ಬೆಂಗಳೂರು-ಕಲಬುರಗಿ ವಿಶೇಷ ರೈಲು; ವೇಳಾಪಟ್ಟಿ, ನಿಲ್ದಾಣಗಳು
ಬೆಂಗಳೂರು, ಆಗಸ್ಟ್ 11; ಸ್ವಾತಂತ್ರ್ಯ ದಿನಾಚರಣೆ 2023ರ ಸಲುವಾಗಿ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಬೆಂಗಳೂರು ಮತ್ತು ಕಲಬುರಗಿ ನಡುವೆ ಸಹ ವಿಶೇಷ ರೈಲು ಘೋಷಣೆ ಮಾಡಲಾಗಿದೆ.
ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ 2 ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಹೇಳಿದೆ.

ಬೆಂಗಳೂರು ಮತ್ತು ಕಲಬುರಗಿ ನಡುವೆ ರೈಲು ನಂಬರ್ 06201/ 06202 ಸಂಚಾರ ನಡೆಸಲಿದೆ. ಆಗಸ್ಟ್ 11 ಮತ್ತು 14 ರಂದು ಬೆಂಗಳೂರಿನಿಂದ ರೈಲು ಹೊರಡಲಿದೆ. ಆಗಸ್ಟ್ 12 ಮತ್ತು 15 ರಂದು ಕಲಬುರಗಿಯಿಂದ ರೈಲು ಹೊರಡಲಿದೆ.
ಈ ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
* ರೈಲು ಸಂಖ್ಯೆ 06201 ಆಗಸ್ಟ್ 11 ಮತ್ತು 14 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ರಾತ್ರಿ 10.25ಕ್ಕೆ ಹೊರಟು, ಮರುದಿನ ಬೆಳಗ್ಗೆ 9 ಗಂಟೆಗೆ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಯಲಹಂಕ (10:58/11:00PM), ಹಿಂದೂಪುರ (01:07/01:08AM), ಧರ್ಮಾವರಂ (2:05/2:10 AM), ಅನಂತಪುರ (2.43/2.45AM), ಗುಂತಕಲ್ (3:55/4:00AM), ಮಂತ್ರಾಲಯ ರೋಡ್ (5.29/5.30AM), ರಾಯಚೂರು (5.53/5.55AM) ಮತ್ತು ವಾಡಿ (8.25/8.30AM) ಈ ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ ಎಂದು ಪ್ರಕಟಣೆ ಹೇಳಿದೆ.
ರೈಲು ಸಂಖ್ಯೆ 06202 ಆಗಸ್ಟ್ 12 ಮತ್ತು 15 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ನಿಲ್ದಾಣದಿಂದ ಹೊರಟು, ಅದೇ ದಿನ ರಾತ್ರಿ 9:15 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ವಾಡಿ (10.25/10.30AM), ರಾಯಚೂರು (12.28/12.30PM), ಮಂತ್ರಾಲಯ ರೋಡ್ (12.58/01.00PM), ಗುಂತಕಲ್ (2:40/2:45PM),ಅನಂತಪುರ (3:49/3:50PM), ಧರ್ಮಾವರಂ (4:35/4:40PM), ಹಿಂದೂಪುರ (5:40/5:42PM) ಮತ್ತು ಯಲಹಂಕ (7:05/7:07PM) ಈ ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಈ ವಿಶೇಷ ರೈಲುಗಳು ಎಸಿ ಟು ಟ್ರೈಯರ್ 1, ಎಸಿ ತ್ರಿ ಟೈಯರ್ 1, ಸ್ಲೀಪರ್ ಕ್ಲಾಸ್ 8, ಸಾಮಾನ್ಯ ದ್ವಿತೀಯ ದರ್ಜೆ1, ಸಿಟ್ಟಿಂಗ್ ಚೇರ್ ಕಾರ್ 1 ಮತ್ತು ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು 2 ಸೇರಿದಂತೆ ಒಟ್ಟು 14 ಬೋಗಿ ಒಳಗೊಂಡಿದೆ.
ನೈಋತ್ಯ ರೈಲ್ವೆ ರೈಲುಗಳ ಸೇವೆಯ ಮಾರ್ಗ ಬದಲಾವಣೆ, ತಡವಾಗಿ ಪ್ರಾರಂಭವಾಗು ಕುರಿತು ಆದೇಶವೊಂದನ್ನು ಹೊರಡಿಸಿದೆ.
ಸಂತ್ರಗಚ್ಚಿ ನಿಲ್ದಾಣದ ಪಾದಾಚಾರಿ ಮೇಲ್ಸೆತುವೆ ಮತ್ತು ಹೌರಾ ಖರಗ್‌ಪುರ ವಿಭಾಗದ ಟಿಕಿಯಾಪರಾದ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಕೆಲವು ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತಿದೆ.
ರೈಲು ಮಾರ್ಗ ಬದಲಾವಣೆ. ಆಗಸ್ಟ್ 12 ರಂದು ಅಗರ್ತಲಾದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12504 ಅಗರ್ತಲಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಹಮ್ಸ್‌ಫರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಅಸನ್‌ಸೋಲ್ ಮತ್ತು ಮಿಡ್ರಾಪುರ್ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.
ರೈಲು ತಡವಾಗಿ ಪ್ರಾರಂಭ. ಆಗಸ್ಟ್ 13 ರಂದು ಹೌರಾದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12245 ಹೌರಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ದುರಂತೋ ಎಕ್ಸ್‌ಪ್ರೆಸ್ ರೈಲು ಮೂಲ ನಿಲ್ದಾಣದಿಂದ 7 ಗಂಟೆಗಳ ಕಾಲ ತಡವಾಗಿ ಪ್ರಾರಂಭವಾಗಲಿದೆ.












Click it and Unblock the Notifications