ಕೋನಪ್ಪನ ಅಗ್ರಹಾರದ ಬಳಿ ಮೇಲ್ಸೇತುವೆಯಲ್ಲಿ ಬಾಯಿಬಿಟ್ಟ ಕಬ್ಬಿಣದ ಕೊಂಡಿ

ಬೆಂಗಳೂರು, ಜೂನ್ 22: ಎಲೆಕ್ಟ್ರಾನಿಕ್ ಸಿಟಿಯಿಂದ ಟಾಟಾ ಸಿಲ್ಕ್ ಬೋರ್ಡ್ ವರೆಗಿನ ಮೇಲ್ಸೇತುವೆಯನ್ನು ನೀವೂ ನೋಡಿರಬಹುದು. ಏಳು ಕಿಲೋಮೀಟರ್ ಉದ್ದದ ತುಂಬ ಪ್ರಮುಖವಾದ ಈ ಮೇಲ್ಸೇತುವೆಯಲ್ಲಿ ಎರಡು ಆಧಾರಸ್ಥಂಭಗಳ ಮಧ್ಯೆ ಕೊಂಡಿಯಂತಿರುವ ಕಬ್ಬಿಣದ ಬೆಸುಗೆಯಲ್ಲಿ ಅರ್ಧ ಅಡಿಗಿಂತ ಹೆಚ್ಚು ಅಂತರ ಕಾಣಿಸಿಕೊಂಡಿದೆ.

ತುಂಬ ಸರಳವಾಗಿ ಹೇಳಬೇಕು ಅಂದರೆ ಕೋನಪ್ಪನ ಅಗ್ರಹಾರದ ಬಳಿ ಮೇಲ್ಸೇತುವೆಯಲ್ಲಿ ಆಧಾರ ಸ್ಥಂಭದ ಮೇಲೆ ಬೆಸುಗೆಯಂತಿರುವ ಕಬ್ಬಿಣದ ಕೊಂಡಿ ಮಧ್ಯೆ ಅಂತರ (ಗ್ಯಾಪ್) ಹೆಚ್ಚಾಗಿದೆ. ಇದರಿಂದ ಮೇಲ್ಸೇತುವೆಯಲ್ಲಿ ಸಂಚರಿಸುವ ಸವಾರರಿಗೆ ಮಾಮೂಲಿಗಿಂತ ಹೆಚ್ಚಾಗಿ ನಡುಗುವ ಅನುಭವ ಆಗುತ್ತಿದೆ.

Huge gap between pillars joint in flyover near Konnappana agrahara

ಅಷ್ಟೇ ಅಲ್ಲ, ಈ ಅಂತರ ಮತ್ತೂ ಹೆಚ್ಚಾದರೆ ಅಪಾಯದ ಸಾಧ್ಯತೆಗಳಿವೆ. ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುವ, ತೀರಾ ಹೆಚ್ಚು ವಾಹನ ದಟ್ಟಣೆ ಏರ್ಪಡುವ ಮೇಲ್ಸೇತುವೆಗಳ ಪೈಕಿ ಇದು ಒಂದು. ತುಂಬ ದೊಡ್ಡ ವಾಹನಗಳಾದ ಲಾರಿ, ಬಸ್ಸುಗಳಂಥದ್ದು ಚಲಿಸುವಾಗ ನಡುಕ ತುಂಬ ಹೆಚ್ಚಾಗುತ್ತಿದೆ.

Huge gap between pillars joint in flyover near Konnappana agrahara

ಈ ಅಂತರವನ್ನು ಕಡಿಮೆ ಮಾಡಲು ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+