ಮುನ್ನೋಟ: ಡಿಜಿಟಲ್ ಜಗತ್ತಿನಲ್ಲಿ ಕನ್ನಡ ನಿನ್ನೆ, ಇಂದು ಮತ್ತು ನಾಳೆ
ಬೆಂಗಳೂರು, ನವೆಂಬರ್ 5: ಮುನ್ನೋಟವು 'ಡಿಜಿಟಲ್ ಜಗತ್ತಿನಲ್ಲಿ ಕನ್ನಡ, ನಿನ್ನೆ, ಇಂದು ಮತ್ತು ನಾಳೆ' ಎನ್ನುವ ವಿಚಾರ ಸಂಕಿರಣವನ್ನು ನವೆಂಬರ್ 10ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಿದೆ.
ಮುನ್ನೋಟವು 'ಅರಿಮೆ' ಎನ್ನುವ ಶೀರ್ಷಿಕೆಯಡಿ ಚರ್ಚೆ ನಡೆಸುತ್ತಿದೆ.ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಚೆನ್ನಾಗಿ ಕಾಣಿಸಲು, ಕೇಳಿಸಲು ಆಗಬೇಕಿರುವ ಕೆಲಸಗಳೇನು?
ಮೊಬೈಲ್/ಕಂಪ್ಯೂಟರ್ ಅಲ್ಲಿ ಕನ್ನಡದಲ್ಲಿ ಬರೆಯಲು, ಓದಲು ಆದರೆ ಸಾಕಾ? ಟೆಕ್ ಜಗತ್ತಿನಲ್ಲಿ ಕನ್ನಡದ ಸುತ್ತ ಮಾಡಬೇಕಿರುವ ಹಲವಾರು ಕೆಲಸಗಳನ್ನು ನಿಮಗೆ ಪರಿಚಯಿಸಲಿದ್ದಾರೆ ಸಂಚಿ ಫೌಂಡೇಶನ್ ನ ಓಂಶಿವಪ್ರಕಾಶ್ ಅವರು.
ವಿಕಿಪಿಡಿಯಾ, ವಿಕ್ಷನರಿ, ಕನ್ನಡದ ಫಾಂಟ್ಸ್, ಕನ್ನಡ ಪುಸ್ತಕಗಳ ಡಿಜಿಟಲಿಸುವಿಕೆ, ಕನ್ನಡದ ಓ.ಸಿ.ಆರ್, ಕನ್ನಡದಲ್ಲಿ ಹೊಸ ಹೊಸ ಟೆಕ್ನಾಲಜಿ ಹೀಗೆ ಎಲ್ಲದರ ಮೇಲೂ ಬೆಳಕು ಚೆಲ್ಲಲ್ಲಿದ್ದಾರೆ. ಕನ್ನಡದ ಸುತ್ತ ಈ ತರದ ಕೆಲಸಗಳನ್ನೆಲ್ಲ ಮಾಡಬೇಕು ಅನ್ನುವವರಿಗೆ ಒಂದು ಒಳ್ಳೆಯ ದಾರಿ ತೋರುವಂತಹ ಮಾತುಕತೆ ಇದಾಗಲಿದೆ.
ಸ್ಥಳ: ಮುನ್ನೋಟ, #67, ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು.

ಕನ್ನಡ ಎಲ್ಲೆಡೆ ಕಾಣಿಸಬೇಕು, ಕೇಳಿಸಬೇಕು ಅಂದರೆ ಅದರ ಬಳಕೆಯ ವ್ಯಾಪ್ತಿ ಹಿಗ್ಗಬೇಕು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಕನ್ನಡ ಡಿಜಿಟಲ್ ಜಗತ್ತಿನಲ್ಲೂ ಎಲ್ಲೆಡೆ ಕಾಣಿಸುವುದು ಬಹಳ ಮುಖ್ಯ. ಮೊಬೈಲ್, ಕಂಪ್ಯೂಟರುಗಳಲ್ಲಿ ಕನ್ನಡದಲ್ಲಿ ಓದುವ, ಬರೆಯುವ ಸಾಧ್ಯತೆಗಳು ಈಗ ಸಲೀಸಾಗಿದೆ, ಆದರೆ ಇಷ್ಟು ಸಾಕೇ?.












Click it and Unblock the Notifications