• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಪ್ರಧಾನಿ ದೇವೇಗೌಡರ ಬದುಕು-ಸಾಧನೆ ಅನಾವರಣ

|
   ನವೆಂಬರ್ 17ರಂದು ಎಚ್ ಡಿ ದೇವೇಗೌಡರಿಂದ ತಮ್ಮ ಬದುಕು ಹಾಗು ಸಾಧನೆಗಳ ಅನಾವರಣ | Oneindia Kannada

   ಬೆಂಗಳೂರು, ನವೆಂಬರ್ 14: ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಮಂತ್ರಿ ಸ್ಥಾನಕ್ಕೇರಿದ ಏಕೈಕ ಕನ್ನಡಿಗ ಎಚ್‌ಡಿ ದೇವೇಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಜೀವನ ಹಾಗೂ ಸಾಧನೆ ಕುರಿತಂತೆ ಸಾರ್ವಜನಿಕರೊಂದಿಗೆ ನೇರ ಚರ್ಚೆಯಲ್ಲಿ ಭಾಗವಹಿಸುವ ಅವಕಾಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲ್ಪಿಸಿದೆ.

   ನವೆಂಬರ್ 17ರಂದು ಮಧ್ಯಾಹ್ನ 4 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳು ಆಯೋಜಿಸುವ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ವ್ಯಕ್ತಿಗಳ'ಮನೆಯಂಗಳದಲ್ಲಿ ಮಾತುಕತೆ' ಸರಣಿಯ 204ನೇ ಕಾರ್ಯಕ್ರಮದಲ್ಲಿ ಈ ಬಾರಿ ದೇವೇಗೌಡರು ಕನ್ನಡಿಗರೊಂದಿಗೆ ಮುಖಾಮುಖಿಯಾಗಲಿದ್ದಾರೆ.

   ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ

   ಕಾರ್ಯಕ್ರಮದಲ್ಲಿ ದೇವೇಗೌಡರು ತಮ್ಮ ಜೀವನ ಮತ್ತು ಸಾಧನೆ ಕುರಿತು ಖುದ್ದಾಗಿ ಮಾತನಾಡಲಿದ್ದು ಬಳಿಕ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

   ಮನೆಯಂಗದಲ್ಲಿ ಮಾತುಕತೆ ಸರಣಿಯಲ್ಲಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಮಾತುಕತೆ ಅತ್ಯಂತ ವಿರಳವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಬಳಿ ಮಾತನಾಡುವ ಅವಕಾಶ ಈ ಬಾರಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

   ಜಯಪ್ರಕಾಶ್ ನಾರಾಯಣ ಅವರಿಂದ ಪ್ರೇರಣೆ

   ಜಯಪ್ರಕಾಶ್ ನಾರಾಯಣ ಅವರಿಂದ ಪ್ರೇರಣೆ

   ದೇಶದ ರಾಜಕೀಯ ರಂಗದಲ್ಲಿ ಸರಿಸುಮಾರು ಅರ್ಧ ಶತಮಾನಗಳ ಕಾಲ ಜನತಾ ಪರಿವಾರ ಹಾಗೂ ಜಾತ್ಯತೀತ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಜಯಪ್ರಕಾಶ್ ನಾರಾಯಣ ಚಳವಳಿಯಿಂದ ಪ್ರೇರಣೆಗೊಂಡು ದೆಹಲಿಯಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವಂತಹ ಎತ್ತರದ ವ್ಯಕ್ತಿತ್ವ ಬೆಳೆಸಿಕೊಂಡಿರುವ ದೇವೇಗೌಡರು ತಮ್ಮ ರಾಜಕೀಯ ಏಳು-ಬೀಳುಗಳ ಕುರಿತು ಸಂವಾದದಲ್ಲಿ ಮುಕ್ತವಾಗಿ ಮಾತನಾಡಲಿದ್ದಾರೆ.

   ಜೈಲುವಾಸ, ತುರ್ತು ಪರಿಸ್ಥಿತಿ ಒಂದು ಚರ್ಚೆ

   ಜೈಲುವಾಸ, ತುರ್ತು ಪರಿಸ್ಥಿತಿ ಒಂದು ಚರ್ಚೆ

   ತಾವು ನಂಬಿರುವ ಜಾತ್ಯತೀತ ಸಿದ್ಧಾಂತದ ನಡುವೆಯೂ ಪುತ್ರ ಎಚ್‌ಡಿ ಕುಮಾರಸ್ವಾಮಿ ಅವರು ರಾಷ್ಟ್ರವಾದಿ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ದೇವೇಗೌಡರು ಅನುಭವಿಸಿದ ಸಂದಿಗ್ಧ ಪರಿಸ್ಥಿತಿಯೂ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ ಜೈಲು ವಾಸ ಮತ್ತಿತರೆ ಅನೇಕ ಸ್ವಾರಸ್ಯಕರ ಸಂಗತಿಗಳು ಮಾತುಕತೆ ವೇಳೆ ಚರ್ಚೆಯಾಗುವ ನಿರೀಕ್ಷೆ ಇದೆ.

   ವಿಠ್ಠಲಮೂರ್ತಿ ಕಾಲಂ: ವಂಶ ಪಾರಂಪರ್ಯ ರಾಜಕಾರಣದ ಇತಿಹಾಸ

   ದೇವೇಗೌಡರ ಹುಟ್ಟು

   ದೇವೇಗೌಡರ ಹುಟ್ಟು

   1933ರ ಮೇ 18ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ದೇವೇಗೌಡರು ಜನಿಸಿದರು.ಎಂಜಿನಿಯರಿಂಗ್ ಡಿಪ್ಲೊಮಾ ಪೂರೈಸಿದರೂ ಜನಸೇವೆಯತ್ತ ವಾಲಿದರು.

   ದೇವೇಗೌಡ ಅವರ ರಾಜಕೀಯ ಸೇವೆ

   ದೇವೇಗೌಡ ಅವರ ರಾಜಕೀಯ ಸೇವೆ

   1953ರಲ್ಲಿ ದೇವೇಗೌಡ ಅವರು ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಸೇರುವುದರೊಂದಿಗೆ ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿದರು. 1962ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಸ್ವಾತಂತ್ರ್ಯ ಅಭ್ಯರ್ಥಿಯಾಗಿ ವಿಧಾನಸಭಾ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. ಮುಂದಿನದ್ದು ಜಯದ ಚೈತ್ರ ಯಾತ್ರೆ,ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆಲವು ಸಾಧಿಸಿದ್ದರು. ಇದರ ಮಧ್ಯೆ ವಿಭಜಿತ ಕಾಂಗ್ರೆಸ್ ಪಕ್ಷಕ್ಕೆ ಸೇರಿ 1972ರಿಂದ ಐದು ವರ್ಷಗಳ ಕಾಲ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು.1996ರಲ್ಲಿ ಪ್ರಧಾನಿಯಾದರು.

   ಚನ್ನಪಟ್ಟಣದಲ್ಲಿ ದೇವೇಗೌಡರ 6.9 ಅಡಿ ಕಂಚಿನ ಪ್ರತಿಮೆ ಸ್ಥಾಪನೆ

   English summary
   Former prime minister H.D. Devegowda will interact with people on his life and achievements on November 17 at Ravindra Kalakshetra at Tingala Atithi series organized by department of Kannada and culture.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X