Bengaluru: ಹೈದರಾಬಾದ್ - ಚೆನ್ನೈ - ಬೆಂಗಳೂರಿಗೆ ಹೈಸ್ಪೀಡ್ "ಬುಲೆಟ್" ರೈಲು, ಈ ಪ್ರದೇಶಗಳಿಗೆ ಲಾಭ
Hyderabad-Chennai-Bengaluru Bullet Train: ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಮೂರು ಪ್ರಮುಖ ನಗರಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಹೈದರಾಬಾದ್ ನಿಂದ ಬೆಂಗಳೂರು ಹಾಗೂ ಚೆನ್ನೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದ್ದು. ಇದರಿಂದ ದಕ್ಷಿಣ ಭಾರತದ ಮೂರು ಪ್ರಮುಖ ನಗರಗಳಿಗೆ ಬಂಪರ್ ಬಂದಿದೆ. ಈಗಾಗಲೇ ಈ ಯೋಜನೆಯ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಇದೂ ಸಹ ಒಂದಾಗಿದೆ. ಈ ಯೋಜನೆಯಿಂದಾಗಿ ಪ್ರಯಾಣದ ಸಮಯವು ಸುಮಾರು 10 ಗಂಟೆಗಳಷ್ಟು ಕಡಿಮೆ ಆಗಲಿದೆ ಎಂದು ಹೇಳಲಾಗಿದೆ. ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಹೈದರಾಬಾದ್‌ನಿಂದ ಬುಲೆಟ್ ರೈಲು ಸೌಲಭ್ಯಗಳ ಪ್ರಕ್ರಿಯೆ ಇದೀಗ ಜೋರಾಗಿದೆ. ದೇಶದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೈಟ್ ರೈಲು ಬರಲಿದೆ ಎನ್ನುವ ಪ್ರಕ್ರಿಯೆಯು ಹಲವು ವರ್ಷಗಳಿಂದ ನಡೆದಿದೆ. ಈ ಪ್ರಕ್ರಿಯೆ ಚುರುಕು ಪಡೆದುಕೊಂಡ ಬೆನ್ನಲ್ಲೇ ದಕ್ಷಿಣ ಭಾರತಕ್ಕೂ ಅದೃಷ್ಟ ಬಂದಿದೆ. ಈ ಹೊಸ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ನೆರೆಯ ರಾಜ್ಯಗಳ ಮೆಟ್ರೋ ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ. ಹೈದರಾಬಾದ್ ಹಾಗೂ ಮುಂಬೈ ಹೈಸ್ಪೀಡ್ ಮಾರ್ಗದ ಡಿಪಿಆರ್ ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ.

ಇದೀಗ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಚೆನ್ನೈ ಹಾಗೂ ಆಂಧ್ರಪ್ರದೇಶದ ಮೂಲಕ ಬೆಂಗಳೂರಿಗೆ ಎರಡು ಪ್ರತ್ಯೇಕ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಅಂತಿಮ ಸಮೀಕ್ಷೆ ಜೋಡಣೆ ಪ್ರಕ್ರಿಯೆ ನಡೆದಿದೆ. ಈ ಬುಲೆಟ್ ರೈಲು ಮಾರ್ಗಗಳನ್ನು ಗಂಟೆಗೆ ಗರಿಷ್ಠ 350 ಕಿಮೀ ವೇಗದಲ್ಲಿ ಹಾಗೂ ಗಂಟೆಗೆ ಸರಾಸರಿ 250 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಪ್ರಮುಖ ನಗರಗಳಿಗೆ ಬಂಪರ್: ಇನ್ನು ಹೈಸ್ಪೀಡ್ ಬುಲೆಟ್ ರೈಲು ಕಾರಿಡಾರ್ ಯೋಜನೆಯಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ಬಂಪರ್ ಬರಲಿದೆ. ಈ ಯೋಜನೆಯನ್ನು ಗ್ರೀನ್‌ಫೀಲ್ಡ್ ಮಾದರಿಯಲ್ಲಿ ಸಂಪೂರ್ಣವಾಗಿ ಹೊಸ ಮಾರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲದೇ ಈ ಮಾರ್ಗದಲ್ಲಿ ಬುಲೆಟ್ ರೈಲುಗಳು ಮಾತ್ರ ಸಂಚರಿಸಲಿವೆ. ಈ ಯೋಜನೆ ಜಾರಿಯಾಗುವುದರಿಂದ ಹೈದರಾಬಾದ್‌ನಿಂದ ಮುಂಬೈ, ಚೆನ್ನೈ, ಬೆಂಗಳೂರು, ಕರ್ನೂಲ್, ವಿಜಯವಾಡ ಮತ್ತು ಗುಂಟೂರು ಸೇರಿದಂತೆ ಹಲವು ನಗರಗಳ ಅಭಿವೃದ್ಧಿ ಹಾಗೂ ಈ ನಗರಗಳ ನಡುವಿನ ಸಂಪರ್ಕಕ್ಕೆ ಅನುಕೂಲವಾಗಲಿದೆ. ಅಲ್ಲದೇ ಈ ಪ್ರಮುಖ ನಗರಗಳ ನಡುವೆ ಶಿಕ್ಷಣ, ಐಟಿ ಹಾಗೂ ವ್ಯಾಪಾರ ಕ್ಷೇತ್ರಗಳ ವಿಸ್ತರಣೆ ಆಗಲಿದೆ ಎಂದು ಹೇಳಲಾಗಿದೆ.
ಹೈದರಾಬಾದ್ - ಮುಂಬೈ ಹೈಸ್ಪೀಡ್ ಕಾರಿಡಾರ್‌ನ ಡಿಪಿಆರ್‌ನಲ್ಲಿ ಒಟ್ಟು 11 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಇದು ಅಂತಿಮವಲ್ಲ. ಚೆನ್ನೈ ಹಾಗೂ ಬೆಂಗಳೂರು ಮಾರ್ಗಗಳನ್ನು ಒಟ್ಟುಗೂಡಿಸಿದರೆ ರಾಜ್ಯದಲ್ಲಿ ಹೈ-ಸ್ಪೀಡ್ ಕಾರಿಡಾರ್‌ನ ದೂರವು ಒಟ್ಟು 580 ಕಿ.ಮೀ. ವ್ಯಾಪ್ತಿ ಇರಲಿದೆ. ಹೈದರಾಬಾದ್ ಮೂಲಕ ಚೆನ್ನೈ ಮತ್ತು ಬೆಂಗಳೂರು ಹೈ-ಸ್ಪೀಡ್ ಕಾರಿಡಾರ್‌ನ ಅಂತಿಮ ಸಮೀಕ್ಷೆ ಕಾರ್ಯ ನಡೆದಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ದೇಶದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಮುಂಬೈ - ಅಹಮದಾಬಾದ್ ಯೋಜನೆ ಪೂರ್ಣಗೊಂಡ ಮೇಲೆ ದಕ್ಷಿಣ ಭಾರತದ ಪ್ರಮುಖ ಯೋಜನೆ ಹೈದರಾಬಾದ್-ಚೆನ್ನೈ ಹಾಗೂ ಹೈದರಾಬಾದ್-ಬೆಂಗಳೂರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.












Click it and Unblock the Notifications