ಕೋವಿಡ್ ಚಿಕಿತ್ಸೆ ನೀಡಲು ಕೆಲವು ಖಾಸಗಿ ಆಸ್ಪತ್ರೆಗಳ ನಕಾರ

ಬೆಂಗಳೂರು, ಜೂನ್ 24 : ಕರ್ನಾಟಕ ಸರ್ಕಾರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು ನಗರದಲ್ಲಿ 44 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ. ಆದರೆ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿಲ್ಲ.

Recommended Video

      ಚೀನಾ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸಪೋರ್ಟ್ ಮಾಡಲ್ಲ ಎಂದ ರಷ್ಯಾ ಸಚಿವ | Russia | China | Oneindia Kannada

      ಹೃದಯ, ಕ್ಯಾನ್ಸರ್ ಮತ್ತು ಕಣ್ಣಿನ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ನಾವು ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿವೆ. ಐಸೋಲೇಷನ್ ವಾರ್ಡ್, ಹಾಸಿಗೆ, ಆಕ್ಸಿಜನ್ ಸಿಲಿಂಡರ್ ಮುಂತಾದ ವ್ಯವಸ್ಥೆಗಳು ಇಲ್ಲ ಎಂದು ಹೇಳಿವೆ.

      ಅಗತ್ಯ ಸೌಲಭ್ಯಗಳು ಇಲ್ಲದೇ ನಾವು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಅಸಾಧ್ಯ. ಈ ವಿಚಾರದಲ್ಲಿ ತೊಂದರೆ ಎದುರಿಸಲು ಆಸ್ಪತ್ರೆ ಸಿದ್ಧವಿಲ್ಲ ಎಂದು ಹೇಳಿವೆ. ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ವ್ಯಾಪ್ತಿಗೆ ಒಳಪಡುವ 518 ಆಸ್ಪತ್ರೆಗಳನ್ನು ಸರ್ಕಾರ ಪಟ್ಟಿ ಮಾಡಿದೆ.

      Heart Eye And Cancer Hospitals Cannot Treat COVID 19 Patients

      ಕೋವಿಡ್ - 19 ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವೆಬ್ ಸೈಟ್‌ನಲ್ಲಿ ಸರ್ಕಾರ ಬಿಡುಗೆ ಮಾಡಿದೆ. ಜನರು 18004252646 ನಂಬರ್‌ಗೆ ಕರೆ ಮಾಡುವ ಮೂಲಕವೂ ಮಾಹಿತಿಯನ್ನು ಪಡೆಯಬಹುದಾಗಿದೆ.

      ಕ್ಯಾನ್ಸರ್, ಹೃದಯ ಮತ್ತು ಕಣ್ಣಿನ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರೆ ಅವುಗಳನ್ನು ಪಟ್ಟಿಯಲ್ಲಿ ಸೇರಿಸಿದ್ದು ಏಕೆ? ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ಕೊಡಬೇಕಿದೆ.

      ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾದ ಹಿನ್ನಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ನೀಡಲು ಒಪ್ಪಿಗೆ ನೀಡಿತ್ತು. ದರಪಟ್ಟಿಯನ್ನು ಬಿಡುಗಡೆ ಮಾಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+