ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೆಂಗಳೂರು ನಗರದಲ್ಲಿ ಮತ್ತೆ ಧಾರಾಕಾರ ಮಳೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 14; ಗುರುವಾರವೂ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. 7.30ರ ಸುಮಾರಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಬುಧವಾರ ಸಂಜೆ ಸಹ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು, 12 ಮರಗಳು ಧರೆಗುರುಳಿದ್ದವು.

ಬೆಂಗಳೂರಿನ ದಕ್ಷಿಣ, ಉತ್ತರ, ಪೂರ್ವ ಭಾಗದಲ್ಲಿ ಗುರುವಾರ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ನಗರದಲ್ಲಿ ಇಂದು ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಕರಾವಳಿಯಲ್ಲಿ ಮಳೆ ಅಬ್ಬರ: ಮುಂದಿನ 24 ಗಂಟೆ ಆರೆಂಜ್ ಅಲರ್ಟ್ಕರಾವಳಿಯಲ್ಲಿ ಮಳೆ ಅಬ್ಬರ: ಮುಂದಿನ 24 ಗಂಟೆ ಆರೆಂಜ್ ಅಲರ್ಟ್

ರಾಜಾಜಿನಗರ, ಮೆಜೆಸ್ಟಿಕ್, ಜಯನಗರ, ಹನುಂತನಗರ, ಮೈಸೂರು ರಸ್ತೆ, ವಿದ್ಯಾಪೀಠ, ಜೆ. ಪಿ. ನಗರ, ಶಾಂತಿ ನಗರ, ಕೋರಮಂಗಲ, ಆರ್. ಆರ್. ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ.

Rain in Bengaluru : ಹವಾಮಾನ ವರದಿ; ಬೆಂಗಳೂರಲ್ಲಿ ಗುರುವಾರವೂ ಮಳೆ ಮುನ್ಸೂಚನೆ Rain in Bengaluru : ಹವಾಮಾನ ವರದಿ; ಬೆಂಗಳೂರಲ್ಲಿ ಗುರುವಾರವೂ ಮಳೆ ಮುನ್ಸೂಚನೆ

Heavy Rain Lashes Bengaluru City On Thursday Evening

ಹಲಸೂರು, ಮಾರತ್ತಹಳ್ಳಿ, ಮಡಿವಾಳ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ರಾಜಾಜಿನಗರ, ಯಶವಂತಪುರ, ಜೆ. ಪಿ. ಪಾರ್ಕ್‌, ವಿದ್ಯಾರಣ್ಯಪುರದಲ್ಲಿಯೂ ಮಳೆಯಾಗುತ್ತಿದೆ.

Rain in Karnataka: ಕರ್ನಾಟಕ; ವಿವಿಧ ಜಿಲ್ಲೆಗೆ ತಂಪೆರೆದ ಬುಧವಾರದ ಮಳೆRain in Karnataka: ಕರ್ನಾಟಕ; ವಿವಿಧ ಜಿಲ್ಲೆಗೆ ತಂಪೆರೆದ ಬುಧವಾರದ ಮಳೆ

ಧಾರಾಕಾರ ಮಳೆಯ ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಬೈಕ್ ಸವಾರರು ಅಂಗಡಿ, ಫ್ಲೈ ಓವರ್ ಕೆಳಗೆ ನಿಂತು ಮಳೆಯಿಂದ ಆಶ್ರಯ ಪಡೆದರು.

ಸಾಲು-ಸಾಲು ರಜೆ ಇರುವ ಕಾರಣ ಹಲವಾರು ಜನರು ಊರಿಗೆ ಹೊರಟಿದ್ದಾರೆ. ಸಂಜೆ ಸುರಿದ ಮಳೆಯ ಕಾರಣ ಅವರು ಮೆಜೆಸ್ಟಿಕ್‌ಗೆ ತೆರಳಲು ಪರದಾಟ ನಡೆಸುತ್ತಿದ್ದಾರೆ.

English summary
Heavy rain lashed Bengaluru city on Thursday evening leading to water logging in various parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X