ಕಾಂಗ್ರೆಸ್ ನಾಯಕರಿಗೆ ನಿರಾಸೆ ಮೂಡಿಸಿದ ಕೃಷ್ಣ!

ಬೆಂಗಳೂರಿನಲ್ಲಿ ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂಬ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಮನವಿಗಳನ್ನು ತಳ್ಳಿಹಾಕುತ್ತೇನೆ ಎಂದರು. ಇದರಿಂದ ಮಂಡ್ಯ ಕ್ಷೇತ್ರದಲ್ಲಿ ಹಾಲಿ ಸಂಸದೆ ರಮ್ಯಾ ಬದಲು ಎಸ್.ಎಂ.ಕೃಷ್ಣ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳಿಗೆ ತೆರೆಬಿದ್ದಿದೆ. (ಮಂಡ್ಯದಿಂದ ಲೋಕಸಭೆಗೆ ಎಸ್ಎಂ ಕೃಷ್ಣ ಸ್ಪರ್ಧೆ)
ಲೋಕಸಭೆ ಚುನಾಣೆಯಲ್ಲಿ ಸ್ಪರ್ಧಿಸಲು ಮನಸ್ಸಿಲ್ಲ ಎಂದ ತಕ್ಷಣ ನಾನು ಪಕ್ಷದಿಂದ ವಿಮುಖನಾಗುತ್ತೇನೆ ಎಂಬ ಭಾವನೆ ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಮುಂದೆಯೂ ಸಕ್ರಿಯವಾಗಿರುತ್ತೇನೆ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ. ಮಂಡ್ಯದಿಂದ ತಮ್ಮನ್ನು ಕಣಕ್ಕೆ ಇಳಿಸಬೇಕು ಎಂದು ಮಂಡ್ಯ ಜಿಲ್ಲಾಧ್ಯಕ್ಷ ಆತ್ಮಾನಂದ ಹಾಗೂ ಮುಖಂಡರು ಮಾಡಿರುವ ಮನವಿಯ ಬಗ್ಗೆ ಮಾಹಿತಿ ತಿಳಿದಿದೆ. (ಮಂಡ್ಯ, ಬೆಂಗಳೂರು ಗ್ರಾಮಾಂತರ ನಮ್ಮದು)
ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದಾಗಿಯೇ ನಾನು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಪಡೆಯುವಂತಾಯಿತು. ನನ್ನ ರಾಜಕೀಯ ಬೆಳವಣಿಗೆಯ ಹಿಂದೆ ಮಂಡ್ಯ ಜಿಲ್ಲೆಯ ಅಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರ ಪಾತ್ರವಿದೆ. ಜಿಲ್ಲಾಧ್ಯಕ್ಷರು ಮತ್ತು ಮುಖಂಡರು ನನ್ನ ಮೇಲೆ ಅವರು ಇಟ್ಟಿರುವ ಅಭಿಮಾನಕ್ಕೆ ಋಣಿ ಎಂದು ಕೃಷಣ ಹೇಳಿದ್ದಾರೆ.
ರಾಜಕಾರಣದಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ನಾನು ತೀರ್ಮಾನ ಕೈಗೊಂಡಿದ್ದೇನೆ. ಆದ್ದಿರಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಾದ ರಮ್ಯಾ ಅವರ ಬದಲಿಗೆ ಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದು ಶುಕ್ರವಾರ ಭಾರೀ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications