ. ನ್ಯೂಯಾರ್ಕ್‌, ಲಂಡನ್‌, ಟೋಕಿಯೋ, ಸಿಡ್ನಿ ಸೇರಿದಂತೆ ವಿಶ್ವದ 2,800ಕ್ಕೂ ಅಧಿಕ ನಗರಗಳಲ್ಲಿ ಗೂಗಲ್ ಮ್ಯಾಪ್ ಸೌಲಭ್ಯ ಬಳಸುತ್ತಿದ್ದಾರೆ. ಈಗ ಈ ಪಟ್ಟಿಗೆ ಭಾರತದ ನಗರಗಳು ಸೇರಿವೆ. ['ಸರ್ಚ್ ಇಂಜಿನ್' ಗೂಗಲ್ ಮೇಲೆ ಸಿಬಿಐ ಸರ್ಚ್]

ಸಾರ್ವಜನಿಕರ ಪ್ರಯಾಣವನ್ನು ಸರಳ ಸರಾಗವಾಗಿಸಲು ಗೂಗಲ್ ಮ್ಯಾಪ್ ನ ಗೂಗಲ್ ಟ್ರಾನ್ಸಿಟ್ ಬಳಸಬಹುದು. ಬಸ್, ರೈಲು, ಮೆಟ್ರೋ ಅಥವಾ ಟ್ರಾಮ್ ಬಳಸುವ ಪ್ರಯಾಣಿಕರಿಗೆ ಇದು ಉಪಯುಕ್ತವಾಗಿದೆ ಎಂದು ಗೂಗಲ್ ಮ್ಯಾಪ್ಸ್ ಯೋಜನಾ ವಿಭಾಗದ ನಿರ್ದೇಶಕ ಸುರೇನ್ ರುಹೇಲಾ ಹೇಳಿದ್ದಾರೆ. [ಟಿಕೆಟ್ ಖರೀದಿಗೆ ಮೊಬೈಲ್ ಅಪ್ಲಿಕೇಶನ್]

ಗೂಗಲ್‌ ಮ್ಯಾಪ್‌ನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಕೆದಾರನಿಗೆ ನೀಡುವುದು ಸಂಸ್ಥೆ ಉದ್ದೇಶವಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳ ಸಂಚಾರ ವ್ಯವಸ್ಥೆ ಮಾಹಿತಿ, ಮಾಗದರ್ಶಿಯಾಗಿ ಗೂಗಲ್ ಮ್ಯಾಪ್ ನಿರ್ವಹಿಸಲಿದೆ ಎಂದು ಸುರೇನ್ ಅಭಿಪ್ರಾಯಪಟ್ಟಿದ್ದಾರೆ.(ಐಎಎನ್ಎಸ್)

English summary
Google announced the addition of Indian Railways schedules as well as updated information about public transport in eight Indian cities to Google Transit.This update will now allow people to access information about 12,000 trains, as well as updated details for bus and metro routes from Ahmedabad, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X