Bengaluru Hotel: ಮಧ್ಯರಾತ್ರಿ 2 ಗಂಟೆಯವರೆಗೆ ಬೆಂಗಳೂರಿನ ಹೋಟೆಲ್‌ಗಳು ಓಪನ್?

ಬೆಂಗಳೂರು, ಜುಲೈ. 10: ಸಿಲಿಕಾನ್ ಸಿಟಿಯಲ್ಲಿ ಜನಸಂಖ್ಯೆ ತುಂಬಿ ತುಳುಕುತ್ತಿದೆ. ಕೆಲಸದ ನಿಮಿತ್ತ ತಮ್ಮ ಊರುಗಳನ್ನು ತೊರೆದು ಉದ್ಯೋಗನಗರಿಯನ್ನು ಸೇರಿದವರೆ ಇಲ್ಲಿ ಅಧಿಕ. ಅದರಲ್ಲೂ ಯುವಜನತೆಯಂತೂ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಇವರ ಹೊಟ್ಟೆ ತುಂಬಿಸುವುದು ಹೋಟೆಲ್‌ಗಳು.

ಮಧ್ಯರಾತ್ರಿಯ ಸಮಯದಲ್ಲಿಯೂ ಹೋಟೆಲ್‌ಗಳಿಗಾಗಿ ಜನ ಹುಡುಕುತ್ತಾರೆ. ದೊಡ್ಡ ದೊಡ್ಡ ಹೋಟೆಲ್‌ಗಳ ಜೊತೆಗೆ ಬಿದಿ ಬದಿಯ ಸಣ್ಣಪುಟ್ಟ ಹೋಟೆಲ್‌ಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಇದೇ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮುಚ್ಚುವ ಸಮಯವನ್ನು ಒಂದು ಗಂಟೆ ವಿಸ್ತರಿಸುವಂತೆ ಮನವಿ ಬಂದಿದೆ.

Hotel association writes to DyCM DK Shivakumar seek service hours till 2 am

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಒಂದು ಗಂಟೆ ಮತ್ತೆ ಸಮಯ ವಿಸ್ತರಿಸುವಂತೆ ಹೋಟೆಲ್ ಅಸೋಸಿಯೇಷನ್ ​​ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದೆ. ಎಲ್ಲಾ ಹೋಟೆಲ್, ರೆಸ್ಟೋರೆಂಟ್‌ಗಳನ್ನು ಪ್ರಸ್ತುತ ಮಧ್ಯರಾತ್ರಿ 1 ಗಂಟೆಯ ವರೆಗೂ ತೆರೆಯಬಹುದು.

"ಸುಮಾರು 8-10 ತಿಂಗಳ ಹಿಂದೆ, ನಾವು ಎಲ್ಲಾ ಹೋಟೆಲ್‌ಗಳಿಗೆ, ವಿಶೇಷವಾಗಿ ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳ ಬಳಿ ಇರುವವರಿಗೆ 24/7 ಸೇವೆ ನೀಡುವ ಸಲುವಾಗಿ 24 ಗಂಟೆ ಹೋಟೆಲ್ ಓಪನ್ ಇರಬೇಕು ಎಂದು ವಿನಂತಿಸಿದ್ದೇವೆ. ಸಾಮಾನ್ಯವಾಗಿ ತಡರಾತ್ರಿಯವರೆಗೆ ಪ್ರಯಾಣಿಸುವ ಗ್ರಾಹಕರಿಗೆ ಸೇವೆ ನೀಡಲು ಪ್ರಸ್ತುತ ಸಮಯವನ್ನು 2 ಗಂಟೆಗೆ ಹೆಚ್ಚಿಸುವಂತೆ ನಾವು ಈಗ ಒತ್ತಾಯಿಸುತ್ತಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ​​​​(BBHA) ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.

Hotel association writes to DyCM DK Shivakumar seek service hours till 2 am

ಜುಲೈ 23 ರಂದು ಮಂಡನೆಯಾಗಲಿರುವ ಮುಂಬರುವ ಕೇಂದ್ರ ಬಜೆಟ್‌ಗೆ ತಮ್ಮ ಸಲಹೆಗಳು ಮತ್ತು ನಿರೀಕ್ಷೆಗಳ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ. ಹೋಟೆಲ್ ಉದ್ಯಮಕ್ಕೆ ಸುಲಭವಾಗಿ ವ್ಯಾಪಾರ ಮಾಡಲು ಉತ್ತೇಜಿಸಲು, ಎಲ್ಲಾ ಪರವಾನಗಿಗಳನ್ನು ಸಿಂಗಲ್ ವಿಂಡೋ ಅನುಮತಿಗಳ ಅಡಿಯಲ್ಲಿ ತರಬೇಕು ಎಂದು ಸಂಘ ವಿನಂತಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿಗಳನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಸ್ತುತ ಅಗತ್ಯವಿಲ್ಲದ ಕಾರಣ ಸಾರ್ವಜನಿಕ ಕಾರ್ಯಕ್ಷಮತೆ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದೂ ಸೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+