ಜುಲೈ 14ಕ್ಕೆ ಬೆಂಗಳೂರಿನಲ್ಲಿ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್

ಬೆಂಗಳೂರು, ಜುಲೈ 9: ಬೆಂಗಳೂರಿನಲ್ಲಿ ಏಳನೇ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ನ ಮೊದಲ ಫ್ಯಾಷನ್ ಶೋ ನಡೆಯಲಿದ್ದು, ದೇಶಾದ್ಯಂತ ಹತ್ತು ದಿನಗಳ ಕಾಲ ನಡೆಯುವ ಈ ಆವೃತ್ತಿಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಜುಲೈ 14ಕ್ಕೆ ಚಾಲನೆ ಸಿಗಲಿದೆ. ಚೆನೈ, ಹೈದರಾಬಾದ್, ಕೋಲ್ಕತ್ತಾ, ದೆಹಲಿ, ಚಂಡೀಗಢ, ಅಹಮದಾಬಾದ್, ಪುಣೆ, ಜೈಪುರದಲ್ಲಿ ಹತ್ತು ದಿನಗಳವರೆಗೆ ಫ್ಯಾಷನ್ ಶೋ ನಡೆಯಲಿದೆ.

ಫ್ಯಾಷನ್ ಶೋನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಮತ್ತು ವಿನ್ಯಾಸಕರು ಪಾಲ್ಗೊಳ್ಳಲಿದ್ದು, ಬ್ರಾಂಡ್ ಮತ್ತು ವಿನ್ಯಾಸಗಳನ್ನು 3 ರಿಂದ 13 ವರ್ಷದೊಳಗಿನ ಮಕ್ಕಳು ರಾಂಪ್ ಮೇಲೆ ಪ್ರದರ್ಶಿಸಲಿದ್ದಾರೆ. ಬೆಂಗಳೂರು ಕಿಡ್ಸ್ ಫ್ಯಾಷನ್ ಆವೃತ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಬ್ರಾಂಡ್ ಮತ್ತು ವಿನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಫ್ಯಾಷನ್ ಶೋಗೆ 1000 ಮಕ್ಕಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದು, 350 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ಅನ್ನು ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಬ್ರಾಂಡ್ ಜನಪ್ರಿಯತೆಯೊಂದಿಗೆ ಮಕ್ಕಳ ಪ್ರತಿಭೆ ಅನಾವರಣಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಡು, ನೃತ್ಯ, ವಾದ್ಯ ನುಡಿಸುವುದು ಸೇರಿದಂತೆ ಅನೇಕ ಕಲೆಗಳ ಪ್ರದರ್ಶನಕ್ಕೆ ವೇದಿಕೆ ರೂಪಿಸಲಾಗಿದೆ.

India Kids Fashion Week in Bangalore on July 14th

ಮಕ್ಕಳ ಉಡುಪುಗಳ ಬ್ರಾಂಡ್ ಮತ್ತು ವಿನ್ಯಾಸಕರು ತಮ್ಮ ನೈಪುಣ್ಯವನ್ನು ಪ್ರದರ್ಶಿಸಲು ಇದು ಒಳ್ಳೆಯ ವೇದಿಕೆ. ಕಳೆದ ಮೂರು ವರ್ಷಗಳ ಫ್ಯಾಷನ್ ಶೋಗಳಲ್ಲಿ ಬಾಲಿವುಡ್ ತಾರೆಯರಾದ ಕರೀಷ್ಮಾ ಕಪೂರ್, ಜೆನಿಲಿಯಾ ಡಿಸೋಜಾ, ಸುಷ್ಮಿತಾ ಸೇನ್, ದಿಯಾ ಮಿರ್ಜಾ, ಸೊಹೇಲ್ ಖಾನ್, ವಿವೇಕ್ ಒಬೆರಾಯ್, ನೀಲ್ ನಿತಿನ್ ಮುಖೇಶ್ ಮತ್ತು ಮಹಿಂದ್ರಾ ಬೇಡಿ ಪಾಲ್ಗೊಂಡು ಮಕ್ಕಳೊಂದಿಗೆ ರಾಂಪ್ ಮೇಲೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು ಎಂದರು ಕ್ರಾಫ್ಟ್ ವರ್ಲ್ಡ್ ಇವೆಂಟ್ ನಿರ್ದೇಶಕ ಮನೋಜ್ ಮೆಹತಾ.

ಈ ವರ್ಷ ಬೆಂಗಳೂರು ಆವೃತ್ತಿಯಲ್ಲಿ ಮಿಸ್ ಇಂಡಿಯಾ ಗೆಲಾಕ್ಸಿ ಸುಜಾತಾ ಜಾನ್, ಮಿಸೆಸ್ ಸೌಥ್ ಇಂಡಿಯನ್ ಯುನಿವರ್ಸ್ ದುರ್ಗಾ ವೆಂಕಟೇಶ್, ದಕ್ಷಿಣ ಭಾರತದ ಚಿತ್ರ ನಟಿ ಕಾಮ್ನಾ ಜೆಟ್ಮಲಾನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+