ರೋಗಿಗೆ ಚಿಕಿತ್ಸೆ ನಿರಾಕರಿಸಿದ 18 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

ಬೆಂಗಳೂರು, ಜುಲೈ 1: ಕೊರೊನಾ ವೈರಸ್ ರೋಗಲಕ್ಷಣಗಳಿದ್ದರೂ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ 18 ಖಾಸಗಿ ಆಸ್ಪತ್ರೆಗಳಿಗೆ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಶೋಕಾಸ್ ನೋಟಿಸ್ ನೀಡಿದ್ದಾರೆ.

Recommended Video

      Health minister Sriramulu sent notice to 18 hospital which avoided Covid patient | Oneindia Kannada

      ಶನಿವಾರ ಬೆಂಗಳೂರು ಮೂಲದ 51 ವರ್ಷದ ರೋಗಿಯೊಬ್ಬರಿಗೆ ಉಸಿರಾಟ ತೊಂದರೆಯಾಗಿದೆ. ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆತನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಕರೆದುಕೊಂಡು ಹೋಗಿದ್ದಾರೆ. ಆದರೆ, ಯಾವ ಆಸ್ಪತ್ರೆಯೂ ರೋಗಿಗೆ ಚಿಕಿತ್ಸೆ ನೀಡಲಿಲ್ಲ.

      ಹಾಸಿಗೆ ಕೊರತೆ ಹಾಗೂ ಐಸಿಯು ವಾರ್ಡ್‌ ಸಮಸ್ಯೆ ಇರುವ ಕಾರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನ 18 ಪ್ರಮುಖ ಆಸ್ಪತ್ರೆಗಳು ಇದೇ ಕಾರಣದಿಂದ ರೋಗಿಗೆ ಚಿಕಿತ್ಸೆ ನೀಡಿಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು.

      Health Minister Sent Show Cause Notice To 18 Private Hospitals Who Denied Admission To Patient

      ಈ ವರದಿ ನೋಡಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಎಲ್ಲ 18 ಆಸ್ಪತ್ರೆಗಳಿಗೂ ಶೋಕಾಸ್ ನೋಟಿಸ್ ನೀಡಿದ್ದಾರೆ. ರೋಗಿಗೆ ಚಿಕಿತ್ಸೆ ನೀಡದಿರಲು ಕಾರಣ ಹೇಳಿ ಎಂದು ಸೂಚಿಸಿದ್ದಾರೆ.

      ''ತುರ್ತು ಚಿಕಿತ್ಸೆ ಅಗತ್ಯವಿದ್ದ 52 ವರ್ಷದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳು ನಿರಾಕರಿಸಿರುವ ಕುರಿತು ಮಾಧ್ಯಮವೊಂದರಲ್ಲಿ ಬಂದಿರುವ ವರದಿ ಗಮನಿಸಿ, ಸಂಬಂಧಿಸಿದ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ನೆಪಗಳನ್ನು ಹೇಳಿ ಚಿಕಿತ್ಸೆ ನಿರಾಕರಿಸುವುದು ಅಮಾನವೀಯ ಅಷ್ಟೇ ಅಲ್ಲ ಕಾನೂನು ವಿರೋಧಿ ಕೂಡ. ಕೋವಿಡ್ ಸಂದರ್ಭದಲ್ಲಿ ಎಲ್ಲರ ಮೇಲೂ ಒತ್ತಡವಿದ್ದು, ಅಗತ್ಯವಿರುವ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸಲು ಕೋರುತ್ತೇನೆ. ನೆಪ ಹೇಳಿ, ರೋಗಿಗಳನ್ನು ನಿರ್ಲಕ್ಷಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ'' ಎಂದು ಶ್ರೀರಾಮುಲು ಆದೇಶಿಸಿದ್ದಾರೆ.

      ಶನಿವಾರ ಯಾವ ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ಭಾನುವಾರ ಮನೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ ಉಸಿರಾಟಕ್ಕೆ ನೆರವು ನೀಡಲಾಯಿತು. ಆದರೆ, ಭಾನುವಾರ ಸಂಜೆ ವೇಳೆ ರೋಗಿಯ ಸ್ಥಿತಿ ಗಂಭೀರವಾಗಿದೆ. ಬಳಿಕ ಬೌರಿಂಗ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬರಲಾಗಿದೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಆರಂಭಿಸಿದ ಹತ್ತು ನಿಮಿಷದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+