• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳಾ ಎಸ್‌ಐನ ಮಂಚಕ್ಕೆ ಕರೆದವ ಸಿಕ್ಕಿಬಿದ್ದ,: ಆತ ಕೊಟ್ಟ ಕಾರಣವೇನು?

|

ಬೆಂಗಳೂರು, ಜನವರಿ 17: ಮಹಿಳಾ ಎಸ್‌ಐನ್ನು ಮಂಚಕ್ಕೆ ಕರೆದಿದ್ದ ಆತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

   ಡಿಕೆಶಿಗೆ ಕೆಪಿಸಿಸಿ ಯೋಗ, ಹೈಕಮಾಂಡ್ ಎದುರು ಸಿದ್ದು ಹೊಸರಾಗ! | DK SHIVAKUMAR | KPCC | CONGRESS | CENTRAL

   ಗೌರಿಬಿದನೂರು ಮೂಲದ ರಾಮಕೃಷ್ಣ(35) ಬಂಧಿತ. ಆರೋಪಿ ಕಳೆದ 10 ದಿನಗಳಿಂದ ಪೊಲೀಸರಿಗೆ ತಲೆಮರೆಸಿಕೊಂಡಿದ್ದ. ಗುರುವಾರ ಆರೋಪಿಯ ಟವರ್ ಲೊಕೇಶನ್ ಪರಿಶೀಲಿಸಿದಾಗ ಆತ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಇರುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಮಹಿಳಾ ಎಸ್‌ಐಗೆ ಬ್ಲ್ಯಾಕ್‌ಮೇಲ್ ಮಾಡಿ ಮಂಚಕ್ಕೆ ಕರೆದ

   ವಿದ್ಯಾರಣ್ಯಪುರದಲ್ಲಿ ಮಹಿಳಾ ಹೋಂಗಾರ್ಡ್ ಜೊತೆ ಆರೋಪಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ, ಕೆಲಸದ ವಿಚಾರವಾಗಿ ಮಹಿಳಾ ಸಬ್‌ ಇನ್‌ಸ್ಪೆಕ್ಟರ್ ಹೋಂಗಾರ್ಡ್ ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು.

   ಈ ಹಿನ್ನೆಲೆಯಲ್ಲಿ ಹೋಂಗಾರ್ಡ್ ಸಬ್‌ ಇನ್‌ಸ್ಪೆಕ್ಟರ್ ಮೇಲೆ ಕೋಪಗೊಂಡಿದ್ದರು. ಹೋಂಗಾರ್ಡ್ ತನ್ನ ಪ್ರಿಯಕರನಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಳು. ಪ್ರಿಯತಮೆಯ ಮೇಲಿನ ವ್ಯಾಮೋಹದಿಂದ ಆರೋಪಿ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಮೊಬೈಲ್ ಸಂಖ್ಯೆ ಪಡೆದು ಜನವರಿ 7 ರಂದು ರಾತ್ರಿ ಮಹಿಳಾ ಎಸ್‌ಐಗೆ ಕರೆ ಮಾಡಿದ್ದ.

   ಈ ವೇಳೆ ಆರೋಪಿ ಲಾಡ್ಜ್‌ಗೆ ಬರುತ್ತೀರಾ? ಎಷ್ಟು ಬೇಕು ಹೇಳು ಕೊಡುತ್ತೇನೆ ಎಂದಿದ್ದ. ಆ ವೇಳೆ ನಾನು ಯಾರೆಂದು ನಿನಗೆ ಗೊತ್ತೇನೋ ಎಂದು ಗದರಿಸಿದಾಗ ಆರೋಪಿಯು ಇವರ ಹೆಸರನ್ನು ಹೇಳಿದ್ದ. ನನ್ನ ಮೊಬೈಲ್ ನಂಬರ್ ಹೇಗೆ ಸಿಕ್ಕಿತು ಎಂದು ಕೇಳಿದಾಗ ಹೋಮ್‌ಗಾರ್ಡ್ ಹೆಸರು ಹೇಳಿದ್ದಷ್ಟೇ ಅಲ್ಲದೆ ಅಶ್ಲೀಲ ಫೋಟೊಗಳನ್ನು ಆಕೆಯಗೆ ಕಳುಹಿಸಿದ್ದ.

   ಬಂಧಿತ ರಾಮಕೃಷ್ಣ ಜೇಬು ಕಳ್ಳತನ ಮಾಡುತ್ತಿದ್ದು, ಈತನ ಮೇಲೆ ಕಳ್ಳತನ ಪ್ರಕರಣಗಳಿವೆ. ಕೆಲವು ಪ್ರಕರಣಗಳಿಂದ ಜೈಲು ಸೇರಿದ್ದ ರಾಮಕೃಷ್ಣಗೆ ಮಹಿಳಾ ಹೋಂಗಾರ್ಡ್ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಪ್ರೀತಿಯೂ ಆರಂಭವಾಗಿತ್ತು. ಹೋಂಗಾರ್ಡ್ ಮಹಿಳಾ ಎಸ್‌ಐ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದ ಕಾರಣ ಆಕೆಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದ.

   English summary
   He Ask The Woman SI To Bed And Was Eventually Caught By The Bengaluru Police.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X