Get Updates
Get notified of breaking news, exclusive insights, and must-see stories!

ಬಿಜೆಪಿ ಶಾಸಕನ 'ಆ' ವಿಡಿಯೋಗೆ ಲಕ್ಷಾಂತರ ಹಣ ಕೊಟ್ಟಿದ್ದ ಕಾಂಗ್ರೆಸ್‌ ಶಾಸಕ

ಬೆಂಗಳೂರು, ನವೆಂಬರ್ 30: ಗದಗ ಜಿಲ್ಲಾ ವ್ಯಾಪ್ತಿಯ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಬಿಡುಗಡೆ ಆಗಿ ಕೋಲಾಹಲ ಸೃಷ್ಟಿಸಿದೆ.

ಬಿಜೆಪಿ ಶಾಸಕನ್ನು ಹನಿಟ್ರ್ಯಾಪ್‌ ಗೆ ಕೆಡವಿ ಕೋಟಿ ರೂಪಾಯಿ ಹಣ ಪೀಕಿಸಿದ್ದ ಆರೋಪಿ ರಾಘವೇಂದ್ರ. ಅದೇ ವಿಡಿಯೋವನ್ನು ಕಾಂಗ್ರೆಸ್‌ ಶಾಸಕನಿಗೆ ಮಾರಾಟ ಮಾಡಿದ್ದ ಎನ್ನುವ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ.

ಕಾಂಗ್ರೆಸ್‌ನ ಹಾಲಿ ಶಾಸಕ, ಮಾಜಿ ಸಚಿವರೊಬ್ಬರನ್ನು ಕೆಲವು ತಿಂಗಳುಗಳ ಹಿಂದೆ ಭೇಟಿ ಆಗಿದ್ದ ಆರೋಪಿ ರಾಘವೇಂದ್ರ ಬಿಜೆಪಿ ಶಾಸಕರ ರಾಸಲೀಲೆ ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ತೋರಿಸಿ ಹಣ ಕೊಟ್ಟರೆ ವಿಡಿಯೋ ನಿಮಗೆ ಕೊಡುತ್ತೇನೆ ಎಂದು ಕೇಳಿದ್ದ.

Honey Trap: Accused Sold BJP MLAs Video To Congress Leader

ಸ್ಕ್ರೀನ್‌ಶಾಟ್ ನೋಡಿ ಕಾಂಗ್ರೆಸ್ ಶಾಸಕ ರಾಜಕೀಯ ವಿರೋಧಿಯನ್ನು ಹಣಿಸಲು ಪ್ರಬಲ ಅಸ್ತ್ರ ಇದಾಗುತ್ತದೆಯೆಂದು ಲಕ್ಷಾಂತರ ಹಣ ಕೊಟ್ಟು ವಿಡಿಯೋವನ್ನು ಖರೀದಿಸಿದ್ದ. ವಿಡಿಯೋವನ್ನು ಉಪಚುನಾವಣೆ ಸಮಯಕ್ಕೆ ಬಿಡುಗಡೆ ಮಾಡಲೆಂದೇ ಆ ಶಾಸಕ ಖರೀದಿಸಿದ್ದ.

ಯಾವುದೇ ಶಾಸಕರನ್ನು ಹನಿಟ್ರ್ಯಾಪ್ ಮಾಡಿದಾಗಲೂ ಶಾಸಕರನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಜೊತೆಗೆ ಅದೇ ವಿಡಿಯೋವನ್ನು ರಾಜಕೀಯ ವಿರೋಧಿಗಳಿಗೆ ಮಾರಿ ಹಣ ಸಂಪಾದನೆ ಮಾಡುತ್ತಿದ್ದನಂತೆ ರಾಘವೇಂದ್ರ.

ರಾಘವೇಂದ್ರ ತನಿಖೆಯಿಂದ ಹಲವು ಶಾಕಿಂಗ್ ಸಂಗತಿಗಳು ಬಯಲಾಗುತ್ತಿದ್ದು, ಹನಿಟ್ರ್ಯಾಪ್‌ ಗೆ ಸಿಲುಕಿರುವ ಕೆಲವು ಶಾಸಕರುಗಳು ತಮ್ಮ ವಿಡಿಯೋವನ್ನು ಡಿಲೀಟ್ ಮಾಡುವಂತೆ ಸಿಸಿಬಿ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರಂತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+