ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್ ಖರೀದಿಗೆ ಮೊಬೈಲ್ ಅಪ್ಲಿಕೇಶನ್

|
Google Oneindia Kannada News

ನವದೆಹಲಿ, ಏ. 22: ಭಾರತೀಯ ರೈಲ್ವೆ ಹೊಸ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಬಿಡುಗಡೆ ಮಾಡಿದ್ದು ನಿಮ್ಮ ಸ್ಮಾರ್ಟ್ ಫೋನ್ ಮುಖಾಂತರ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು. ಅಲ್ಲದೇ ತಿಂಗಳ ಪಾಸ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿನೂತನ ವ್ಯವಸ್ಥೆಗೆ ರೈಲ್ವೆ ಇಲಾಖೆ ಬುಧವಾರ ಚಾಲನೆ ನೀಡಿದೆ. ಮುಂಗಡ ಟಿಕೆಟ್ ಗಳನ್ನು ಮಾತ್ರ ಐಆರ್ ಸಿಟಿಟಸಿ ಅಪ್ಲಿಕೇಶನ್ ಮುಖಾಂತರ ಖರೀದಿ ಮಾಡಬಹುದಿತ್ತು. ಸಾಮಾನ್ಯ ಟಿಕೆಟ್ ಖರೀದಿಗೆ ಅವಕಾಶ ಇರಲಿಲ್ಲ. ಆಧುನಿಕತೆಗೆ ಒಗ್ಗಿಕೊಂಡ ರೈಲ್ವೆ ಈಗ ಇದ್ದಕ್ಕೂ ಅವಕಾಶ ಮಾಡಿಕೊಟ್ಟಿದೆ.[ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ]

railway

ಆಂಡ್ರಾಯ್ಡ್ ಆಧರಿತ ಫೋನ್ ಗಳಿಗೆ ಅಪ್ಲಿಕೇಶನನ್ನು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸರತಿ ಸಾಲಲ್ಲಿ ನಿಲ್ಲಬೇಕೆಂಬ ತಾಪತ್ರಯವಿಲ್ಲ, ಅಲ್ಲದೇ ಪರಿಸರ ಪ್ರೇಮಿಯಾಗಿರುವ ಅಪ್ಲಿಕೇಶನ್ ಮೂಲಕ ಕಾಗದದ ಉಳಿತಾಯವೂ ಆಗಲಿದೆ. ಮೊಬೈಲ್ ನಲ್ಲಿರುವ ಟಿಕೆಟ್ ಪ್ರತಿ ತೋರಿಸಿದರೆ ಸಾಕು ಪ್ರಯಾಣಕ್ಕೆ ಅವಕಾಶ ಮಾಡಿಕೊಡುವಂಥ ವ್ಯವಸ್ಥೆ ಜಾರಿಯಾಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಬಳಕೆ ಮತ್ತು ಕಾರ್ಯನಿರ್ವಹಣೆ ಹೇಗೆ?
* ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಆಪ್ ಸ್ಟೋರ್ ಗೆ ತೆರಳಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು.
* ಅಪ್ಲಿಕೇಶನ್ ಮುಖಾಂತರ ಒಳ ಪ್ರವೇಶಿಸಿದವ ನೋಂದಣಿ ಮಾಡಿಕೊಳ್ಳಬೇಕು.
* ರೈಲ್ವೆ ಇಲಾಖೆ ನಿಮಗೊಂದು ನೋಂದಣಿ ಸಂಖ್ಯೆಯನ್ನು ನೀಡುತ್ತದೆ.
* ನಂತರ ಟಿಕೆಟ್ ಕಾಯ್ದಿರಿಸಯವ ಅವಕಾಶ ನಿಮಗೆ ದೊರೆಯುತ್ತದೆ.
* ಲಭ್ಯವಿರುವ ಇ-ವಾಲೆಟ್ ಗಳನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು
* ಆರ್ ಆರ್ ಸಿಟಿಟಿ ತಾಣಕ್ಕೆ ತೆರಳಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಗೂ ಅವಕಾಶವಿದೆ.
* ಸಾಫ್ಟ್ ಕಾಪಿಯೊಂದು ಟಿಕೆಟ್ ಖರೀದಿ ನಂತರ ನಿಮ್ಮ ಮೊಬೈಲ್ ನಲ್ಲಿ ಸೇವದ ಆಗುತ್ತದೆ.
* ನಿಮ್ಮ ಮೊಬೈ,ಲ್ ನಲ್ಲಿರುವ ಸಾಫ್ಟ್ ಕಾಪಿಯನ್ನು ಮತ್ತೊಬ್ಬರಿಗೆ ಕಳುಹಿಸಲು ಅವಕಾಶವಿಲ್ಲ.

English summary
Rail commuters can use a mobile phone app to obtain tickets in the unreserved category as the Indian Railways takes forward its initiative for paperless ticketing. We have launched a mobile-based paperless unreserved ticketing application," said a senior Railway Ministry official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X