ಬೆಂಗಳೂರಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆ
ಬೆಂಗಳೂರು, ಜೂನ್ 05: ಬೆಂಗಳೂರಲ್ಲಿ ಸಂಜೆ ವೇಳೆಗೆ ಭಾರಿ ಮಳೆಯ ಆಗಮನವಾಗಿದ್ದು, ಅಲ್ಲಿಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿಯುತ್ತಿದೆ.
ಬೆಳಿಗ್ಗಿನಿಂದ ಬಹುತೇಕ ಮೋಡದ ವಾತಾವರಣ ನಗರದಲ್ಲಿ ಇತ್ತು, ಸಂಜೆ ವೇಳೆಗೆ ಭಾರಿ ಜೋರಾಗಿ ಮಳೆಯ ಆಗಮನವಾಯಿತು. ಭಾರಿ ಗುಡುಗು-ಮಿಂಚು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದವು.
ನಗರದ ಹಲವೆಡೆ ಆಲಿಕಲ್ಲು ಸಹ ಉದುರಿದ್ದು, ಜೋರಾದ ಮಳೆಯಾಗಿದೆ. ನಗರದ ಹಲವೆಡೆ ರಸ್ತೆಗಳು ಮಳೆನೀರಿನಿಂದ ತುಂಬಿ ಹರಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟು ಮಾಡಿತ್ತು.

ಬೆಂಗಳೂರು ಮಾತ್ರವಲ್ಲದೆ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಇನ್ನೂ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ನಗರದಲ್ಲಿ ಮಳೆಯ ಅಬ್ಬರಕ್ಕೆ ಹಲವು ಕಡೆ ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದ್ದು, ಕೆಲವು ಕಡೆ ವಿದ್ಯುತ್ ಕಂಬಗಳೂ ಸಹ ಧರೆಗುರುಳಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯವಾಗಿದೆ.












Click it and Unblock the Notifications