Namma Metro Digital Luggage Locker: ಪ್ರಯಾಣಿಕರು ಇದನ್ನು ಹೇಗೆ ಬಳಸಬೇಕು? ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್ 17: ಬೆಂಗಳೂರು ಮೆಟ್ರೋ ರೈಲು ನಿಗಮ ( BMRCL) ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಸೇರಿದಂತೆ ಆಯ್ದ ಸ್ಟೇಷನ್‌ಗಳಲ್ಲಿ ವಿನೂತನ 'ಡಿಜಿಟಲ್ ಲಗೇಜ್ ಲಾಕರ್' ವ್ಯವಸ್ಥೆ ಅಳವಡಿಸಿದೆ. ಈ ಯಂತ್ರವನ್ನು ಸ್ವಯಂ ಪ್ರೇರಿತವಾಗಿ ನೀವು ಆಪರೇಟ್ ಮಾಡುವ ಮೂಲಕ ನಿಮ್ಮ ಲಗೇಜ್ ಅನ್ನು ಇಟ್ಟು ತೆರಳಬಹುದಾಗಿದೆ. ಹಾಗಾದರೆ ಇದರ ಕಾರ್ಯ ನಿರ್ವಹಣೆ ಹೇಗೆ? ಲಗೇಜ್ ಇಡಲು ಪ್ರಯಾಣಿಕರ ಏನು ಮಾಡಬೇಕು? ಇಲ್ಲಿದೆ ಅಪ್ಡೇಟ್ ಮಾಹಿತಿ.

ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಒಂದು ದಿನದ ಮಟ್ಟಿಗೆ ಬರುವವರಿಗೆ ಲಗೇಜ್ ಎಲ್ಲಿ ಇಡಬೇಕು ಎಂಬುದೇ ತಲೆನೋವಾಗಿ ಬಿಟ್ಟಿರುತ್ತದೆ. ಇಲ್ಲಿ ಓಡಾಡಲು ಹರಸಾಹಸ ಪಡಬೇಕಾದ ಈ ಮಹಾನಗರದಲ್ಲಿ ಲಗೇಜ್ ಸಮೇತ ಓಡಾಡುವುದು ಕಿರಿಕಿರಿ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಅದ್ಭುತ ವ್ಯವಸ್ಥೆ ಪರಿಚಯಿಸಿದೆ.

How to Operate Digital Luggage Locker in Namma metro station Know step by steps

ನಮ್ಮ ಮೆಟ್ರೋ ಮೆಜೆಸ್ಟಿಕ್ ನಿಲ್ದಾಣ ಸೇರಿದಂತೆ ಒಂದೆರಡು ನಿಲ್ದಾಣಗಳಲ್ಲಿ ಈ ಹೊಸ 'ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ' ನೀಡಿದೆ. ನಿಮ್ಮ ಮಧ್ಯಮ ಗಾತ್ರ ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಇದರಲ್ಲಿ ಇಡಲು ಕೇವಲ ₹70 ಹಾಗೂ ದೊಡ್ಡ ಗಾತ್ರದ ಲಗೇಜ್ ಇಡಲು ₹100 ಚಾರ್ಜ್ ಮಾಡಲಾಗುತ್ತದೆ. ನಿಮ್ಮ ಕೆಲಸ ಮುಗಿಸಯುವವರೆಗೂ ಸುರಕ್ಷಿತವಾಗಿ ಲಗೇಜ್ ಇರಲಿವೆ.

ಲಗೇಜ್ ಲಾಕರ್ ಬಳಕೆ ಹೇಗೆ? ಈ ವಿಧಾನ ಪಾಲಿಸಿ

* ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಲಗೇಜ್ ಲಾಕರ್ ಬಳಸುಸುವುದಾದರೆ, ಮೊದಲು ನೀವು ಈ ಲಾಕರ್‌ನ ಮೇಲೆ ನೀಡಲಾದ ಸ್ಥಳದಲ್ಲಿ ನಿಮ್ಮ ಹತ್ತು ಸಂಖ್ಯೆಯ ಮೊಬೈಲ್ ನಂಬರ್ ಹಾಕಬೇಕು.

* ಬಳಿಕ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಬೇಕು.

* ನಂತರ ನಿಮ್ಮ ಇ ಮೇಲ್ ಐಡಿ ವಿವರ ಹಾಕಬೇಕು.

* ಡಿಜಿಟಲ್ ಸ್ಕ್ರೀನ್ ಮೇಲೆ ಲಗೇಜ್ ಇಡುವ ಸಮಯ/ಗಂಟೆಗಳನ್ನು ಕೇಳುತ್ತದೆ.

* 6 ಗಂಟೆ ಇಲ್ಲವೇ 12 ಸಮಯ ಕೇಳುತ್ತದೆ. ಎಷ್ಟು ಹೊತ್ತು ನೀವು ಲಗೇಜ್ ಇಡಲು ಬಯಸುತ್ತಿರೋ ಆ ಸಮಯ ಆಯ್ಕೆ ಮಾಡಿಕೊಳ್ಳಬೇಕು.

* ಮುಂದಿನ ಹಂತದಲ್ಲಿ ಪರದೆ ಮೇಲೆ ಕ್ಯೂಆರ್ ಕೋಡ್ ಪ್ರದರ್ಶನ ಆಗುತ್ತದೆ.

* ಮೊಬೈಲ್‌ ಪೇಮೆಂಟ್ ಆಪ್, ಯುಪಿಐ ಆಪ್ ಇತ್ಯಾದಿ ಮೂಲಕ ಹಣ ಪಾವತಿಸಬೇಕು.

* ಇದಾಗುತ್ತಿದ್ದಂತೆ ನೀವು ಆಯ್ಕೆ ಮಾಡಿಕೊಂಡ ಕಂಪಾರ್ಟ್ಮೆಂಟ್ ಡೋರ್ ತೆರೆದುಕೊಳ್ಳುತ್ತದೆ.

* ಅಲ್ಲಿ ನೀವು ನಿಮ್ಮ ಲಗೇಜ್ ಇಟ್ಟು ತೆರಳಬಹುದು.

* ಮರಳಿ ಬಂದು ಲಗೇಜ್ ಪಡೆಯುವಾಗ ಮೊಬೈಲ್ ಸಂಖ್ಯೆ, ಒಟಿಪಿ ನಮೂದಿಸಿ ಲಗೇಜ್ ಪಡೆಯಬಹುದಾಗಿದೆ.

ಸದ್ಯ ಈ ಸೌಲಭ್ಯವನ್ನು ನಮ್ಮ ಮೆಟ್ರೋ ಅಧಿಕಾರಿಗಳು ಕೆಲವೇ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಿದ್ದಾರೆ. ಮೆಜೆಸ್ಟಿಕ್ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ ಆಗಿದ್ದರಿಂದ ಅಲ್ಲಿ ಈ ಸೌಲಭ್ಯ ಮೊದಲು ಅಳವಡಿಕೆ ಆಗಿದೆ. ಮುಂದಿನ ದಿನಗಳಲ್ಲಿ ಅಗತ್ಯತೆ ಆಧಾರದಲ್ಲಿ ಬೇರೆ ಕಡೆಗೂ ಈ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಅಳವಡಿಕೆ ಆಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+