EV Charging Station: ಬೆಂಗಳೂರಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು ದರ ಎಷ್ಟು?
ಬೆಂಗಳೂರು, ಫೆಬ್ರವರಿ 29: ಇತ್ತೀಚಿಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಕಾರು ಸೇರಿದಂತೆ ಎಲೆಕ್ಟ್ರಿಕ್ ಬಸ್ ಹಾಗೂ ಮಿನಿ ಬಸ್‌ಗಳು ಸಂಚಾರ ನಡೆಸುತ್ತಿದೆ.
ಬೆಂಗಳೂರಿನ ಎಲೆಕ್ಟ್ರಿಕ್ ವಾಹನಗಳ ಮಾಲೀಕರ ಪಾಲಿಗೆ ಸಿಹಿ ಸಿಕ್ಕಿದ್ದು, ನಗರದಲ್ಲಿ ಶೀಘ್ರದಲ್ಲೇ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳು ತೆರೆಯಲಿದೆ. ಜೊತೆಗೆ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಳಕೆದಾರಿಕೆ ಬೇರೆಲ್ಲೂ ಸಿಗದ ಕಡಿಮೆ ದರದಲ್ಲಿ ಚಾರ್ಜಿಂಗ್ ವ್ಯವಸ್ಥೆ ಮಾಡುತ್ತಿದೆ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರ ಸುವರ್ಣಾವಕಾಶ ನೀಡುತ್ತಿದೆ. ಬೆಸ್ಕಾಂ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ವಾಹನ ಮಾಲೀಕರು ಅತ್ಯಂತ ಕಡಿಮೆ ದರದಲ್ಲಿ ಚಾರ್ಜಿಂಗ್ ಮಾಡುವ ಅವಕಾಶವನ್ನು ಸರ್ಕಾರ ನೀಡುತ್ತಿದೆ. ಅಲ್ಲದೇ ಬೆಸ್ಕಾಂ ಇವಿ ಚಾರ್ಜಿಂಗ್ ಕೇಂದ್ರಗಳ ಸುದುಪಯೋಗ ಪಡಿಸಿಕೊಳ್ಳುವಂತೆ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಮನವಿ ಮಾಡಿದ್ದಾರೆ.
ಬೆಸ್ಕಾಂನ ಇವಿ ಚಾರ್ಜಿಂಗ್ ಕೇಂದ್ರಗಳ ದರಗಳು(ಪ್ರತಿ ಯೂನಿಟ್‌ಗೆ)
ವೇಗದ ಚಾರ್ಜಿಂಗ್- 7.38 ರೂಪಾಯಿ
ಸಾಮಾನ್ಯ ಚಾರ್ಜಿಂಗ್(DC)-6.71 ರೂಪಾಯಿ
ಸಾಮಾನ್ಯ ಚಾರ್ಜಿಂಗ್(AC)-6.57 ರೂಪಾಯಿ
ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಅಂಕಿಅಂಶಗಳ ಪ್ರಕಾರ, 5,059 ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಬೆಂಗಳೂರು ನಗರ ಜಿಲ್ಲೆಯು 4,281 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದ್ದು, ರಾಜ್ಯದಲ್ಲಿ ಶೇಕಡಾ 85% ರಷ್ಟು ಚಾರ್ಜಿಂಗ್ ಕೇಂದ್ರಗಳು ಬೆಂಗಳೂರಿನಲ್ಲಿದೆ.
ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮಹಾರಾಷ್ಟ್ರ (3,079), ದೆಹಲಿ (1,886), ಕೇರಳ (958), ತಮಿಳುನಾಡು (643), ಉತ್ತರ ಪ್ರದೇಶ (583), ಮತ್ತು ರಾಜಸ್ಥಾನ (500 ) ಚಾರ್ಜಿಂಗ್ ಕೇಂದ್ರಗಳಿವೆ. ಬೆಂಗಳೂರಿನಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಗೊತ್ತುಪಡಿಸಿದ ಏಜೆನ್ಸಿಯಾದ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಾರ, ಇವಿಗಳ ಅಳವಡಿಕೆಯಲ್ಲಿ ಇತ್ತೀಚಿಗೆ ಗಮನಾರ್ಹ ಏರಿಕೆ ಕಂಡುಬಂದಿದೆ.












Click it and Unblock the Notifications