ಪೆಟ್ರೋಲ್ ಕಲಬೆರಕೆ ತಿಳಿಯೋದು ಹೇಗೆ, ಬೈಕ್ & ಕಾರು ಮೈಲೇಜ್ ಜಾಸ್ತಿಗೆ ಏನ್‌ಮಾಡ್ಬೇಕು?
ಬೈಕ್ ಹಾಗೂ ಕಾರು ಚಲಾಯಿಸುವ ಬಹುತೇಕರ ಪ್ರಶ್ನೆ ಗಾಡಿಗಳ ಮೈಲೇಜ್ ಜಾಸ್ತಿ ಮಾಡಿಕೊಳ್ಳುವುದು ಹೇಗೆ ಅಂತ. ಬೈಕ್ ಹಾಗೂ ಕಾರುಗಳ ಮೈಲೇಜ್ ಹೆಚ್ಚಿಸಿಕೊಳ್ಳಲು ಹಾಗೂ ಪೆಟ್ರೋಲ್ ಅಥವಾ ಡೀಸೆಲ್ ಕಲಬೆರಕೆಯಾಗಿದ್ದರೆ ಅದನ್ನು ಪರಿಶೀಲನೆ ಮಾಡುವುದು ನಿಜಕ್ಕೂ ಕಷ್ಟವೇನಲ್ಲ. ನೀವು ಕೆಲವೊಂದು ಸರಳ ಸೂತ್ರಗಳನ್ನು ಅನುಸರಿಸಿದರೆ ಸಾಕು. ಸಾಮಾನ್ಯವಾಗಿ ವಾಹನ ಸವಾರರು ಕೆಲವೊಂದು ಸಣ್ಣ ಸಣ್ಣ ವಿಷಯಗಳನ್ನು ಮಿಸ್ ಮಾಡುವ ಮೂಲಕ ಬೈಕ್‌ನ ಮೈಲೇಜ್ ಕಡಿಮೆಗೆ ಕಾರಣರಾಗ್ತಾರೆ. ಅಷ್ಟೇ ಅಲ್ಲ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಕಲಬೆರಕೆ ಮಾಡಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟವೇನೂ ಅಲ್ಲ. ಈ ಎರಡರ ಬಗ್ಗೆ ಮಾಹಿತಿ ಇಲ್ಲಿದೆ.
ವಾಹನ ಸವಾರರು ಗಾಡಿ ರಸ್ತೆಗೆ ಇಳಿದ ಮೇಲೆ ಮುಖ್ಯವಾಗಿ ಎದುರಿಸುವ ಸಮಸ್ಯೆಗಳು ಹಲವಿದೆ. ಅದರಲ್ಲಿ ಮುಖ್ಯವಾಗಿ ಮೈಲೇಜ್ ಬರೋದು. ಪೆಟ್ರೋಲ್, ಡೀಸೆಲ್ ಉಳಿಸೋದು. ಇಲ್ಲ ಎಲ್ಲಿಯಾದರೂ ಪೆಟ್ರೋಲ್ & ಡೀಸೆಲ್ ಹಾಕಿಸಿಕೊಂಡ ಮೇಲೆ ಅದರ ಕ್ವಾಲಿಟಿ ಹೇಗಿದೆ ಅಂತ ನೋಡೋದು.

ಪೆಟ್ರೋಲ್ & ಡೀಸೆಲ್ ಕ್ವಾಲಿಟಿ: ಪೆಟ್ರೋಲ್ ಮತ್ತು ಡೀಸೆಲ್ ಕ್ವಾಲಿಟಿಯನ್ನು ಪರೀಕ್ಷೆ ಮಾಡುವುದು ಅತ್ಯಂತ ಸುಲಭ. ಈ ರೀತಿ ಟೆಸ್ಟ್ ಮಾಡುವುದಕ್ಕೆ ನಿಮಗೆ ಯಾವುದೇ ಸಾಧನಗಳ ಅವಶ್ಯಕತೆಯೂ ಸಹ ಇರುವುದಿಲ್ಲ. ಅದಕ್ಕೆ ಈ ಸರಳ ಸೂತ್ರಗಳನ್ನು ನೀವು ಫಾಲೋ ಮಾಡಿದರೆ ಸಾಕು ಪೆಟ್ರೋಲ್ ಹಾಕಿಸಿಕೊಂಡ ಮೇಲೆ ನಿಮ್ಮ ವಾಹನ ಹೇಗೆ ಕೆಲಸ ಮಾಡುತ್ತದೆ ನೋಡಿ. ಒಂದೊಮ್ಮೆ ಪೆಟ್ರೋಲ್ ಅಥವಾ ಡೀಸೆಲ್ ಕಲಬೆರಕೆಯಾಗಿದ್ದರೆ, ಈ ಲಕ್ಷಣಗಳು ಕಾಣಿಸುತ್ತವೆ.
* ನಿಮ್ಮ ಬೈಕ್ ಅಥವಾ ಕಾರಿನಲ್ಲಿ ಬಿಳಿ ಹೊಗೆ ಹೆಚ್ಚಾಗಿ ಬರುತ್ತೆ. ಇದು ಕಲಬೆರಕೆ ಪೆಟ್ರೋಲ್ ಅಥವಾ ಡೀಸೆಲ್‌ನ ಮೊದಲ ಲಕ್ಷಣ.
* ನಿಮ್ಮ ವಾಹನ ಸಾಮಾನ್ಯವಾಗಿ ಸ್ಟಾರ್ಟ್ ಆಗುವ ಸಮಯಕ್ಕಿಂತ ಹೆಚ್ಚು ಸಮಯ ಹಿಡಿಸುತ್ತೆ.
* ವೇಗ ವರ್ಧನೆ ಅಥವಾ ಎಂಜಿನ್ ಸಾಮರ್ಥ್ಯ ಏಕಾಏಕಿ ಕಡಿಮೆಯಾಗುತ್ತಾ ಹೋಗುತ್ತೆ.

ಈ ಪ್ರಮುಖ ಲಕ್ಷಣಗಳು ನಿಮ್ಮ ಗಾಡಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದಾದರೆ, ನೀವು ಸರಿಯಾದ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸ್ತಿಲ್ಲ ಅಂತಲೇ ಅರ್ಥ. ಹೀಗಾಗಿ, ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡ ಮೇಲೆ ಈ ಅಂಶಗಳನ್ನು ತಪ್ಪದೇ ಪರಿಶೀಲನೆ ಮಾಡಿ.
ವಾಹನ ಮೈಲೇಜ್ ಹೆಚ್ಚಿಸಲು ಇಲ್ಲಿದೆ ಸರಳ ಮಾರ್ಗ
ವೇಗ ನಿಯಂತ್ರಣ: ಬೈಕ್ ಅಥವಾ ಕಾರು ಮೈಲೇಜ್ ಜಾಸ್ತಿ ಮಾಡ್ಬೇಕೆಂದರೆ ಅತ್ಯಂತ ಸರಳ ಸೂತ್ರ ಎಂದರೆ ವೇಗ ಮಿತಿ (ಸ್ಪೀಡ್ ಲಿಮಿಟಿ). ವಾಹನವನ್ನು 30kmph-50kmph ವೇಗದಲ್ಲಿ ಓಡಿಸುವುದರಿಂದ ಹೆಚ್ಚು ಮೈಲೇಜ್ ಸಿಗುತ್ತೆ. ಸ್ಪೀಡ್ ಜಾಸ್ತಿಯಾದಷ್ಟೂ ವಾಹನದ ಮೈಲೇಜ್ ಕಡಿಮೆಯಾಗುತ್ತಲ್ಲೇ ಹೋಗುವ ಸಾಧ್ಯತೆ ಹೆಚ್ಚು.
ಎಕ್ಸಲೇಟರ್ ಮಿತಿ: ಎಕ್ಸಲೇಟರ್ ಅನ್ನು ಮಿತಿವಾಗಿ ಬಳಸಿ. ಕೆಲವೊಮ್ಮೆ ಅನವಶ್ಯಕವಾಗಿ ಕೆಲವರು ಅಗತ್ಯಕ್ಕಿಂತ ಹೆಚ್ಚು ಎಕ್ಸಲೇಟರ್ ಕೊಡ್ತಾರೆ. ಇದು ಮಜಾ ಕೊಡುತ್ತೆ ಅನ್ಸಬಹುದು ನಿಜ. ಆದರೆ, ಇದರಿಂದ ತುಂಬಾನೇ ಲಾಸ್ ಆಗುತ್ತೆ. ಹೀಗಾಗಿ, ಈ ತಪ್ಪು ಮಾಡಬೇಡಿ.
ವಾಹನದ ಗಾಳಿ ಮಟ್ಟ: ವಾಹನದ ಗಾಳಿ (ಬೈಕ್ ಅಥವಾ ಕಾರ್ ಏರ್) ಮಟ್ಟ ಗಮನಿಸಿ. ವಾಹನದ ನಿಗದಿತ ಏರ್ ತುಂಬಿಸಿ. ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗಲೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸುವಾಗಲೇ ಏರ್ ಸಹ ನೋಡಿಕೊಳ್ಳಿ. ಗಾಡಿಗಳ ಟೈರ್‌ನಲ್ಲಿ ಗಾಳಿ ನಿಖರವಾಗಿ ಇದ್ದರೆ, ಗಾಡಿ ಸರಾಗವಾಗಿ ಹೋಗುತ್ತೆ ಮೈಲೇಜ್ ಸಹ ಉಳಿಯುತ್ತೆ.
ಭಾರವಾದ ವಸ್ತು ಹೆಚ್ಚು ಬೇಡ: ಬೈಕ್‌ಗಳ ಮೇಲೆ ಹೆಚ್ಚು ಭಾರವಾದ ವಾಹನಗಳನ್ನು ಕ್ಯಾರಿ ಮಾಡುವುದರಿಂದಲೂ ಬೈಕ್ ಮೈಲೇಜ್‌ಗೆ ಹೊಡೆತ ಬೀಳುತ್ತೆ. ಹೀಗಾಗಿ, ಬೈಕ್‌ನಲ್ಲಿ ಭಾರೀ ತುಕದ ವಸ್ತುಗಳನ್ನು ಕ್ಯಾರಿ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ಆಯಿಲ್ ಗಮನಿಸಿ: ಕಡಿಮೆ ಬೆಲೆಗೆ ಸಿಗುವ ಆಯಿಲ್‌ಗಳನ್ನು ಬಳಸು ಬದಲು ಉತ್ತಮ ಗುಣಮಟ್ಟದ ಆಯಿಲ್‌ಗಳನ್ನೇ ವಾಹನಗಳಿಗೆ ಬಳಸಿ. ಇದು ಸಹ ವಾಹನಗಳ ಮೈಲೇಜ್‌ನ ಮೇಲೆ ಪರಿಣಾಮ ಬೀರುತ್ತದೆ.












Click it and Unblock the Notifications