ಬೆಂಗಳೂರು: ಎಚ್‌ಎಎಲ್ ಜಂಕ್ಷನ್‌ನಲ್ಲಿ ಮರಗಳನ್ನು ಉಳಿಸಲು ಮಾನವ ಸರಪಳಿ
ಬೆಂಗಳೂರು, ಮಾರ್ಚ್ 22: ಬಿಬಿಎಂಪಿಯು ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಎಚ್‌ಎಎಲ್ ಜಂಕ್ಷನ್‌ನಲ್ಲಿರುವ ಮರಗಳನ್ನು ಕಡಿಯಲು ಹೊರಟಿದ್ದು, ಇದನ್ನು ವಿರೋಧಿಸಿ ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ 25 ಮರಗಳನ್ನು ಕಡಿಯಲು ಯೋಜನೆ ರೂಪಿಸಿದೆ. ಅದಕ್ಕಾಗಿ ಬೆಂಗಳೂರಿನ ಓಲ್ಡ್ ಏಪೋರ್ಟ್ ರಸ್ತೆ ಹಾಗೂ ಸುರಂಜನ್ ದಾಸ್ ರಸ್ತೆ ಜಂಕ್ಷನ್ ಸುತ್ತಮುತ್ತಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಭಾನುವಾರ ಸುಮಾರು 150 ರಿಂದ 200 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಮರಗಳನ್ನು ಕಡಿಯದೆ ಅಂಡರ್‌ಪಾಸ್ ನಿರ್ಮಿಸಲು ಕೂಡ ದಾರಿ ಇದೆ.
ಸುಮಾರು 70-80ವರ್ಷ ಹಳೆಯ ಮರಗಳನ್ನು ಕಡಿಯಲಾಗುತ್ತದೆ. ಸಮಿತಿಯು ಹೇಗೆ ಇದಕ್ಕೆ ಒಪ್ಪಿಗೆ ನೀಡಿತು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾವು ನಮ್ಮ ಪ್ರತಿಭಟನೆ ಮುಗಿಸಿ ಮನೆಗಳಿಗೆ ತೆರಳಿದ ಬಳಿಕ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಬಳಿಕ ಸೂಕ್ತ ಅಧಿಕಾರಿಗಳ ಬಳಿ ಮಾತನಾಡಿದೆವು, ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿವೆ.
ಆದರೆ ಅವರ ಬಳಿ ಮರಗಳನ್ನು ಕಡಿಯಲು ಒಪ್ಪಿಗೆ ಪತ್ರ ಇತ್ತು. ಇಂತಹ ವಿಷಯಗಳಲ್ಲಿ ನಾವು ಹೆಚ್ಚು ಏನೂ ಮಾಡಲು ಸಾಧ್ಯವಿಲ್ಲ, ಅಸಹಾಯಕರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.