• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌? ಶ್ರೀರಾಮುಲು ಹೇಳಿದ್ದೇನು?

|

ಬೆಂಗಳೂರು, ಜೂನ್ 24: ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಮಾಡಬೇಕಾ ಬೇಡವಾ ಅಥವಾ ಲಾಕ್‌ಡೌನ್‌ ಮಾಡಬೇಕಾ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ''ಲಾಕ್ ಡೌನ್ ಬೇಕಾ ಬೇಡವೋ ಎಂದು ತೀರ್ಮಾನ ಮಾಡೋಕೆ ತಜ್ಞರ ಸಮಿತಿ ಇದೆ. ಅವರು ಸಲಹೆ ಸೂಚನೆ ಕೊಡ್ತಾರೆ'' ಎಂದಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ 50ರಷ್ಟು ಹಾಸಿಗೆ ಸರ್ಕಾರ ಕಳುಹಿಸುವ ರೋಗಿಗೆ

10ನೇ ತರಗತಿ ಪರೀಕ್ಷೆ ಕುರಿತು ಮಾತನಾಡಿದ ಶ್ರೀರಾಮುಲು ''ನಾಳೆ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತದೆ. ಸುಮಾರು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಅಗತ್ಯ. ಮಕ್ಕಳು ಪೋಷಕರು ಭಯಪಡಬೇಕಿಲ್ಲ. ನಾನು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಸಾಕಷ್ಟು ಸಭೆ ಮಾಡಿದ್ದೇವೆ. ಮಕ್ಕಳ ಸುರಕ್ಷತೆಗೆ ಗಮನ ಕೊಟ್ಟಿದ್ದೇವೆ. ಕಂಟೈನ್‌ಮೆಂಟ್ ಝೋನ್ ಇಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚು ಜಾಗ್ರತೆ ವಹಿಸುತ್ತೇವೆ'' ಎಂದು ತಿಳಿಸಿದ್ದಾರೆ.

''ಕೊವಿಡ್ ಟೆಸ್ಟ್ ಹೆಚ್ಚಾಗಬೇಕು ಎನ್ನುವ ಅಭಿಪ್ರಾಯ ಬಂದಿದೆ. ಕಾರ್ಮಿಕರು, ವ್ಯಾಪಾರಿಗಳು, ಹೀಗೆ 15 ಕೆಟೆಗೆರಿ ಮಾಡಿ ಟೆಸ್ಟ್ ಗಳು ಆಗಬೇಕು. ಇದರಿಂದ ಸೋಂಕು ಸಮುದಾಯಕ್ಕೆ ಹರಡಿದಿಯ ಇಲ್ವಾ ಅನ್ನೋದು ಗೊತ್ತಾಗುತ್ತದೆ'' ಎಂದು ಹೇಳಿದ್ದಾರೆ.

''ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇವೆ. 15 ಕೆಟಗೆರಿಯಲ್ಲಿ ಟೆಸ್ಟ್ ಗಳು ಆಗಬೇಕು. ಇಂಡಸ್ಟ್ರಿಯಲ್, ಹೊರರಾಜ್ಯದಿಂದ ಬಂದೋರಿಗೆ ಸೇರಿ ಸಮುದಾಯಕ್ಕೆ ಹರಡದಂತೆ ಟೆಸ್ಟ್ ಗಳು ಆಗಬೇಕು. ಸೋಮವಾರ ಮತ್ತೆ ಟಾಸ್ಕ್ ಫೋರ್ಸ್ ಸಭೆ ಇದೆ. ಸಭೆಯಲ್ಲಿ ಚರ್ಚೆ ಮಾಡುತ್ತೇವೆ'' ಎಂದು ಮಾಹಿತಿ ನೀಡಿದ್ದಾರೆ.

English summary
Karnataka Health Minister Sriramulu has react on Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X