Bengaluru: ಬಾಡಿಗೆ ಮನೆಗಳಿಗೆ ಹೆಚ್ಚಿದ ಬೇಡಿಕೆ, ಕಡಿಮೆಯಾದ ಪೂರೈಕೆ, ಮನೆ ಮಾಲೀಕರ ದುರಾಸೆ- ಸಂಕಷ್ಟದಲ್ಲಿ ಬಾಡಿಗೆದಾರರು
ಬೆಂಗಳೂರು, ಏಪ್ರಿಲ್ 05: ಕೋವಿಡ್ ಸಮಯದಲ್ಲಿ ಮನೆಗೆ ತೆರಳಿದ್ದ ಟೆಕ್ಕಿಗಳು ಬೆಂಗಳೂರಿಗೆ ( Bengaluru ) ಮರಳುತ್ತಿದ್ದಾರೆ. ಇಷ್ಟು ದಿನ ವರ್ಕ್ ಫ್ರಂ ಹೋಮ್ ( Work From Home ) ಮಾಡುತ್ತಿದ್ದ ಎಂಜನಿಯರ್‌ಗಳಿಗೆ ಮತ್ತೆ ಕಚೇರಿಗಳಿಗೆ ಬರಲು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮನೆ ಅಥವಾ ಪ್ರಾಪರ್ಟಿಗಳ ಬಾಡಿಗೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಮನೆ ಬಾಡಿಗೆಗಳು ( Rent ) ಹೆಚ್ಚು ಕಮ್ಮಿ ದಪ್ಪಟ್ಟಾಗಿವೆ ಎಂಬ ಆತಂಕಕಾರಿ ಅಂಕಿಅಂಶಗಳು ಹೊರಬಿದ್ದಿವೆ.
'ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 20,000 ರೂಪಾಯಿ ಮೌಲ್ಯದ ಆಸ್ತಿಯನ್ನು 40,000 ರೂಪಾಯಿಗಳಿಗೆ ಬಾಡಿಗೆಗೆ ನೀಡುತ್ತಿರುವುದನ್ನು ನಾನು ನೋಡಿದ್ದೇನೆ' ಎಂದು ಹೆಸರು ಹೇಳಲು ಇಚ್ಛಿಸಿದ RERA- ಪರವಾನಗಿ ಪಡೆದ ಬ್ರೋಕರ್ ಒಬ್ಬರು 'ಡೆಕ್ಕನ್ ಹೆರಾಲ್ಡ್' ಗೆ ತಿಳಿಸಿದ್ದಾರೆ.

'ಇದು ಕೇವಲ ಒಂದು ಮನೆಗೆ ಸೀಮಿತವಾಗಿಲ್ಲ. ಇದರಲ್ಲಿ ಮನೆ ಮಾಲೀಕರ ದುರಾಸೆಯೂ ಅಡಗಿದೆ. ಇದರರ್ಥ ಆಸ್ತಿ ಅಥವಾ ಸುಧಾರಣೆ ಕಂಡುಬಂದಿದೆ ಅಂತಲ್ಲ. ಆದರೆ ಬೇಡಿಕೆ ಹೆಚ್ಚಿದೆ ಮತ್ತು ಭೂಮಾಲೀಕರು ಬಾಡಿಗೆಯನ್ನು ಹೆಚ್ಚಿಸುತ್ತಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ವೈಟ್‌ಫೀಲ್ಡ್‌ನ ಒಬ್ಬ ಮನೆ ಬಾಡಿಗೆದಾರರು ( ಹೆಸರು ಹೇಳಲು ಇಚ್ಛೆಪಟ್ಟಿಲ್ಲ ) ಇದನ್ನು ಒಪ್ಪಿಕೊಂಡಿದ್ದಾರೆ. ಅವರ ಎರಡು ವರ್ಷಗಳ ಬಾಡಿಗೆ ಒಪ್ಪಂದವು ಈ ವರ್ಷ ಮುಕ್ತಾಯಗೊಂಡಿದೆ. ಅವರು ತಮ್ಮ 1BHK ಮನೆಗೆ 14,000 ರೂ.ಗಳಿಂದ 22,000 ರೂ.ಗೆ ಬಾಡಿಗೆಗೆ ಶೇ 57ರಷ್ಟು ಹೆಚ್ಚಳವನ್ನು ಎದುರಿಸಿದ್ದಾರೆ. ಅದನ್ನು ಭರಿಸಲಾಗದೆ, ಅವರು ಆ ಪ್ರದೇಶದಲ್ಲಿ ಬೇರೆಡೆ ಆಶ್ರಯ ಪಡೆಯಲು ಮಂದಾಗಿದ್ದಾಗಿ ಹೇಳಿದ್ದಾರೆ.
'ಕಳೆದ ವರ್ಷದಿಂದ ಹೆಚ್ಚಿನ ಬಾಡಿಗೆ ಪಾವತಿಸುತ್ತಿರುವ ಜನರು ಈ ವರ್ಷ ಹೆಚ್ಚಿನ ಬಾಡಿಗೆ ಹೊರೆಯನ್ನು ( 30-40% ) ಅನುಭವಿಸುತ್ತಿಲ್ಲ' ಎಂದು ಪ್ರಾಪ್‌ಟೆಕ್ ಸಂಸ್ಥೆಯ ನೋಬ್ರೋಕರ್‌ನ ಸಹ-ಸಂಸ್ಥಾಪಕ ಸೌರಭ್ ಗಾರ್ಗ್ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕವು ಬೆಂಗಳೂರಿನಲ್ಲಿ ಬೇಡಿಕೆ ಹಾಗೂ ಪೂರೈಕೆಗಳ ವ್ಯತ್ಯಾಸವನ್ನು ಉಲ್ಬಣಗೊಳಿಸಿದೆ. ಏಕೆಂದರೆ ನಿರ್ಮಾಣ ಹಾಗೂ ಸಂಚಾರದ ಮೇಲೆ ಕೋವಿಡ್ ಪರಿಣಾಮ ಬೀರಿತು. ಇದು ಆರು ಅಥವಾ ಎಂಟು ತಿಂಗಳುಗಳವರೆಗೆ ನಿರ್ಮಾಣ ಚಕ್ರಗಳನ್ನು ತೊಂದರೆಗೊಳಿಸಿತು. ಮತ್ತೊಂದೆಡೆ, ಕಂಪನಿಗಳು ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆಯುತ್ತಿದ್ದಾರೆ. ಬಾಡಿಗೆ ವಸತಿಗಾಗಿ ಬೇಡಿಕೆ ಬೆಳೆಯುತ್ತಲೇ ಇದೆ. ಇದರಿಂದ ಭೂಮಾಲೀಕರು ಮೇಲುಗೈ ಸಾಧಿಸಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಐದು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಬೇಡಿಕೆಯು ಪೂರೈಕೆಗಿಂತ ಮುಂದಿದೆ ಎಂದು ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾದಲ್ಲಿ ಸಂಶೋಧನೆಯ ಮುಖ್ಯಸ್ಥರಾಗಿರುವ ವಿವೇಕ್ ರಾಠಿ ಹೇಳಿದರು.
'ಬೆಂಗಳೂರಿನಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಇದು ಪೂರೈಕೆಗೆ ಹೊಂದಾಣಿಕೆ ಆಗುತ್ತಿಲ್ಲ. ಅದಕ್ಕಾಗಿಯೇ ಇಲ್ಲಿಯೂ ಅತಿ ಹೆಚ್ಚು ಬಾಡಿಗೆ ಏರಿಕೆ ಕಂಡಿದೆ. ಈಗ, ಕಚೇರಿಗಳು ತೆರೆದುಕೊಳ್ಳುವುದರೊಂದಿಗೆ, ಜನರು ಹೆಚ್ಚಿನ ಬಾಡಿಗೆ ಬೇಡಿಕೆಯನ್ನು ಇಡುತ್ತಿದ್ದಾರೆ. ಆದರೆ ಪೂರೈಕೆಯನ್ನು ಸಾಧಿಸಲಾಗುತ್ತಿಲ್ಲ' ಎಂದು ಗಾರ್ಗ್ ತಿಳಿಸಿದ್ದಾರೆ.

'ಆನ್‌ಲೈನ್ ಬ್ರೋಕರೇಜ್ ಪ್ಲಾಟ್ ಫಾರ್ಮ್‌ಗಳಲ್ಲಿ ಪಟ್ಟಿ ಮಾಡಿದ ಒಂದು ಅಥವಾ ಎರಡು ದಿನಗಳಲ್ಲಿ ನಾನು ನೋಡಲು ಹೋದ ಆಸ್ತಿಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಆಸ್ತಿಯನ್ನು ಬಾಡಿಗೆಗೆ ನೀಡಲು ನಾನು ಹೆಚ್ಚಿನ ಹಣವನ್ನು ಪಾವತಿಸಬೇಕೆಂದು ಭೂಮಾಲೀಕರು ಬಹಿರಂಗವಾಗಿ ಪ್ರಸ್ತಾಪಿಸಿದರು' ಎಂದು ಕಳೆದ ತಿಂಗಳು ನಗರಕ್ಕೆ ಬಂದಿರುವ ಮುಂಬೈನ ಮೂಲದ ಎಂಜಿನಿಯರ್ ಹರ್ಷ್ ವಿತ್ರಾ ತಿಳಿಸಿದ್ದಾರೆ.












Click it and Unblock the Notifications