Bengaluru Heavy Rain: ಇಂದು ಮಧ್ಯಾಹ್ನವೇ ಗುಡುಗು ಸಹಿತ ಭಾರೀ ಮಳೆ ಆರ್ಭಟ: ಟ್ರೆಂಡಿಂಗ್ ನಲ್ಲಿ ಮಳೆ

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಇಂದು ಭಾನುವಾರ ಮಧ್ಯಾಹ್ನದಿಂದಲೇ ಗುಡುಗು, ಮಿಂಚೂ ಸಹಿತ ಏಕಾಎಕಿ ಧಾಕಾರಾರ ಮಳೆ ಆರಂಭವಾಗಿದೆ. ನೋಡ ನೋಡುತ್ತಿದ್ದಂತೆ ಮಳೆ ಅಬ್ಬರಿಸಲು ಶುರುವಿಟ್ಟಿಕೊಂಡಿತು. ನಗರಾದ್ಯಂತ ವ್ಯಾಪಕ ಮಳೆ ಆಗುತ್ತಿದೆ.

ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಕಂಡಿದ್ದ ಬೆಂಗಳೂರಿನ ಜನರಿಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಳೆ ಅಬ್ಬರ ಶುರುವಾಯಿತು. ಕೋರಮಂಗಲ, ಡೈರಿ, ವೃತ್ತ, ಬೆಳ್ಳಂದೂರು, ಇಂದಿರಾನಗರ, ವಿಜಯನಗರ, ಮೆಜೆಸ್ಟಿಕ್, ವಿದ್ಯಾರಣ್ಯಪುರ, ಹೆಬ್ಬಾಳ, ಆರ್‌ಆರ್‌ ನಗರ, ಯಶವಂತಪುರ, ಚಾಮರಾಜಪೇಟೆ, ಜೆಪಿ ನಗರ, ಜಯನಗರ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಆಯಿತು.

Heavy Rain Started in Many Parts of Bengaluru Traffic Issues In Trending in Social Media

ದಿಢೀರ್ ಬಂದ ಮಳೆಗೆ ಬೈಕುಗಳ ಸಂಚಾರಕ್ಕೆ ಬ್ರೇಕ್ ಬಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು, ಮೆಟ್ರೋ ಪಿಲ್ಲರ್ ಕೆಳಗೆ, ಅಂಗಡಿ ಮುಂಗಟ್ಟುಗಳ ಬಳಿ ಓಡಿದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಕೆ.ಆರ್‌ವೃತ್ತ, ಕಾವೇರಿ ಥಿಯೇಟರ್, ಓಕಳಿಪುರಂ ಬ್ರೀಡ್ಜ್, ಶಿವಾನಂದ ವೃತ್ತದಲ್ಲಿನ ರೈಲ್ವೆ ಬ್ರಿಡ್ಜ್ ಕೆಳಗೆ ರಸ್ತೆ ಮೇಲೆಲ್ಲ ನೀರು ಕಂಡು ಬಂತು.

ನಗರದಲ್ಲಿ ಅನೇಕ ಕಡೆಗಳಲ್ಲಿ ಮುಖ್ಯ ರಸ್ತೆಗಳೇ ಜಲಾವೃತವಾದವು. ಒಂದು ಕಡೆ ಮಳೆ ಬರುತ್ತಿದ್ದಂತೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಮಳೆ ಬಗ್ಗೆ ಎಂದಿನಂತೆ ಟ್ರೆಂಡಿಂಗ್ ಸೃಷ್ಟಿ ಆಯಿತು. #BengaluruRain ಹಾಕಿ ತಮ್ಮ ಮನೆ, ಏರಿಯಾಗಳಲ್ಲಿ ಧೋ ಎಂದು ಸುರಿದ ಮಳೆ ಕುರಿತು ವಿಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಸ್ತೆಗಳು ಜಲಾವೃತ: ನಿಧಾನಗತಿಯ ಸಂಚಾರ

ಮಧ್ಯಾಹ್ನ ಬಂದ ಮಳೆಗೆ ಹೆಬ್ಬಾಳ ಫ್ಲೈಓವರ್ ನಿಂದ ನಗರದ ಕಡೆಗೆ ಮತ್ತು ಫ್ಲೈಓವರ್ ಡೌನ್‌ರಾಂಪ್ ದೇವನಹಳ್ಳಿ ವಿಮಾನ ನಿಲ್ದಾಣದ ಕಡೆಗೆ ವಾಟರ್‌ಲಾಗಿಂಗ್ ಸಮಸ್ಯೆ ಉಂಟಾಗಿದೆ. ದೇವಿನಗರ ಕೆಳಸೇತುವೆ, ವೀರಣ್ಣಪಾಳ್ಯ ಸೇರಿದಂತೆ ರಸ್ತೆ ಮೇಲೆ ನೀರು ನಿಂತ ಮಾರ್ಗದಲ್ಲಿ ನೋಡಿಕೊಂಡು ಸಂಚರಿಸುವಂತೆ ನೆಟ್ಟಿಗರು, ಸಂಚಾರ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಯಲಂಹಕ, ವೈಟ್‌ಫಿಲ್ಡ್, ಯಲಚೇನಹಳ್ಳಿ, ನಾಯಂಡಹಳ್ಳಿ ಜಂಕ್ಷನ್ ಇನ್ನು ಮುಂತಾದ ಕಡೆಗಳಲ್ಲಿ, ಸಿಗ್ನಲ್‌ ಗಳಲ್ಲಿ ವಾಹನ ದಟ್ಟಣೆ ಕಂಡು ಬಂತು. ಮಳೆ ನೀರಿನ ಜೊತೆ ಒಳಚರಂಡಿ ನೀರು ಉಕ್ಕಿ ಹರಿದು ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+