ಕಪಿಲ್ ಶರ್ಮಾ ತಂದೆ ಸಿಕ್ಕರೆ ಮಾಹಿತಿ ನೀಡಿ

ಬೆಂಗಳೂರು, ನ.7 : ಬೆಂಗಳೂರಿನ ಅರಕೆರೆಯ ನಿವಾಸಿ ಕಪಿಲ್ ಶರ್ಮಾ ಅವರ ತಂದೆ ನ.5ರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರ ಪತ್ತೆಯಾದರೆ ಮಾಹಿತಿ ನೀಡಿ ಎಂದು ಕಪಿಲ್ ಶರ್ಮಾ ಸಾಮಾಜಿಕ ಜಾಲ ತಾಣಗಳ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.

80 ವರ್ಷದ ಸುಮಾರು 5.10 ಅಡಿ ಎತ್ತರದ ಕಪಿಲ್ ಶರ್ಮಾ ಅವರ ತಂದೆ ನ.5ರ ಸಂಜೆ ಅರಕೆರೆಯ ಮಂತ್ರಿ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನಿಂದ ಸಂಜೆ 5 ಗಂಟೆ ಸುಮಾರಿಗೆ ಹೊರಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ನಂತರ ಅವರು ಪತ್ತೆಯಾಗಿಲ್ಲ.

Missing

ಕಪಿಲ್ ಶರ್ಮಾ ಅವರ ತಂದೆಗೆ ನೆನಪಿನ ಶಕ್ತಿಯ ಕೊರತೆ ಇದೆ. ಸಂಜೆ ಅವರು ಅರಕೆರೆ ಕಡೆ ತೆರಳಿದ್ದು, ರಾತ್ರಿಯಾಗಿದ್ದರಿಂದ ರಸ್ತೆ ಮತ್ತು ವಿಳಾಸ ಸರಿಯಾಗಿ ತಿಳಿಯದೇ ನಾಪತ್ತೆಯಾಗಿರುವ ಸಾಧ್ಯತೆ ಇರುತ್ತದೆ. ಮಂತ್ರಿ ಪ್ಯಾರಡೈಸ್ ಮತ್ತು ಕಪಿಲ್ ಶರ್ಮಾ ಎಂಬ ಹೆಸರನ್ನು ಅವರು ಚೆನ್ನಾಗಿ ನೆಪಿಟ್ಟುಕೊಳ್ಳುತ್ತಾರೆ.

ತಂದೆಯ ಫೋಟೋ ಮತ್ತು ವಿವರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವ ಕಪಿಲ್ ಶರ್ಮಾ ಅವರು ಇದನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಿ, ತಂದೆಯ ಬಗ್ಗೆ ಯಾವುದೇ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. ಚಿತ್ರದಲ್ಲಿರುವ ವ್ಯಕ್ತಿ ನಿಮಗೆ ಸಿಕ್ಕರೆ ಮಾಹಿತಿ ನೀಡಿ.

ಎಲ್ಲಿಗೆ ಮಾಹಿತಿ ನೀಡಬೇಕು : ಚಿತ್ರದಲ್ಲಿರುವ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದರೆ 98452 97121,
080 26092236 ಅಥವ Mantri Paradise, O-204, Arakere, Bannerghatta Road
Bangalore 76 ವಿಳಾಸಕ್ಕೆ ಮಾಹಿತಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+