ಐಎಎಸ್ ಅಧಿಕಾರಿ ಕಪಿಲ್ ವಿರುದ್ಧ ಪೋರ್ನೊಗ್ರಾಫಿ ಕೇಸ್

ಬೆಂಗಳೂರು, ನ.05: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ವಿರುದ್ಧ ಆಶ್ಲೀಲ ಸಿಡಿ, ಮಕ್ಕಳ ಪೋರ್ನೊಗ್ರಾಫಿ ದೃಶ್ಯಾವಳಿ ಹಂಚಿಕೆ ಆರೋಪದಡಿಯಲ್ಲಿ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಕಪಿಲ್ ಮೋಹನ್ ಅವರ ಮನೆಯ ಮೇಲೆ ಬೆಟ್ಟಿಂಗ್ ದಂಧೆ ಕೇಸ್ ಸಂಬಂಧ ಈ ಹಿಂದೆ ತನಿಖಾಧಿಕಾರಿಗಳ ತಂಡ ದಾಳಿ ಮಾಡಿತ್ತು. ಆಗ ಜಪ್ತಿ ಮಾಡಲಾಗಿದ್ದ 20ಕ್ಕೂ ಹೆಚ್ಚು ಸಿಡಿಗಳು ಹಾಗೂ ಹಾರ್ಡ್ ಡಿಸ್ಕ್ ಗಳಲ್ಲಿ ಅಶ್ಲೀಲ ವಿಡಿಯೋಗಳಿರುವುದು ಪತ್ತೆಯಾಗಿದೆ. [ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಗೆ ಬಂಧನ ಭೀತಿ]

IAS Officer Kapil Mohan booked child pornography case

ಸಿಐಡಿ ಅಧಿಕಾರಿಗಳ ದಾಳಿ ಮಾಡಿ ವಶಕ್ಕೆ ಪಡೆದಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಅದರಲ್ಲಿ 7 ವಯಸ್ಕರ ಬ್ಲೂ ಫಿಲ್ಮ್ ಸಿಡಿಗಳು ಹಾಗೂ ಒಂದು ಮಕ್ಕಳ ಬ್ಲೂ ಫಿಲ್ಮ್ ಸಿಡಿ ಇರುವುದು ಪತ್ತೆಯಾಗಿದೆ. ನೀಲಿ ಚಿತ್ರಗಳಿರುವ ಸಿಡಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಪಿಲ್ ಮೋಹನ್ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. [ಕಪಿಲ್ ಗೂ ಹುಬ್ಬಳ್ಳಿ ಲಿಂಕ್]

ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಮಕ್ಕಳ ಬ್ಲೂ ಫಿಲ್ಮ್ ಸಂಗ್ರಹದ ಬಗ್ಗೆ ಐಟಿ ಕಾಯ್ದೆ 67ಬಿ, ಮಕ್ಕಳ ಅಶ್ಲೀಲ ಚಿತ್ರ ಪ್ರದರ್ಶನ ತಡೆ ಹಾಗೂ ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ರವಾನೆ ತಡೆ ಕಾಯ್ದೆ ಅಡಿ ಕಪಿಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿಗಳು ಹೇಳಿದ್ದಾರೆ.

ಬಿ.ಜಿ.ರತ್ನಾಕರ್ ನೇತೃತ್ವದ ತಂಡ ಕಪಿಲ್ ಮೋಹನ್ ಒಡೆತನದ ಕಂಪನಿಗೆ ಸೇರಿದ್ದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್​ವೆುಂಟ್ ಮೇಲೆ ದಾಳಿ ನಡೆಸಿದ ವೇಳೆ ಈ ವೇಳೆ 4.37 ಕೋಟಿ ರೂ. ನಗದು, 2.5 ಕೆ.ಜಿ ಚಿನ್ನ, 37 ಕ್ಯಾರೆಟ್ ವಜ್ರ ಮತ್ತು ಮಹತ್ವದ ದಾಖಲೆಗಳು ಸಿಕ್ಕಿತ್ತು.

ಕಪಿಲ್ ಮೋಹನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಪತ್ನಿ ರೀಚಾ ಮೋಹನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ಕೂಡಾ ಜಾರಿಯಲ್ಲಿದೆ. ಕಪಿಲ್ ಮೋಹನ್ ವಿರುದ್ಧ ಯಶವಂತಪುರ ಪೊಲೀಸರು, ಲೋಕಾಯುಕ್ತ ಪೊಲೀಸರು, ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಐಡಿ ತಂಡ ತನಿಖೆ ನಡೆಸುತ್ತಿವೆ.(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+