ಬೆಂಗಳೂರಿನಲ್ಲಿ 71 ಕೋಟಿ ಅಕ್ರಮ ಟರ್ಕಿ ಕರೆನ್ಸಿ ಪತ್ತೆ

ಬೆಂಗಳೂರು, ಜೂನ್ 21: ನಗರದ ಮಾರತ್ ಹಳ್ಳಿ ಪೊಲೀಸರು 5,00,000 ಮುಖಬೆಲೆಯ 78 ಟರ್ಕಿ ಲಿರಾ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನಾಗರಾಜ್, ಅರವಿಂದ್, ಮುರಳಿ ಮತ್ತು ಶಿವರಾಜ್ ಎಂಬವರನ್ನು ಬಂಧಿಸಿದ್ದಾರೆ.

ಇವರ ಬಳಿಯಲ್ಲಿ 5,00,000 ಮುಖಬೆಲೆಯ 78 ಲಿರಾ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಜತೆಗೆ ಪಿಸ್ತೂಲ್ ಕೂಡಾ ಸಿಕ್ಕಿದೆ. ಭಾರತೀಯ ರೂಪಾಯಿಗಳಲ್ಲಿ ಇವುಗಳ ಪ್ರತಿ ನೋಟಿನ ಬೆಲೆ 91 ಲಕ್ಷ ರೂಪಾಯಿಗಳಾಗಿದ್ದು ಒಟ್ಟು ಮೌಲ್ಯ 71 ಕೋಟಿ ರೂಪಾಯಿಗಳಾಗಿವೆ (1 ಟರ್ಕಿ ಲಿರಾ ಭಾರತದ 18.24 ರೂಪಾಯಿಗಳಿಗೆ ಸಮ).

Illegally transported Turkish currency worth Rs 71 crore seized in Bengaluru

ಮೂಲಗಳ ಪ್ರಕಾರ 5,00,000 ಮುಖಬೆಲೆಯ ಲಿರಾ ಕರೆನ್ಸಿಗಳನ್ನು ನಿಷೇಧಿಸಲಾಗಿದ್ದು ಈ ತಂಡ ಅಕ್ರಮವಾಗಿ ಈ ಹಣ ಸಾಗಣೆ ಮಾಡಿದೆ ಎನ್ನಲಾಗಿದೆ. ಈ ತಂಡಕ್ಕೊಬ್ಬ ಮಾಸ್ಟರ್ ಮೈಂಡ್ ಇದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Illegally transported Turkish currency worth Rs 71 crore seized in Bengaluru

ಈ ಪ್ರಕರಣದ ಮಾಸ್ಟರ್ ಮೈಂಡ್ ಆಂಧ್ರ ಪ್ರದೇಶ ಮೂಲದ ಚಿನ್ನಾ ರೆಡ್ಡಿ ಎಂದು ಗುರುತಿಸಲಾಗಿದ್ದು ಆತ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+