ವೈಟ್‌ಫೀಲ್ಡ್ ಮಾರ್ಗದ 6 ನಿಲ್ದಾಣ ಪರಿಶೀಲಿಸಿದ ಮೆಟ್ರೋ ಅಧಿಕಾರಿಗಳು- ಯಾವ ನಿಲ್ದಾಣ? ಏನೇನು ತಪಾಸಣೆ? ತಿಳಿಯಿರಿ

ವೈಟ್‌ಫೀಲ್ಡ್‌ನಿಂದ ಕೆಆರ್‌ ಪುರಂವರೆಗಿನ 13.71 ಕಿ.ಮೀ ಉದ್ದದ (ಪರ್ಪಲ್‌ ಲೈನ್‌) ಮಾರ್ಗದಲ್ಲಿರುವ 6 ನಿಲ್ದಾಣಗಳ ತಪಾಸಣೆಯನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಬುಧವಾರ ಮಾಡಿದ್ದಾರೆ. ಯಾವ ಮಾರ್ಗಗಳು ತಿಳಿಯಿರಿ

ಬೆಂಗಳೂರು, ಫೆಬ್ರವರಿ 23: ವೈಟ್‌ಫೀಲ್ಡ್‌ನಿಂದ ಕೆಆರ್‌ ಪುರಂವರೆಗಿನ 13.71 ಕಿ.ಮೀ ಉದ್ದದ (ಪರ್ಪಲ್‌ ಲೈನ್‌) ಮಾರ್ಗದಲ್ಲಿರುವ 6 ನಿಲ್ದಾಣಗಳ ತಪಾಸಣೆಯನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಬುಧವಾರ ಮಾಡಿದ್ದಾರೆ. ಈ ಮಾರ್ಗದಲ್ಲಿರುವ ಒಟ್ಟು 12 ನಿಲ್ದಾಣಗಳ ಪೈಕಿ ಒಟ್ಟು ಆರು ನಿಲ್ದಾಣಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಹಳಿಗಳ ಉದ್ದಕ್ಕೂ 'ತಪಾಸಣಾ ಟ್ರಾಲಿ'ಯನ್ನು ಬಳಸುವುದರೊಂದಿಗೆ ಬೆಳಿಗ್ಗೆ 10 ಗಂಟೆಗೆ ತಪಾಸಣೆ ಪ್ರಾರಂಭವಾಯಿತು. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ (ಅಥವಾ ಐಟಿಪಿಎಲ್), ಸದರಮಂಗಲ ಮತ್ತು ನಲ್ಲೂರಹಳ್ಳಿ (ಹಿಂದೆ ವೈದೇಹಿ ಆಸ್ಪತ್ರೆ) ನಿಲ್ದಾಣಗಳನ್ನು ಪರಿಶೀಲಿಸಲಾಯಿತು.

In Bengaluru, safety inspection of Namma Metro’s KR Puram-Whitefield stretch begins

'The New Indian Express'ಗೆ ಮಾಹಿತಿ ನೀಡಿರುವ ಮೆಟ್ರೋ ಅಧಿಕಾರಿಯೊಬ್ಬರು, 'ಹಳಿ, ಮೂರನೇ ರೈಲು ವ್ಯವಸ್ಥೆ, ಲಿಫ್ಟ್‌ನ ಕಾರ್ಯನಿರ್ವಹಣೆ, ಎಸ್ಕಲೇಟರ್‌ಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ದಿನವಿಡೀ ಪರಿಶೀಲಿಸಲಾಯಿತು. ನಿಲ್ದಾಣದಲ್ಲಿ ಲಭ್ಯವಿರುವ ಪ್ರಯಾಣಿಕರ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಸಹ ಪರಿಶೀಲಿಸಲಾಯಿತು' ಎಂದು ತಿಳಿಸಿದ್ದಾರೆ.

'ಚಟುವಟಿಕೆಗಳ ಸುರಕ್ಷತೆಯ ಅಂಶವನ್ನು ಮಾರ್ಗದ ವಿಸ್ತಾರದ ಉದ್ದಕ್ಕೂ ಪರಿಶೀಲಿಸಲಾಗಿದೆ. ಹಳಿಗಳ ಉದ್ದಕ್ಕೂ ಇರುವ ಬೇರಿಂಗ್‌ಗಳನ್ನು ತಂಡವು ಇಂದು (ಬುಧವಾರ) ರಾತ್ರಿ ಅಥವಾ ಗುರುವಾರ ರಾತ್ರಿ ಪರಿಶೀಲಿಸುತ್ತದೆ' ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಮೂರು ದಿನಗಳ ಕಾಲ (ಫೆಬ್ರವರಿ 24ರವರೆಗೆ) ತಪಾಸಣೆ ನಡೆಯಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 'ಹೈ-ಸ್ಪೀಡ್ ರೋಲಿಂಗ್ ಸ್ಟಾಕ್ ಪರೀಕ್ಷೆಗಳು ತಪಾಸಣೆಯನ್ನು ಮುಕ್ತಾಯಗೊಳಿಸುತ್ತವೆ' ಎಂದು ಅವರು ಹೇಳಿದರು.

In Bengaluru, safety inspection of Namma Metro’s KR Puram-Whitefield stretch begins

ಸಿಎಂಆರ್‌ಎಸ್ ಅನುಮತಿ ದೊರೆತರೆ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಮಾರ್ಗವು ಮಾರ್ಚ್ 15ರ ನಂತರ ಕಾರ್ಯಾಚರಣೆ ಆರಂಭಿಸಲಿದೆ. ನಾಲ್ಕೈದು ದಿನಗಳ ಬಳಿಕ ಆಯುಕ್ತ ಎಕೆ ರೈ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೆಆರ್ ಪುರಂ-ವೈಟ್‌ಫೀಲ್ಡ್ ಮಾರ್ಗದ ಕಾಮಗಾರಿಯನ್ನು ಪರಿಶೀಲಿಸಲು ರೈ ಅವರನ್ನು ಆಹ್ವಾನಿಸಿದ್ದು, ಮಾರ್ಚ್‌ನಲ್ಲಿ ಅದನ್ನು ತೆರೆಯುವ ನಿರೀಕ್ಷೆಯಿದೆ ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.

'ತಪಾಸಣೆಯು ಟ್ರ್ಯಾಕ್‌ಗಳನ್ನು ಪರಿಶೀಲಿಸುವುದು, ನಿಲ್ದಾಣದ ಸುರಕ್ಷತೆ, ಸಿಗ್ನಲಿಂಗ್ ಮತ್ತು ವಿದ್ಯುತ್ ಸ್ಥಾಪನೆಯನ್ನು ಒಳಗೊಂಡಿದೆ. ನಾವು ಮೆಟ್ರೋ ರೈಲು ಸುರಕ್ಷತಾ ಆಯೋಗಕ್ಕೆ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ' ಎಂದು ಪರ್ವೇಜ್ ತಿಳಿಸಿದ್ದಾರೆ.

ಕೆಆರ್ ಪುರಂ-ವೈಟ್‌ಫೀಲ್ಡ್ ಮಾರ್ಗವು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ 1 ನೇ ಹಂತದ ಕಾಮಗಾರಿಯ ಭಾಗವಾಗಿದ್ದರೆ, ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವಿನ 2 ನೇ ಹಂತದ ಕಾಮಗಾರಿಯು ಜೂನ್‌ನಲ್ಲಿ ಮಾತ್ರ ಪ್ರಾರಂಭವಾಗಲಿದೆ.

'ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮಾರ್ಗವು ಪೂರ್ಣಗೊಳ್ಳುವವರೆಗೆ, ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ಆಚೆಗೆ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ನಾವು ಕೆಆರ್ ಪುರಂನಿಂದ ಬೈಯಪ್ಪನಹಳ್ಳಿಗೆ ಬಿಎಂಟಿಸಿ ಫೀಡರ್ ಬಸ್‌ಗಳನ್ನು ವ್ಯವಸ್ಥೆ ಮಾಡುತ್ತೇವೆ' ಎಂದು ಪರ್ವೇಜ್ ಹೇಳಿದ್ದಾರೆ.

ಕೆ ಆರ್ ಪುರಂ- ವೈಟ್‌ಫೀಲ್ಡ್ ಮಾರ್ಗವು ಎರಡು ಪಾಯಿಂಟ್‌ಗಳ ನಡುವಿನ ಪ್ರಯಾಣದ ಸಮಯವನ್ನು ಒಂದು ಗಂಟೆಯಿಂದ 24 ನಿಮಿಷಗಳಿಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ವಿಸ್ತರಣೆಯು 12 ನಿಲ್ದಾಣಗಳನ್ನು ಒಳಗೊಂಡಿದೆ ಮತ್ತು ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಐಟಿಪಿಎಲ್ ಕ್ಯಾಂಪಸ್‌ಗೆ ನೇರ ವಾಕ್‌ವೇ ಪ್ರವೇಶವನ್ನು ಹೊಂದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+