ಯಶವಂತಪುರ ಜೆಡಿಎಸ್‌ಗೆ ಮುನ್ನಡೆ, ಜಗ್ಗೇಶ್‌ಗೆ ಮೂರನೇ ಸ್ಥಾನ
ಬೆಂಗಳೂರು, ಮೇ 15: ನರೇಂದ್ರ ಮೋದಿ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳಲ್ಲೊಬ್ಬರಾಗಿರುವ ಜಗ್ಗೆಶ್ ಅವರು ಈ ಬಾರಿ ಮೂರನೇ ಸ್ಥಾನ ಪಡೆಯುವ ಎಲ್ಲ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.
ಜಗ್ಗೆಶ್ ಸ್ಪರ್ಧಿಸಿದ್ದ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜಯರವಿ ಗೌಡ 6370 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ.
ಜಗ್ಗೆಶ್ ಅವರಿಗೆ ಕೊನೆಯ ಗಳಿಗೆಯಲ್ಲಿ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಟಿಕೆಟ್ ಸಿಕ್ಕು ಸ್ಪರ್ಧೆ ನಡೆಸಿದ್ದರು. ಈ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ದೊರಕುತ್ತದೆ ಎನ್ನಲಾಗಿತ್ತು ಆದರೆ ಹೈಕಮಾಂಡ್ ಜಗ್ಗೇಶ್‌ಗೆ ಮಣೆ ಹಾಕಿತ್ತು. ಆದರೆ ಈಗ ಅವರು ಮೂರನೇ ಸ್ಥಾನದಲ್ಲಿ ತೆವಳುತ್ತಿದ್ದಾರೆ.













Click it and Unblock the Notifications