ಮದುವೆಯಾದ ಮರುಗಳಿಗೆ ಗಂಡನಿಂದ ಹೆಂಡತಿಯ ಕನ್ಯತ್ವ ಪರೀಕ್ಷೆ

ಬೆಂಗಳೂರು, ಮಾರ್ಚ್ 29: ಹೆಣ್ಣು ಮದುವೆಯಾಗಿ ತನ್ನ ತಂದೆ-ತಾಯಿಯನ್ನು ಬಿಟ್ಟು ಗಂಡನ ಮನೆಗೆ ಬರುವಾಗ ತನ್ನ ಪತಿಯೇ ತನ್ನ ಸರ್ವಸ್ವ ಎಂದು ಬಂದಿರುತ್ತಾಳೆ. ಆದರೆ ಪತಿಯೇ ಆಕೆಯ ವೈರಿಯಾಗಿ ಬದಲಾದರೆ ಆಕೆ ಏನು ಮಾಡಬೇಕು...

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಕೆ ಎಲ್ಲರಂತೆಯೇ ಮದುವೆಯ ಕನಸು ಹೊತ್ತಿದ್ದಳು, ಮದುವೆ ಮುಗಿದು ಕೆಲವೇ ನಿಮಿಷಗಳಲ್ಲಿ ಪತ್ನಿಯ ಬಳಿ ಕನ್ಯತ್ವ ಪರೀಕ್ಷೆ ಮಾಡಿಸಿದಾಗ ಆಕೆಯ ತಲೆಯ ಮೇಲೆ ಬೆಟ್ಟವೇ ಬಿದ್ದಂತಾಗಿತ್ತು.

ತಾನು ಅನುಭವಿಸಿದ ಮಾನಸಿಕ ನೋವನ್ನು ಮಹಿಳೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.ನವ ವಿವಾಹಿತರಿಬ್ಬರು ಎಂಬಿಎ ಪೂರೈಸಿ ಒಳ್ಳೆಯ ಉದ್ಯೋಗದಲ್ಲಿದ್ದವರು. ಇಬ್ಬರು ಉತ್ತರ ಕರ್ನಾಟಕದವರಾಗಿದ್ದು ಮ್ಯಾಟ್ರಿಮೊನಿ ಮೂಲಕ ಪರಿಚಿತರಾಗಿದ್ದರು. ಪರಿಚಯವಾಗಿ ಕೆಲವು ದಿನಗಳ ಬಳಿಕ 2018ರ ನವೆಂಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.

He forced me to take virginity test just after our wedding

ಆದರೆ ಮದುವೆ 15 ದಿನಗಳಿರಬೇಕಾದರೆ ವಧುವಿನ ತಾಯಿ ತೀರಿಕೊಂಡಿದ್ದರು. ವಧು ತೀವ್ರ ಆಘಾತದಲ್ಲಿದ್ದರು. ಆದರೆ ವರ ಶರತ್ ಈ ವಿಷಯವನ್ನು ಬೇರೆ ರೀತಿಯೇ ಅರ್ಥ ಮಾಡಿಕೊಂಡು ಆಕೆಗೆ ಮದುವೆಯೇ ಇಷ್ಟ ಇಲ್ಲ ಎಂದುಕೊಂಡಿದ್ದ.

ಬಳಿಕ ಇಬ್ಬರು ಸಂತೋಷದಿಂದ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ಹೊತ್ತಿನ ಬಳಿಕ ಗ್ಯಾಸ್ಟ್ರಿಕ್ ನಿಂದಾಗಿ ಆಕೆಗೆ ವಾಂತಿ ಆಗಿತ್ತು, ಕೂಡಲೇ ಆಸ್ಪತ್ರೆಗೆ ಕರೆದೊಯ್ದ ಶರತ್ ಆಕೆ ಗರ್ಭಿಣಿಯೇ ನೋಡಿ ಎಂದು ವೈದ್ಯರ ಬಳಿ ಹೇಳಿದ್ದಷ್ಟೇ ಅಲ್ಲದೆ ಆಕೆಯ ಕನ್ಯತ್ವ ಪರೀಕ್ಷೆ ಮಾಡಲು ತಿಳಿಸಿದ್ದ.

ಇದೆಲ್ಲಾ ತಿಳಿದ ಬಳಿಕ ವಧು ಆತನನ್ನು ಬಿಟ್ಟು ಆಕೆಯ ಸಹೋದರಿ ಮನೆಗೆ ಬಂದಿದ್ದಳು. ಅಷ್ಟೇ ಅಲ್ಲದೆ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೌನ್ಸೆಲರ್ ಆಕೆಯನ್ನು ಕರೆದು ವಿಚಾರಿಸಿದಾಗ ಆಕೆ ನಡೆದ ಘಟನೆ ತಿಳಿಸಿದಾಗ ಅವರೇ ಆಶ್ಚರ್ಯಪಟ್ಟಿದ್ದರು. ಆದರೆ ಆಕೆಯ ಪರಿಯನ್ನು ಕೌನ್ಸಲಿಂಗ್ ಮಾಡಲು ಸಾಧ್ಯವೇ ಆಗಿಲ್ಲ ಆತ ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+