ಬಿಎಂಟಿಸಿ ದಿನದ ಪಾಸು ಪಡೆಯಲು ಐಡಿ ಕಾರ್ಡ್ ಕಡ್ಡಾಯ

ಬೆಂಗಳೂರು, ಏ. 1 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನದ ಪಾಸು ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ ಗುರುತಿನ ಚೀಟಿ ತೋರಿಸಬೇಕಾಗಿದೆ. ಪಾಸುಗಳ ದುರುಪಯೋಗವನ್ನು ತಡೆಗಟ್ಟಲು ಬಿಎಂಟಿಸಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಬಿಎಂಟಿಸಿಯ 65 ರೂ.ನ ದಿನದ ಪಾಸನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೋರಿಸಬೇಕಾಗಿತ್ತು. ಈಗ 70 ರೂ. ಪಾಸನ್ನು ಪಡೆಯಲು ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಬೇಕಾಗಿದೆ. [ಬಿಎಂಟಿಸಿ ಪಾಸು ಪಡೆಯುವುದು ಹೇಗೆ?]

BMTC

70 ರೂ. ದಿನದ ಪಾಸನ್ನು ಪಡೆಯಲು ಪ್ರಯಾಣಿಕರು ಮತದಾರರ ಗುರುತಿನ ಚೀಟಿ, ಡಿಎಲ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ ಪೋರ್ಟ್, ಪಡಿತರ ಚೀಟಿಗಳನ್ನು ನಿರ್ವಾಹಕರಿಗೆ ತೋರಿಸಿ ಪಾಸು ಪಡೆಯಬಹುದಾಗಿದೆ. [ನೈಸ್ ರಸ್ತೆ ಬಿಎಂಟಿಸಿ ಬಸ್ ಪಾಸು ದರಗಳು]

ಬಿಎಂಟಿಸಿಯಲ್ಲಿ ಇನ್ನು ಮೆಷಿನ್ ಟಿಕೆಟ್ : ಬಿಎಂಟಿಸಿ ಬಸ್ಸುಗಳಲ್ಲಿ ಇನ್ನು ಮುಂದೆ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರಗಳ ಮೂಲಕ ಟಿಕೆಟ್‌ ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. [ಬಿಎಂಟಿಸಿ APP ನೋಡಿದ್ದೀರಾ?]

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಎಂಟಿಸಿ ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರಗಳ ಮೂಲಕ ಟಿಕೆಟ್‌ ವಿತರಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು ಹೇಳಿದರು.

2012ರಲ್ಲಿಯೇ ಈ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರಗಳನ್ನು ಅನುಷ್ಠಾನಗೊಳಿಸಲು ಶೋಭಾ ಡೆವಲಪರ್‌ಗೆ ಟೆಂಡರ್ ನೀಡಲಾಗಿತ್ತು. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹೊಸ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಟ್ರೈಮ್ಯಾಕ್ಸ್‌ ಇನ್ಸ್‌ಫ್ರಾಸ್ಟ್ರಕ್ಟರ್‌ ಅಂಡ್‌ ಸರ್ವಿಸಸ್‌ ಲಿಮಿಟೆಡ್‌ಗೆ ಟೆಂಡರ್ ನೀಡಲಾಗಿದ್ದು, ಯಂತ್ರಗಳ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+