ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮುವಾದ ಆತಂಕಕಾರಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ

ಹೆಚ್ಚುತ್ತಿರುವ ಕೋಮುವಾದ ಆತಂಕಕಾರಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಆತಂಕ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭ.

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಕೋಮುವಾದ ಹಾಗೂ ಜಾತಿವಾದ ಸೇರಿದಂತೆ ಬಹುರೂಪಿ ಫ್ಯಾಸಿಸಂ ಸಮಾಜದ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿದ್ದು, ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದು ಆತಂಕಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

1942ರಲ್ಲಿ ಭಾರತ್ ಛೋಡೋ, ಇಂದು ಭಾರತ್ ಜೋಡೋ: ಪ್ರಧಾನಿ ಮೋದಿ1942ರಲ್ಲಿ ಭಾರತ್ ಛೋಡೋ, ಇಂದು ಭಾರತ್ ಜೋಡೋ: ಪ್ರಧಾನಿ ಮೋದಿ

ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯೋತ್ಸವದ ಪರೇಡ್ ಗೂ ಮುನ್ನ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ರಾಜ್ಯವನ್ನುದ್ದೇಶಿಸಿ ಮಾತನಾಡಿದರು.

Independence day Karnataka 2017: Rising Communism is a major concern says CM siddaramaiah

ಸಮಾರಂಭದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ, ಶಾಲಾ ಕಾಲೇಜು ಸಿಬ್ಬಂದಿಯು ಕವಾಯತು ನಡೆಸಿದರು. ಇದೇ ಮೊದಲ ಬಾರಿಗೆ, ಕೇರಳ ಪೊಲೀಸ್ ನ ವಿಶೇಷ ತುಕಡಿಯೊಂದು ಇದೇ ಕವಾಯತಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿದೆ....

 ಸ್ವಾತಂತ್ರ್ಯೋತ್ಸವ ಭಾಷಣ: ಕಿತ್ತೂರು ಚೆನ್ನಮ್ಮನ ನೆನೆದ ರಾಷ್ಟ್ರಪತಿ ಸ್ವಾತಂತ್ರ್ಯೋತ್ಸವ ಭಾಷಣ: ಕಿತ್ತೂರು ಚೆನ್ನಮ್ಮನ ನೆನೆದ ರಾಷ್ಟ್ರಪತಿ

- ತ್ಯಾಗ, ಬಲಿದಾನದ ಹೋರಾಟದ ಮೂಲಕ ಗುಲಾಮಗಿರಿಯ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಾಡಿನ ಜನತೆಯ ಪರವಾಗಿ ಗೌರವದ ನಮನಗಳು.

-ನಾವಿಂದು ಮನೆಯೊಳಗೆ ಸುರಕ್ಷಿತವಾಗಿ, ನಿಶ್ಚಿಂತೆಯಿಂದ ಇರಲು ಕಾರಣ ದೇಶದ ಸ್ವಾತಂತ್ರ್ಯವನ್ನು ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು.

- ನಮ್ಮದು ಬಹು ಭಾಷೆ, ಬಹುಧರ್ಮ, ಬಹು ಸಂಸ್ಕೃತಿ, ಬಹು ಮಾದರಿಯ ಬಹುತ್ವದ ವ್ಯವಸ್ಥೆ. ರಾಜ್ಯಗಳಲ್ಲಿ ರಾಜ್ಯಭಾಷೆಯೇ ಸಾರ್ವಭೌಮ.

Independence day Karnataka 2017: Rising Communism is a major concern says CM siddaramaiah

-ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ ಆಡಳಿತ ಸಿದ್ದಾಂತವಾಗಿದೆ.

- ಈ ಅಭಿವೃದ್ಧಿ ಮಾದರಿಗೆ ಬಸವಣ್ಣ, ಮಹಾತ್ಮ ಗಾಂಧಿ ಮತ್ತು ಡಾ ಬಿ. ಆರ್. ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ಪ್ರೇರಣೆ ನೀಡಿವೆ.

-ರಾಜ್ಯವು ಕಳೆದ ಮೂರು ವರ್ಷಗಳಿಂದ ಸತತವಾಗಿ ಬರದ ಬವಣೆಯಿಂದ ಬಳಲುತ್ತಿದ್ದರೂ ಎಲ್ಲೂ ಯಾರೂ ಅನ್ನಕ್ಕಾಗಿ ಪರಡಾಡುವ ಸ್ಥಿತಿ ಉದ್ಭವವಾಗಲಿಲ್ಲ.

-ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳನ್ನು ಒಳಗೊಂಡಂತೆ ಒಟ್ಟು 1.08 ಕೋಟಿ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ನೀಡುತ್ತಿದ್ದೇವೆ.

- ವಿದ್ಯಾಸಿರಿ ಯೋಜನೆಯಡಿ 319 ಕೋಟಿ ರೂಪಾಯಿ ವೆಚ್ಚದಲ್ಲಿ 2.7 ಲಕ್ಷ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗೆ ಮಾಸಿಕ 1,500 ರೂಪಾಯಿ ಧನ ಸಹಾಯ ಒದಗಿಸುತ್ತಿದ್ದೇವೆ.

Independence day Karnataka 2017: Rising Communism is a major concern says CM siddaramaiah

- ರಾಜ್ಯದ ಯುವಪೀಳಿಗೆಯನ್ನು ಪ್ರಸಕ್ತ ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯದೊಂದಿಗೆ ಸಜ್ಜುಗೊಳಿಸಲು ಕೌಶಲ್ಯ ಕರ್ನಾಟಕ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ.

- ಡಾ ಬಿ. ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ ಬೆಂಗಳೂರು ಡಾ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

- ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಹೆಚ್ಚಿಸಲು ಈ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ 23 ಹೊಸ ಹಾಸ್ಟೆಲ್‍ಗಳನ್ನು ಸ್ಥಾಪಿಸಲಾಗುವುದು.

- ರಾಜ್ಯವನ್ನು ಸೀಮೆಎಣ್ಣೆ ಮುಕ್ತವನ್ನಾಗಿಸಲು ಎಲ್ಲಾ ಅಡುಗೆ ಅನಿಲ ಸಂಪರ್ಕರಹಿತ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಅನಿಲಭಾಗ್ಯ ಯೋಜನೆ ರೂಪಿಸಲಾಗಿದೆ.

- ಪಡಿತರ ಸೀಮೆಎಣ್ಣೆಯನ್ನು ಬಿಟ್ಟುಕೊಡುವವರಿಗೆ ಪುರ್ನಬೆಳಕು ಯೋಜನೆಯಲ್ಲಿ ಉಚಿತವಾಗಿ ರೀಚಾರ್ಜಬಲ್ ಎಲ್ ಇ ಡಿ ದೀಪ ನೀಡಲು ಯೋಜನೆ ಜಾರಿಗೊಳಿಸಲಾಗಿದೆ.

- ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 4.55 ಲಕ್ಷ ರೈತರಿಗೆ 50,010 ಕೋಟಿ ರೂ ಸಾಲ ನೀಡಲಾಗಿದ್ದು 10.7 ಲಕ್ಷ ರೈತರ 2359 ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ.

English summary
Independence day Karnataka 2017: Chief Minister of Karnataka Siddaramaiah express anxiety about the rising communism in his Independence day speech at Manik Shaw Parade ground, Bengaluru on August 15, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X