ಯೂನಿಫಾರ್ಮ್ ಒಳಗೆ ಬಚ್ಚಿಟ್ಟುಕೊಂಡು 51 ಜೊತೆ ಬಟ್ಟೆ ಕದ್ದ!

ಬೆಂಗಳೂರು, ನವೆಂಬರ್ 2: ಕಾಡುಗೋಡಿಯ ಶೋರೂಂ ಒಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾತ ತನ್ನ ಸಮವಸ್ತ್ರದಲ್ಲಿ ಬಚ್ಚಿಟ್ಟುಕೊಂಡು 65 ಸಾವಿರ ಮೌಲ್ಯದ 51 ಜೊತೆ ಬಟ್ಟೆಗಳನ್ನು ಕದ್ದಿದ್ದಾನೆ. ಆತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈಗ ಕಾಡುಗೋಡಿ ಪೊಲೀಸರ ಅತಿಥಿಯಾಗಿದ್ದಾನೆ.

ಐಟಿಪಿಎಲ್ ರಸ್ತೆಯಲ್ಲಿನ ಬಟ್ಟೆಯೊಂದರ ಶೋರೂಂನಲ್ಲಿ ಕೋಲಾರ್ ಮೂಲದ ಆಕಾಶ್ ಸೆಪ್ಟೆಂಬರ್ 7ರಿಂದ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲಸಕ್ಕೆ ಸೇರಿದ ಇಪ್ಪತ್ತೇ ದಿನಕ್ಕೆ ತನ್ನ ಕೈ ಚಳಕ ತೋರಿಸಿದ್ದಾನೆ. ಇದೇ ಶೋರೂಂನಲ್ಲಿ ಕೆಲಸ ಮಾಡುತ್ತಿರುವ ನೌಕರರೊಬ್ಬರು ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರ್ಯಾಂಡೆಡ್ ಬಟ್ಟೆಗಳನ್ನು ತೊಡುವ, ಐಷಾರಾಮಿ ಜೀವನ ನಡೆಸಬೇಕು ಎಂಬ ಆಸೆ ಇರುವ ಆಕಾಶ್, ಕೆಲಸಕ್ಕೆ ಸೇರಿದ ದಿನದಿಂದಲೇ ಒಂದೊಂದೇ ಬಟ್ಟೆಗಳನ್ನು ಕದಿಯಲು ಆರಂಭಿಸಿದ್ದಾನೆ. ಹೆಚ್ಚು ಜನಸಂದಣಿ ಇರದ, ಭದ್ರತಾ ಸಿಬ್ಬಂದಿ ಇರದ ಶೋರೂಂನ ಮೊದಲನೇ ಮಾಳಿಗೆಗೆ ಹೋಗಿ, ಅಲ್ಲಿ ಮರೆಯಲ್ಲಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಅದರ ಮೇಲೆ ಯೂನಿಫಾರ್ಮ್ ಹಾಕಿಕೊಂಡು ಏನೂ ಅನುಮಾನ ಬರದಂತೆ ಹೊರಗೆ ಹೋಗುತ್ತಿದ್ದನು.

Housekeeper Theft 51 Set Of Clothes From Showroom In Bengaluru

ಆದರೆ ಲೆಕ್ಕ ಮಾಡುತ್ತಿದ್ದ ಸಂದರ್ಭ ಅಂಗಡಿಯವರಿಗೆ ಒಟ್ಟಾರೆ 65,000 ಮೌಲ್ಯದ 51 ಜೊತೆ ಬಟ್ಟೆಗಳು ವ್ಯತ್ಯಾಸ ಬಂದಿರುವುದು ಕಂಡುಬಂದಿದೆ. "ನಮಗೆ ಈತ ಕಳವು ಮಾಡುತ್ತಿದ್ದುದು ಗೊತ್ತೇ ಇರಲಿಲ್ಲ. ಸೆಪ್ಟೆಂಬರ್ 26ಕ್ಕೆ ಸಿಸಿ ಟಿವಿ ಪರಿಶೀಲಿಸುತ್ತಿದ್ದಾಗ ಈತ ಮಾಡುತ್ತಿದ್ದ ಕೆಲಸ ಬಹಿರಂಗಗೊಂಡಿದೆ" ಎಂದು ನೌಕರರೊಬ್ಬರು ಹೇಳಿಕೆ ನೀಡಿದ್ದಾರೆ. ಕೊನೆಗೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಪರೀಕ್ಷಿಸಿದಾಗ, ಆಕಾಶ್ ತನ್ನ ಬ್ಯಾಗ್ ಹಾಗೂ ಸಮವಸ್ತ್ರದ ಒಳಗೆ ಬಟ್ಟೆಗಳನ್ನು ತೊಟ್ಟಿದ್ದದ್ದು ತಿಳಿದುಬಂದಿದೆ. ಒಂದೇ ಬಾರಿ ಆರು ಜೊತೆ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಟ್ಟೆಗಳನ್ನು ಕದಿಯುತ್ತಿರುವುದು ಭದ್ರತಾ ಸಿಬ್ಬಂದಿಗೆ ತಿಳಿಯಬಾರದೆಂದು ಬಟ್ಟೆಗಳಲ್ಲಿರುತ್ತಿದ್ದ ಮ್ಯಾಗ್ನೆಟ್ ಟ್ಯಾಗ್ ಅನ್ನೂ ಕಿತ್ತು ಹಾಕಿಕೊಳ್ಳುತ್ತಿದ್ದ. ಶೋರೂಂ ಸಿಬ್ಬಂದಿ ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕಾಶ್ ಮನೆಯಲ್ಲಿ ಹದಿನೇಳು ಜೊತೆ ಬಟ್ಟೆಗಳು ದೊರೆತಿದೆ. ಉಳಿದವನ್ನು ಕಡಿಮೆ ಬೆಲೆಗೆ ಮಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೋಡಿ ಪೊಲೀಸರು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+