ಲಾಕ್ ಡೌನ್; ಬೆರಗುಗೊಳಿಸುವ ಬೆಂಗಳೂರಿನ ಚಿತ್ರಗಳು

ಬೆಂಗಳೂರು, ಏಪ್ರಿಲ್ 21 : ಉದ್ಯಾನ ನಗರಿ, ರಾಜ್ಯದ ರಾಜಧಾನಿ ಬೆಂಗಳೂರು. ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬೆಂಗಳೂರು ನಗರದ ಚಿತ್ರಣವೇ ಬದಲಾಗಿದೆ. ಮಾಲಿನ್ಯ ಕಡಿಮೆಯಾಗಿದೆ. ಟ್ರಾಫಿಕ್ ಕಿರಿ-ಕಿರಿ ತಪ್ಪಿದೆ.

Recommended Video

      ಪಾದರಾಯನಪುರ ಘಟನೆ ಸಹಿಸೋದಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು | Ramesh Kumar | Oneindia Kannada

      ಬೆಂಗಳೂರು ನಗರದ ಪ್ರಸ್ತುತ ಸ್ಥಿತಿಯ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಗರದಲ್ಲಿಯೇ ಹುಟ್ಟಿ ಬೆಳೆದವರು ಹಿಂದಿನ ಬೆಂಗಳೂರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

      ಎಷ್ಟು ಸಮಸ್ಯೆಗಳಿದ್ದೂ ಬೆಂಗಳೂರು ಎಂದರೆ ಹಲವು ಜನರಿಗೆ ವಿಶೇಷ ಪ್ರೀತಿ. ಕೋಟ್ಯಾಂತರ ಜನರಿಗೆ ಉದ್ಯೋಗ ನೀಡಿದ ಊರು ಇದು. ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರು ಹೇಗಿದೆ? ಎಂದು ನೋಡಿಕೊಂಡು ಬರಲು ಹೊರಡಬೇಡಿ. ಮನೆಯಲ್ಲಿಯೇ ಇರಿ.

      ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದಿರುವ ಬೆಂಗಳೂರು ನಗರದ ಪ್ರಸ್ತುತ ಸ್ಥಿತಿಯ ಚಿತ್ರಗಳು ಇಲ್ಲಿವೆ. ಈ ಸ್ಥಳಗಳನ್ನು ನೀವು ಗುರುತು ಹಿಡಿಯಬಹುದು. ಜನರು, ವಾಹನ ಸಂಚಾರ ವಿಲ್ಲದಿದ್ದರೆ ಎಷ್ಟು ಚೆನ್ನಾಗಿದೆ ಎಂದು ಅನಿಸುತ್ತದೆ. ಒಮ್ಮೆ ಈ ಚಿತ್ರಗಳನ್ನು ನೀವು ನೋಡಿ.

      ವಿಮಾನ ನಿಲ್ದಾಣ

      ವಿಮಾನ ನಿಲ್ದಾಣ

      ಪ್ರತಿನಿತ್ಯ ಲಕ್ಷಾಂತರ ಜನರು ಬಂದು ಹೋಗುವ ಬೆಂಗಳೂರಿನ ವಿಮಾನ ನಿಲ್ದಾಣ ಬಿಕೋ ಅನ್ನುತ್ತಿದೆ. ಲಾಕ್ ಡೌನ್ ಪರಿಣಾಮ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸೇವೆ ರದ್ದಾಗಿದೆ. ವಿಮಾನ ನಿಲ್ದಾಣ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

      ಪಾರಿವಾಳಗಳಿಗೆ ಆಹಾರ

      ಪಾರಿವಾಳಗಳಿಗೆ ಆಹಾರ

      ವ್ಯಕ್ತಿಯೊಬ್ಬ ಪಾರಿವಾಳಗಳಿಗೆ ಆಹಾರ ತಿನ್ನುಸುವಾಗ ಕಂಡು ಬಂದಿದ್ದು ಹೀಗೆ. ಬೇಸಿಗೆಯಲ್ಲಿ ಹಕ್ಕಿಗಳಿಗೆ ಆಹಾರ, ನೀರು ಅಗತ್ಯವಾಗಿದೆ. ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ.

      ಮನೆಗೆ ಬರಲಿದೆ ಕೊರೊನಾ

      ಮನೆಗೆ ಬರಲಿದೆ ಕೊರೊನಾ

      ಮನೆಯಲ್ಲಿಯೇ ಇರಿ, ಅನಾವಶ್ಯಕವಾಗಿ ಹೊರ ಬರಬೇಡಿ ಎಂದು ತಿಳಿಸಲು ವಿಜಯನಗರದಲ್ಲಿ ಬರೆದಿರುವ ಚಿತ್ರವಿದು. ಜನರಿಗೆ ಅರಿವು ಮೂಡಿಸಲು ಪೊಲೀಸರು ಮಾಡಿರುವ ಕಾರ್ಯವಿದು.

      ಮೆಜೆಸ್ಟಿಕ್ ಹೇಗಿದೆ?

      ಮೆಜೆಸ್ಟಿಕ್ ಹೇಗಿದೆ?

      ಪ್ರತಿದಿನ ಸಾವಿರಾರು ಬಸ್, ಲಕ್ಷಾಂತರ ಜನರು ಬಂದು ಹೋಗುವ ಬೆಂಗಳೂರು ನಗರದ ಹೃದಯ ಭಾಗ ಮೆಜೆಸ್ಟಿಕ್ ಲಾಕ್ ಡೌನ್ ಸಂದರ್ಭದಲ್ಲಿ ಹೇಗಿದೆ ನೋಡಿ. ಮೆಜೆಸ್ಟಿಕ್‌ನ ಇಂತಹ ಚಿತ್ರಣವನ್ನು ಜನರು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ.

      ಇಸ್ಕಾನ್, ಮೆಟ್ರೋ

      ಇಸ್ಕಾನ್, ಮೆಟ್ರೋ

      ಇಸ್ಕಾನ್ ಟೆಂಪಲ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಲ್ಲಿ ಒಂದು. ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾದ ಮೇಲೆ ಇದರ ಅಂದ ಇನ್ನಷ್ಟು ಹೆಚ್ಚಿದೆ. ಕ್ಯಾಮರಾ ಕಣ್ಣಲ್ಲಿ ಇಸ್ಕಾನ್ ಕಂಡಿದ್ದು ಹೀಗೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+