ಬೆಂಗಳೂರಿನ ಪಬ್ಲಿಕ್ ಶಾಲೆಯಲ್ಲಿ ಉಚಿತ ಶಿಕ್ಷಣ, ಅರ್ಜಿ ಸಲ್ಲಿಸುವುದು ಹೇಗೆ ?
ಬೆಂಗಳೂರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂದರೆ ಲಕ್ಷ ಲಕ್ಷ ರೂಪಾಯಿ ಸುರಿಯಬೇಕು ಎನ್ನುವ ಮಾತು ಇದೆ. ಇನ್ನೇನು ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು. ಈ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಆಹ್ವಾನ ಮಾಡಲಾಗಿದೆ. ಈ ಶಾಲೆಗಳಲ್ಲಿ ವಿದ್ಯಾಭ್ಯಾಸವು ಸಂಪೂರ್ಣವಾಗಿ ಉಚಿತವಾಗಿ ಇರಲಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹ ಯೋಗದಲ್ಲಿ ನಡೆಯುತ್ತಿರುವ ನರ್ಸರಿ ತರಗತಿ(ಸಿ.ಬಿ.ಎಸ್.ಸಿ ಪಠ್ಯಕ್ರಮ)ಗೆ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್, ನಂ. 215ನೇ ಮುಖ್ಯ ರಸ್ತೆ ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಂಗಳೂರು-21 ಈ ವಿದ್ಯಾಸಂಸ್ಥೆಯಲ್ಲಿ ಫ್ರೀ ನರ್ಸರಿ ತರಗತಿಗೆ ದಿನಾಂಕ: 25-02-2025 ರಿಂದ 11-03-2025 ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 11-03-2025 ರಿಂದ 25-03-2025 ರವರೆಗೆ
* ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ(ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು.
* 20-04-2025 ರಂದು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:
1 . ಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ - 5 ಸಂಖ್ಯೆ
2. ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)2B Size
3. ಮಗುವಿನ ಜನನ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. ಜಾತಿ ಪ್ರಮಾಣ ಪತ್ರ
6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್
8. ತಂದೆ / ತಾಯಿಯ ಕಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ(ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಮೀ ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು.)
9. ಮಗುವಿನ ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು (ಎತ್ತರ, ತೂಕ, ರಕ್ತದ ಗುಂಪು)
10. ಮಗುವಿನ ವರ್ಷ ದಿನಾಂಕ 31-05-2025ಕ್ಕೆ 03 ವರ್ಷ ತುಂಬಿರಬೇಕು ಹಾಗೂ 04 ವರ್ಷದ ಒಳಗಿನ ವಿದ್ಯಾರ್ಥಿಗಳು ನರ್ಸರಿ ತರಗತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸೂಚನೆ: ಅರ್ಜಿ ಪರಿಶೀಲನೆಯ ದಿನ 20-04-2025ರಂದು ಪೋಷಕರು ಮಗುವಿನ ಜೊತೆಗೆ ದಾಖಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ತರುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ: ಎಂ.ಮುನಿಶಾಮಪ್ಪ, ಹಿರಿಯ ಸಹಾಯಕ ನಿರ್ದೇಶಕರು(ಶಿಕ್ಷಣ), ಬಿಬಿಎಂಪಿ. ಮೊ.ಸಂ: 9480180152 ಸಂಪರ್ಕಿಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications