Property prices in Bengaluru: ಬೆಂಗಳೂರಿನಲ್ಲಿ ಮಧ್ಯಮ ವರ್ಗದವರಿಗೆ ಕೈಗೆಟಕುತ್ತಿಲ್ಲ ವಸತಿ ಬೆಲೆಗಳು- ಅಂಕಿಅಂಶ, ವರದಿ, ವಿವರ

ಬೆಂಗಳೂರು, ಆಗಸ್ಟ್‌ 17: ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆಗಳು ಆಕಾಶದೆತ್ತರಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ ಭೂಮಿ ಅಥವಾ ವಸತಿ ಮನೆಗಳನ್ನು ಕೊಂಡುಕೊಳ್ಳುವುದು ಮಧ್ಯಮ ವರ್ಗದ ಜನರಿಗೆ ಸವಾಲಾಗಿ ಪರಿಣಮಿಸಿದೆ. ಮಹಾನಗರದಲ್ಲಿ ವಸತಿ ಪ್ರಾಪರ್ಟಿ ದರಗಳು ಶೇಕಡಾ 9.8 ರಷ್ಟು ಏರಿಕೆಯಾಗಿದ್ದು, 2023 ರ ಮೊದಲ ತ್ರೈಮಾಸಿಕದಲ್ಲಿ ನಗರದ ಸರಾಸರಿ ಬೆಳವಣಿಗೆ 9.3 ಶೇಕಡಾವನ್ನು ದಾಟಿದೆ.

ಬೆಂಗಳೂರು ಅಷ್ಟೇ ಅಲ್ಲದೇ, ದಕ್ಷಿಣ ಭಾರತದ ಮಹಾನಗರಗಳಾದ ಹೈದರಾಬಾದ್‌ ಹಾಗೂ ಚೆನ್ನೈಗಳಲ್ಲೂ ಭೂಮಿ ಬೆಲೆ ಭಾರೀ ಏರಿಕೆ ಕಂಡಿದೆ.

housing-prices-unaffordable

ಮುಂಬೈ ಮತ್ತು ದೆಹಲಿ ( ರಾಷ್ಟ್ರ ರಾಜಧಾನಿ ಪ್ರದೇಶ ) ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿರುವ ದಕ್ಷಿಣ ಭಾರತದ ಮಹಾನಗರಗಳಲ್ಲಿ ಭೂಮಿಯ ಬೆಲೆ ಏರುತ್ತಲೇ ಇದೆ.

ಪ್ರಾಪರ್ಟಿ ಸಲಹಾ ಮತ್ತು ನಿರ್ವಹಣಾ ಸಂಸ್ಥೆ ನೈಟ್ ಫ್ರಾಂಕ್‌ನ ವರದಿಯ ಪ್ರಕಾರ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ನಗರಗಳಲ್ಲಿ ಇಎಂಐ ಮತ್ತು ಆದಾಯ ಅನುಪಾತವು ಉತ್ತರ ಭಾರತದ ನಗರಗಳಿಗಿಂತ ( ದೆಹಲಿ ಹಾಗೂ ಮುಂಬೈ ನಗರಗಳನ್ನು ಹೊರತುಪಡಿಸಿ ) ಹೆಚ್ಚಾಗಿದೆ.

housing-prices-unaffordable

ಬೆಂಗಳೂರಿನಲ್ಲಿ 75 ಲಕ್ಷ ರೂಪಾಯಿಯಿಂದ 1 ಕೋಟಿ ಬೆಲೆಯ ಪ್ರಾಪರ್ಟಿಗಳ ಬೇಡಿಕೆಯು ಶೇಕಡ 28 ರಷ್ಟಿದೆ. ಆ ನಂತರ 50ರಿಂದ 75 ಲಕ್ಷ ರೂಪಾಯಿಗಳ ಪ್ರಾಪರ್ಟಿಗಳ ಬೇಡಿಕೆಯು ಶೇಕಡಾ 24 ರಷ್ಟಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಒಟ್ಟು ಪೂರೈಕೆಯ ಶೇ 45 ರಷ್ಟನ್ನು 2 ಬಿಎಚ್‌ಕೆ ಹೊಂದಿದ್ದು, 3 ಬಿಎಚ್‌ಕೆ ಫ್ಲ್ಯಾಟ್‌ಗಳು ಶೇ 42 ರಷ್ಟು ಪಾಲನ್ನು ಹೊಂದಿವೆ.

housing-prices-unaffordable

ಉತ್ತರ ಬೆಂಗಳೂರಿನ ಏರ್‌ಪೋರ್ಟ್ ರೋಡ್ ಕಾರಿಡಾರ್‌ನಲ್ಲಿರುವ ಆಸ್ತಿ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗೆ ಸಮೀಪವಿರುವ ಆಸ್ತಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿವೆ.

ಥಣಿಸಂದ್ರದಲ್ಲಿ ಅತಿ ಹೆಚ್ಚು ಬಾಡಿಗೆ ಬೇಡಿಕೆ ( ಶೇ 31 ) ಇದೆ. ಯಲಹಂಕದಲ್ಲಿ ( ಶೇ 29 ) ಮತ್ತು ಹೆಣ್ಣೂರಿನಲ್ಲಿ ( ಶೇ 17 ) ರಷ್ಟು ಬಾಡಿಕೆ ಬೇಡಿಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+