ಬೆಂಗಳೂರಿನಲ್ಲಿ ದಿನ ದಿನಕ್ಕೆ ಗಗನಕ್ಕೇರುತ್ತಿದೆ ಮನೆ, ಪಿಜಿ ಬಾಡಿಗೆ: ಹೈರಾಣಾದ ಬಾಡಿಗೆದಾರರು!
ಬೆಂಗಳೂರು, ಏಪ್ರಿಲ್. 18: ದೇಶದ ಐಟಿ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿದೆ. ಅದರೆ, ಇದಕ್ಕೆ ಅನೇಕ ಬಹು-ರಾಷ್ಟ್ರೀಯ ಮತ್ತು ಐಟಿ ಕಂಪನಿಗಳು ಕಾರಣವಲ್ಲ. ಅದಕ್ಕಿಂತ ಹೆಚ್ಚಾಗಿ ರಾಜ್ಯದ ಹೊರಗಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ಹಲವಾರು ಶಿಕ್ಷಣ ಸಂಸ್ಥೆಗಳ ಕಾರಣದಿಂದಾಗಿ. ಆದರೆ, ಈ ವಿದ್ಯಾರ್ಥಿಗಳು ಮಾತ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
What's happening Bangalore, if I had this kind of money, I would rather make a down payment & loan one house!
— Aditi Gupta (@AditiGupta_21) April 14, 2023
😭😭 #Bangalore #bengalururents @magicbricks @nobrokercom @99acresIndia
Your useless paid subscriptions would only be beneficial if you start assessing the right rent pic.twitter.com/sviy53M7tK
ಬೇರೆ ರಾಜ್ಯಗಳಿಂದ ಬರುವ ಜನರ ಹಿನ್ನೆಲೆ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಸಹ ಪ್ರವರ್ಧಮಾನಕ್ಕೆ ಬರುತ್ತಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ಮನೆಗಳ ಬಾಡಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಾಂಕ್ರಾಮಿಕ ರೋಗ ದೇಶವನ್ನು ಆವರಿಸಿಕೊಂಡಾಗ ಅನೇಕ ಮಂದಿ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಮತ್ತು ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಅಂಟಿಕೊಂಡರು. ಆದರೆ, ಈಗ, ಅವರೆಲ್ಲಾ ನಗರಗಳಿಗೆ ಹಿಂತಿರುಗುತ್ತಿದ್ದು, ಮನೆ ಬಾಡಿಗೆಗಳು ಗಗನಕ್ಕೇರಿವೆ.

ಬೆಂಗಳೂರಿನಲ್ಲಿ ಸುಮಾರು 1.5 ಮಿಲಿಯನ್ ಟೆಕ್ಕಿಗಳು ನೆಲೆಸಿದ್ದಾರೆ. ಪೇಯಿಂಗ್ ಗೆಸ್ಟ್ ವಸತಿ ಮತ್ತು ಮನೆಗಳ ಬೇಡಿಕೆ ಯಾವಾಗಲೂ ಹೆಚ್ಚಾಗಿರುತ್ತದೆ. ಕೋವಿಡ್ ನಂತರ, ಬಾಡಿಗೆಗಳು ಕನಿಷ್ಠ 25% ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ . ಈ ವರ್ಷ ಮನೆ ಬಾಡಿಗೆಗಳು ಮತ್ತೆ 5 ರಿಂದ 12% ರಷ್ಟು ಹೆಚ್ಚಾಗುತ್ತವೆ. ಇದರ ಜೊತೆಗೆ ಮನೆ ಮಾಲೀಕರನ್ನು ಕಡಿಮೆ ಬಾಡಿಗೆಗೆ ಒಪ್ಪಿಸುವುದು ಕಷ್ಟವಾಗಿದೆ ಎಂದಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿ ಸುಮಾರು 1,000 ಚದರ ಅಡಿ ಅಪಾರ್ಟ್‌ಮೆಂಟ್ (ಎರಡು ಬಿಎಚ್‌ಕೆ) ಗೆ 27,000 ರೂಪಾಯಿ ಬಾಡಿಗೆ ನಿಡಲಾಗುತ್ತಿದ್ದು, ಈ ವರ್ಷ ಸುಮಾರು 7-12% ರಷ್ಟು ಬಾಡಿಗೆ ಹೆಚ್ಚಾಗಲಿದೆ ಎಂದು ಅನಾರಾಕ್ ರಿಸರ್ಚ್ ಬಿಡುಗಡೆ ಮಾಡಿರುವ ಡೇಟಾ ತೋರಿಸುತ್ತದೆ.
ಔಟರ್ ರಿಂಗ್ ರೋಡ್, ಬೆಳ್ಳಂದೂರು ಮತ್ತು ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ವಸತಿ ಪ್ರದೇಶಗಳು ಸುಮಾರು ಅರ್ಧ ಮಿಲಿಯನ್ ಟೆಕ್ಕಿಗಳನ್ನು ಹೊಂದಿರುವುದರಿಂದ ಅಲ್ಲಿ ಬಾಡಿಗೆ ಮತ್ತಷ್ಟು ಹೆಚ್ಚಳ ಕಾಣುವ ಸಾಧ್ಯತೆಯಿದೆ ಎಂದು ರೀಲರ್‌ಗಳು ಹೇಳುತ್ತಾರೆ. ಕೆಲವು ಪ್ರದೇಶಗಳಲ್ಲಿ, ಬಾಡಿಗೆಗಳು ಸೇಕಡಾ 30 ರಿಂದ 50 ರಷ್ಟು ಹೆಚ್ಚಾಗಿದೆ.

2023 ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು ಕೇವಲ 13,500 ವಸತಿ ಘಟಕಗಳನ್ನು ಸೇರಿಸಿದೆ ಎಂದು ಅನಾರಾಕ್ ವರದಿ ಹೇಳಿದೆ. ಇದು ಮುಂಬೈನಲ್ಲಿ 55% ಜಿಗಿತಕ್ಕೆ ಹೋಲಿಸಿದರೆ ಕೇವಲ 3% ಹೆಚ್ಚಾಗಿದೆ. 2019 ರಿಂದ 2022 ರವರೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 18% ಸರಾಸರಿ ಬಾಡಿಗೆ ಬೆಳವಣಿಗೆ ಕಂಡುಬಂದಿದೆ. ಆದರೆ ರಾಜಾಜಿ ನಗರದಲ್ಲಿ ಇದು 16% ಆಗಿದೆ. ವರ್ತೂರಿನಲ್ಲಿ, ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು 10% ಬಾಡಿಗೆ ಹೆಚ್ಚಾಗಿದೆ.
*ಪಿಜಿ ವಸತಿ ಸಮಸ್ಯೆಗಳು*
ಟೆಕ್ಕಿಗಳು ತಮ್ಮ ಬಜೆಟ್‌ನೊಳಗೆ ಉತ್ತಮ ಅಪಾರ್ಟ್‌ಮೆಂಟ್‌ಗಳನ್ನು ಹುಡುಕಲು ಹೆಣಗಾಡುತ್ತಿದ್ದರೆ, ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿಯೂ ಸಹ 25 ರಿಂದ 40% ವರೆಗೆ ಬಾಡಿಗೆಗಳಲ್ಲಿ ಏರಿಕೆ ಕಂಡಿದೆ. ಶಿಕ್ಷಣ ಸಂಸ್ಥೆಗಳ ಬಳಿ ಇರುವ ಪಿಜಿಗಳು ಪ್ರತಿ ವ್ಯಕ್ತಿಗೆ ರೂ 13,000 (ಮೂವರ ಹಂಚಿಕೆ) , ಒಬ್ಬರೇ ಇರಲು 21, 000 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ವಿದ್ಯಾರ್ಥಿಗಳು ತಮ್ಮ ಬಜೆಟ್‌ನೊಳಗೆ ಬಾಡಿಗೆ ಬೇಕು ಎಂದು ಹುಡುಕುವುದಾದರೇ ಸ್ಥಳ ಅಥವಾ ಸೌಕರ್ಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸ್ಥಿತಿಯಿದೆ. ಇನ್ನು, ಹಲವಾರು ವಿದ್ಯಾರ್ಥಿಗಳು ಕಡಿಮೆ ಬಜೆಟ್‌ನಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಲು ಮತ್ತು ಜಾಗವನ್ನು ಹಂಚಿಕೊಳ್ಳಲು ತೊಡಗಿರುವುದು ಕಾಣಬಹುದು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ನೆಟಿಜನ್‌ಗಳು ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಬಾಡಿಗೆದಾರರ ಒಕ್ಕೂಟ ಇರಬೇಕು ಎಂದು ಕೆಲವು ನೆಟ್ಟಿಗರು ಒತ್ತಾಯಿಸಿದ್ದಾರೆ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್












Click it and Unblock the Notifications