IMD Weather Forecast: ಚಂಡಮಾರುತ ಪ್ರಸರಣ ಎಫೆಕ್ಟ್, ಈ ಭಾಗಗಳಲ್ಲಿ 3 ದಿನ ವರುಣಾರ್ಭಟ
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯಗಳು ಮುಂದುವರಿದಿವೆ. ಪರಿಣಾಮವಾಗಿ ಒಣಹವೆ ನಡುವೆಯು ವಿವಿಧ ರಾಜ್ಯಗಳ ಹಲವು ಪ್ರದೇಶಗಳಲ್ಲಿ ಮುಂದಿನ ಮೂರು ಗುಡಗು, ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಒಂದಷ್ಟು ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 12 ಸೋಮವಾರ ಮುಂಬೈ ದಕ್ಷಿಣ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಜೋರು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ಕೊಟ್ಟಿದೆ.
ಮಹಾರಾಷ್ಟ್ರ ರಾಜ್ಯದ ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಸಿಗಾಳಿಯ ಪರಿಸ್ಥಿತಿ ಮುಂದುವರಿಯಲಿದೆ. ಇತ್ತ ದೆಹಲಿಯಲ್ಲೂ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಇಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜೋರು ಮಳೆ ನಿರೀಕ್ಷೆ ಇದೆ. ಈ ಮೂಲಕ ಬಿಸಿಲಿಗೆ ಕಂಗಾಲಾಗಿದ್ದ ಜನರಿಗೆ ಒಂದಷ್ಟು ಮಳೆ ತಂಪೆರೆಯಲಿದೆ.

ಚಂಡಮಾರುತದ ಪರಿಚಲನೆ ಪ್ರಭಾವ, ಮಳೆ ಎಚ್ಚರಿಕೆ
ಪಶ್ಚಿಮ ಘಟ್ಟಗಳ ಸಾಲಿನಿಂದ ಬೀಸುವ ಗಾಳಿ ಹಾಗೂ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಚಲನೆಯಿಂದಾಗಿ ದೆಹಲಿಯಲ್ಲಿ ಸೋಮವಾರ ಮಾತ್ರವಲ್ಲದೇ ಮುಂದಿನ ಕೆಲವು ದಿನ ಮಳೆಯು ಸಕ್ರಿಯವಾಗಬಹುದು. ಈ ಮಳೆ ಅಕ್ಕ ಪಕ್ಕದ ರಾಜ್ಯಗಳಿಗೂ ವಿಸ್ತರಿಸುವ ನಿರೀಕ್ಷೆ ಇದೆ. ಇನ್ನೂ ಮಹಾರಾಷ್ಟ್ರ ಕರಾವಳಿ ಭಾಗದ ಪ್ರತ್ಯೇಕ ಕಡೆಗಳಲ್ಲಿ ಶಾಖದ ಅಲೆ (Heat Wave) ಎಚ್ಚರಿಕೆ ಸಹ ನೀಡಲಾಗಿದೆ. ಉತ್ತರ ಕೊಂಕಣದ ಕೆಲವು ಸ್ಥಳಗಳಲ್ಲಿ ಬಿಸಿ ಮತ್ತು ಆರ್ದ್ರತೆ ಹೆಚ್ಚಿರಲಿದೆ. ಒಟ್ಟಾರೆ ಮಹಾರಾಷ್ಟ್ರಕ್ಕೆ ಪ್ರತಿಕೂಲ ಸ್ಥಿತಿ, ಭಾರೀ ಮಳೆಯ ಎಚ್ಚರಿಕೆ ಇಲ್ಲ. ಮುಂಬೈ ಸೇರಿ ಕೆಲವೆಡೆ ಮಳೆ ಆಗಬಹುದು ಎಂದು ವರದಿ ತಿಳಿಸಿದೆ.
ದಸರಾ ವೇಳೆ ಗುಡುಗು, ಮಿಂಚು ಮಳೆ
ಪಶ್ಚಿಮ ಬಂಗಾಳದಲ್ಲಿ ದಸರಾ ಹಿನ್ನೆಲೆಯಲ್ಲಿ ಐದು ದಿನಗಳ ಅದ್ಧೂರಿ ದುರ್ಗಾ ಪೂಜಾ ನಡೆಯಲಿದೆ. ಇದೇ ವೇಳೆ ಕೋಲ್ಕತ್ತಾ ನಗರ ಸೇರಿದಂತೆ ದಕ್ಷಿಣ ಬಂಗಾಳದ ಪ್ರದೇಶಗಳಲ್ಲಿ ಅಕ್ಟೋಬರ್ 15 ಮತ್ತು 17 ರವರೆಗೆ ಮೂರು ದಿನ ಮಳೆ ಸುರಿಯುವ ಸಂಭವವಿದೆ. ನಂತರ ಎರಡು ದಿನ ಗುಡುಗು ಸಹಿತ ಸಾಮಾನ್ಯ ಮಳೆ ಆಗಲಿದೆ. ಅಕ್ಟೋಬರ್ 20 'ನವಮಿ' ಮತ್ತು 21ರ ದಶಮಿಯಂದು ಪಶ್ಚಿಮ ಬಂಗಾಳದಲ್ಲಿ ಮತ್ತೆ ಒಣಹವೆ ಸೃಷ್ಟಿಯಾಗಲಿದೆ ಎಂದು ಹವಾಮಾನ ತಜ್ಞರು ಊಹಿಸಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲವಾಗುವ ಮುಖೇನ ತನ್ನ ಅಸ್ತಿತ್ವ ಕೊನೆಗೊಳಿಸಲಿದೆ. ಇಲ್ಲಿ ಹಿಂಗಾರು ಮಳೆ ಸಕ್ರಿಯವಾಗಲು ಕೆಲವು ದಿನಗಳ ಸಮಯ ಹಿಡಿಯಲಿದೆ. ಸದ್ಯ ರಾಜ್ಯದಲ್ಲಿ ಶೇಕಡಾ 2 ರಷ್ಟು ಮಳೆಯ ಕೊರತೆ ಉಂಟಾಗಿದೆ. ಇಲ್ಲಿನ ಪಲಾಮು, ಲತೇಹರ್, ಲೋಹರ್ದಗಾ, ರಾಂಚಿ, ಹಜಾರಿಬಾಗ್ ಸೇರಿದಂತೆ ವಾಯುವ್ಯ ಜಿಲ್ಲೆಗಳುಲ್ಲಿ ಈಗಾಗಲೇ ಮುಂಗಾರು ಅಂತ್ಯಗೊಂಡಿದೆ ಎಂದು ಐಎಂಡಿ ತಿಳಿಸಿದೆ.
ಯುಪಿ ಸೇರಿ ವಿವಿಧ ರಾಜ್ಯಗಳಲ್ಲಿ ಮಳೆ ಮುನ್ನೆಚ್ಚರಿಕೆ
ಉತ್ತರ ಪ್ರದೇಶದಲ್ಲಿ ಭಾರೀ ಮಳೆ ಮುನ್ಸೂಚನೆ ಇಲ್ಲದಿದ್ದರೂ ತಂಪು ವಾತಾವರಣ, ಮಬ್ಬು ಕವಿದ ಆಕಾಶ ಕಂಡು ಬರಲಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಅಕ್ಟೋಬರ್ 12ರಂದು ಮಂಗಳವಾರದಿಂದ 2-3 ದಿನ ಗಂಟೆಗೆ 30-40 ಕಿ.ಮೀ ವೇಗ ಗಾಳಿ, ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಸ್ಸಾಂ, ಮೇಘಾಲಯ,
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಅಕ್ಟೋಬರ್ 12 ಮತ್ತು 14 ರ ವ್ಯಾಪಕ ಮಳೆ ನಿರೀಕ್ಷೆ ಇದೆ.
ದಕ್ಷಿಣ ಭಾರತದ ಹವಾಮಾನ ಮುನ್ಸೂಚನೆ
ಕರ್ನಾಟಕದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ , ತಮಿಳುನಾಡು, ಪುದುಚೇರಿ, ಕರಾವಳಿ ಆಂಧ್ರಪ್ರದೇಶ, ಯಾನಂ ಅಕ್ಟೋಬರ್ 12 ಮತ್ತು 14 ರ ನಡುವೆ ಅಲ್ಲಲ್ಲಿ ಮಳೆಯಾಗಲಿದೆ. ಇಲ್ಲಿ ಕೂಡ ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಾತ್ರ ಮೂರು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಸಾಧ್ಯತೆ ಇದೆ.


Click it and Unblock the Notifications
