ಪ್ರವಾಸದ ವೇಳೆ ಗುರುತಿನ ಕಾರ್ಡ್ ತರುವುದು ಕಡ್ಡಾಯ

ಬೆಂಗಳೂರು, ಆಗಸ್ಟ್, 07 : ಶೈಕ್ಷಣಿಕ ಪ್ರವಾಸದ ವೇಳೆ ಕೇವಲ ನಾಲ್ಕು ದಿನಕ್ಕಾಗುವ ಬಟ್ಟೆ, ತಿಂಡಿ-ತಿನಿಸು ಇವುಗಳ ಜೊತೆಯಲ್ಲಿ ನಿಮ್ಮ ಭಾವಚಿತ್ರವಿರುವ ಗುರುತಿನ ಕಾರ್ಡ್ ಹಾಗೂ ಇನ್ಸೂರೆನ್ಸ್ ಕವರ್‌ಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ.

ಕಳೆದ ಬಾರಿ ಹಿಮಾಚಲ ಪ್ರದೇಶ ಭೇಟಿ ವೇಳೆ ಬಿ,ಟೆಕ್ ವಿದ್ಯಾರ್ಥಿ ಸಾವನ್ನಪ್ಪಿದ್ದ ಕಾರಣ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಂಸ್ಥೆಯು ಈ ನಿರ್ಧಾರ ತೆಗೆದುಕೊಂಡಿದೆ.[ಮಗ/ಮಗಳು ವೈದ್ಯರಾಗಬೇಕಾ?ವಿಚಾರ ಮಾಡಿ!]

Identity cards, insurance cover must for students on tours

ಶೈಕ್ಷಣಿಕ ಪ್ರವಾಸದ ವೇಳೆ ಹೆಚ್ಚುತ್ತಿರುವ ಅಪಘಾತ, ತೊಂದರೆ, ಅನಾಹುತಗಳನ್ನು ತಪ್ಪಿಸುವ ಸಲುವಾಗಿ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ, ವೈದ್ಯಕೀಯ ತಪಾಸಣಾ ಪತ್ರವನ್ನು ತರುವುದನ್ನು ಕಡ್ಡಾಯಗೊಳಿಸಿ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ನಿಯಮ ರೂಪಿಸಿದ್ದು, ಪ್ರವಾಸದ ವೇಳೆ ಒಬ್ಬ ಮಹಿಳಾ ಶಿಕ್ಷಕರನ್ನು ಕರೆದುಕೊಂಡು ಹೋಗುವುದನ್ನು ಕಡ್ಡಾಯಗೊಳಿಸಿ, ಪ್ರವಾಸದ ವೇಳೆ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದೆ.

ಪ್ರತಿ ಸೆಮಿಸ್ಟರ್ ನಲ್ಲೂ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಿದ್ದು, ಇದು ನಮ್ಮ ಪಠ್ಯಕ್ರಮದ ಒಂದು ಭಾಗವೇ ಆಗಿದೆ. ಸಂಸ್ಥೆಯ ಘನತೆ ಹಾಗೂ ಆತಂಕಕ್ಕೊಳಗಾಗುವ ಪೋಷಕರು ಈ ಎಲ್ಲರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಣಯಕ್ಕೆ ಬಂದಿದ್ದೇವೆ ಎಂದು ಆರ್. ವಿ ಎಂಜಿನಿಯರಿಂಗ್ ಕಾಲೇಜಿನ ಬಿ.ಎಸ್ ಸತ್ಯನಾರಾಯಣ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+