Bengaluru Rains: ಬೆಂಗಳೂರಿನಲ್ಲಿ ಮೋಡ ಗುಡುಗು ಸಿಡಿಲು ಧಾರಾಕಾರ ಮಳೆ

ಬೆಂಗಳೂರು ಏಪ್ರಿಲ್ 14: ಬೆಂಗಳೂರಿನಲ್ಲಿಂದು ಗುಡುಗು ಸಿಡಿಲು ಮಿಂಚು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಮಧ್ಯಾಹ್ನದ ನಂತರ ಕಪ್ಪು ಕಾರ್ಮೋಡ ಆವರಿಸಿದ್ದು ರಾತ್ರಿ ವೇಳೆಗೆ ಮಳೆ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದರಿಂದಾಗಿ ಬೆಂಗಳೂರಿನ ವಾತಾವರಣವೇ ಬದಲಾಗಿದೆ.

ಹೌದು ಎಂದಿನಂತೆ ನಗರದಲ್ಲಿ ಇಂದು ಬೆಳಗ್ಗೆ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಆದರೆ 12 ಗಂಟೆಯ ನಂತರ ಮೋಡ ಆವರಿಸಿ ಸಂಜೆ ಮಳೆ ಶುರುವಾಗಿದೆ. ಗುಡುಗು ಮಿಂಚಿನೊಂದಿಗೆ ಮಳೆ ಜೋರಾಗಿ ಬರಲಾರಂಭಿಸಿದೆ. ಇದರಿಂದಾಗಿ ಬೆಂಗಳೂರು ಕೂಲ್ ಕೂಲ್ ಆಗಿದೆ. ನಗರದ ವಿಜಯನಗರ, ರಾಜಾಜಿನಗರ, ಕೆಆರ್‌ ಮಾರುಕಟ್ಟೆ, ಗಾಂಧಿ ಬಜಾರ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ವರುಣನ ಅರ್ಭಟ ಜೋರಾಗಿದೆ. ಇನ್ನೂ ಹಲವೆಡೆ ಮಳೆಯಾಗುವ ವಾತಾವರಣ ನಿರ್ಮಾಣವಾಗಿದೆ.

Heavy rains begin in Bengaluru with thunderstorms

ಏಕಾಏಕಿ ಸುರಿಯುತ್ತಿರುವ ಮಳೆಗೆ ಕಚೇರಿಗಳಿಂದ ಮನೆಗೆ ತೆರಳುವವರಿಗೆ ವರುಣ ದೇವ ತೊಂದರೆಯನ್ನುಂಟು ಮಾಡಿದ್ದಾನೆ. ಹೀಗಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಂಜೆ ನಂತರ ಮಳೆ ಹೆಚ್ಚಾಗುವ ವಾತಾವರಣ ಇದ್ದರಿಂದ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದೆ.

ಇಂದಿನಿಂದ ಒಂದು ವಾರಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 14 ರಿಂದ ಏಪ್ರಿಲ್ 20ರವರೆಗೆ ಮಳೆ ಬೀಳಲಿದೆ ಎಂದು ಐಎಂಡಿ ತಿಳಿಸಿದೆ. ರಾಜ್ಯದೆಲ್ಲೆಡೆ ಒಂದು ವಾರ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ನಗರ ಮಾತ್ರವಲ್ಲದೆ ಕೊಡಗು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಗುಲ್ಬರ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ರಾಮನಗರ ಮತ್ತು ಚಾಮರಾಜನಗರ ಕಡೆಗಳೆಲ್ಲಾ ಇಂದು ಮಳೆ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+