ಸಂಜೆ ಆದ್ರೆ ಶೆಡ್ಡಿಗ್ ಬಾ ಅಂತಾರೆ; ಹೈಕೋರ್ಟ್ ಜಡ್ಜ್ ವಿಡಿಯೋ ವೈರಲ್
'ಶೆಡ್ಡಿಗ್ ಬಾ' ನಟ ದರ್ಶನ್ ಕೊಲೆ ಪ್ರಕರಣದ ಸುದ್ದಿ ಪ್ರಸಾರದ ವೇಳೆ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಹೇಳಿದ್ದ ಇದೊಂದು ಪದ ಬಳಿಕ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿತ್ತು, ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಷೆಯವರು ಕೂಡ ಇದನ್ನು ರೀಲ್ಸ್ ಮಾಡಿದ್ದರು. ಎಲ್ಲೆಡೆ ಭಾರಿ ಜನಪ್ರಿಯವಾಗಿರುವ 'ಶೆಡ್ಡಿಗ್ ಬಾ' ಪದವನ್ನು ಇದೀಗ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಕೂಡ ವಿಚಾರಣೆ ಸಂದರ್ಭದಲ್ಲಿ ಬಳಿಸಿದ್ದು ಭಾರಿ ವೈರಲ್ ಆಗಿದೆ.
ತಮ್ಮ ವಿಚಾರಣೆಯ ಶೈಲಿಯಿಂದಲೇ ಸಾಕಷ್ಟು ಗಮನ ಸೆಳೆದಿರುವ ಹೈಕೋರ್ಟ್ ನ್ಯಾಯಾಧೀಶರಾದ ವಿ. ಶ್ರೀಷಾನಂದ ಅವರು, ಮೀಟರ್ ಬಡ್ಡಿ ದಂಧೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಶೆಡ್ಡಿಗ್ ಬಾ ಎಂದರು. ಅವರು ಮಾತನಾಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಹಲವು ಸಮಸ್ಯೆಗಳ ಬಗ್ಗೆ ಅವರಿಗೆ ಗೊತ್ತಿರುವ ಮಾಹಿತಿ ನೋಡಿ ಜನ ಅಚ್ಚರಿಪಟ್ಟಿದ್ದಾರೆ.

ನ್ಯಾಯಾಧೀಶರು ಹೇಳಿದ್ದೇನು?
ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ನಡೆಯುವ ಮೀಟರ್ ಬಡ್ಡಿ ದಂಧೆಯ ಬಗ್ಗೆ ನ್ಯಾಯಾಧೀಶ ವಿ. ಶ್ರೀಷಾನಂದ ವಿವರಣೆ ನೀಡಿದರು. ಬೆಳಿಗ್ಗೆ ವೇಳೆ ಸಿಟಿ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಬೆಳಿಗ್ಗೆ 1000 ರೂಪಾಯಿ ಕೊಡುತ್ತಾರೆ. ವ್ಯಾಪಾರ ಮುಗಿದ ಬಳಿಕ ಸಂಜೆ 1200 ರೂಪಾಯಿ ವಾಪಸ್ ಕೊಡಬೇಕು.
ಶೆಡ್ಡಿಗೆ ಬಾ reached Karnataka High Court 😅🤣 pic.twitter.com/80zg0WTLfv
— 👑Che_ಕೃಷ್ಣ🇮🇳💛❤️ (@ChekrishnaCk) September 18, 2024
ಆಟೋ ಡ್ರೈವರ್ ಗಳು ಕೂಡ ಬೆಳಿಗ್ಗೆ ಬಂದು ಆಟೋ ಬಾಡಿಗೆಗೆ ತೆಗೆದುಕೊಂಡು ಹೋಗಬೇಕು, ಸಂಜೆಗೆ 250 ರೂಪಾಯಿ ಕೊಡಬೇಕು, ಎಷ್ಟು ಬೇಕಾದರು ಆಟೋ ಓಡಿಸಿ ಸಂಪಾದನೆ ಮಾಡಬಹುದು, ಟ್ರಾಫಿಕ್ ಫೈನ್ ಕಟ್ಟು, ಪೊಲೀಸರ ಜೊತೆ ಹೊಡೆದಾಡಿಕೊ ಅದಕ್ಕೂ ನನಗೂ ಸಂಬಂಧವಿಲ್ಲ, 250 ರೂಪಾಯಿ ಕೊಡದೇ ಇದ್ದರೆ ಶೆಡ್ಡಿಗ್ ಬಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಜಡ್ಜ್ ಕೂಡ ತಮ್ಮು ಸುತ್ತ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಅದೆಷ್ಟು ಗಮನ ಇಟ್ಟಿರುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ. ಹೈಕೋರ್ಟ್ ಜಡ್ಜ್ ಆದವರಿಗೆ ಸಿಟಿ ಮಾರ್ಕೆಟ್‌ನಲ್ಲಿ ನಡೆಯುವ ಇಂತಹ ಮೀಟರ್ ಬಡ್ಡಿ ದಂಧೆ, ಆಟೋದವರ ಕಷ್ಟಗಳ ಪರಿಚಯ ಕೂಡ ಇದೆ ಎನ್ನುವುದಕ್ಕೆ ಇದು ಸಾಕ್ಷಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೊಪಿ ಪವಿತ್ರಾ ಗೌಡ ಸಹೋದರ ವಿಡಿಯೋ ಮಾಡುತ್ತಿದ್ದ ಮಾಧ್ಯಮದವರಿಗೆ ನಿಮಗೆ ಮಾಡಕ್ ಕೆಲಸ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ನಿರೂಪಣೆ ವೇಳೆ ಹೌದು ನಮಗೆ ಕೆಲಸ ಇಲ್ಲ, ಶೆಡ್ಡಿಗ್ ಬಾ, ಶೆಡ್ಡಿಗ್ ಹೋಗಿ ಕುಂಟೆ ಬಿಲ್ಲೆ ಆಡೋಣ ಬಾ ಎಂದಿದ್ದರು. ಇದೇ ಡೈಲಾಗ್ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಹಾಡುಗಳು ಕೂಡ ಬಂದಿದ್ದವು. ಇದೀಗ ಹೈಕೋರ್ಟ್ ಜಡ್ಜ್ ಅವರು ಕೂಡ ಇದನ್ನು ಉಲ್ಲೇಖಿಸಿದ್ದು, ಮತ್ತಷ್ಟು ವೈರಲ್ ಆಗುತ್ತಿದೆ.












Click it and Unblock the Notifications