ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ
Recommended Video
ಬೆಂಗಳೂರು, ಡಿಸೆಂಬರ್ 13: ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕುಮಾರಸ್ವಾಮಿ ಅವರ ನಿವಾಸದಲ್ಲಿ ಸೋಲಿನ ಬೆನ್ನಲ್ಲೇ ಸಂಭ್ರಮದ ಕಾರ್ಯಕ್ರಮ ಏರ್ಪಟ್ಟಿದೆ.
ಡಿಸೆಂಬರ್ 16 ಕ್ಕೆ ಕುಮಾರಸ್ವಾಮಿ ಹುಟ್ಟುಹಬ್ಬ ಇದ್ದು, ಅಂದಿಗೆ ಕುಮಾರಸ್ವಾಮಿ ಅವರಿಗೆ 60 ವರ್ಷವಾಗಲಿದೆ. ಹಾಗಾಗಿ ಷಷ್ಠಿಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದಿನಿಂದಲೇ ಹಲವು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಕುಮಾರಸ್ವಾಮಿ ಷಷ್ಟ್ಯಬ್ದಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ನಿನ್ನೆಯೇ ಕುಮಾರಸ್ವಾಮಿ ಅವರ ಮನೆಯಲ್ಲಿ ಜೆಡಿಎಸ್ ಶಾಸಕರು ಸಭೆ ನಡೆಸಿ, ಪ್ರಸಕ್ತ ರಾಜಕೀಯದ ಜೊತೆಗೆ ಷಷ್ಠಿಪೂರ್ತಿಯ ವಿಷಯವನ್ನೂ ಚರ್ಚಿಸಿದ್ದಾರೆ.

ಇಂದು ಕುಮಾರಸ್ವಾಮಿ ಅವರ ನಿವಾಸದಲ್ಲಿ ಷಷ್ಠಿಪೂರ್ತಿ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಗಳು ನಡೆದಿದ್ದು, ದೇವೇಗೌಡ ಸೇರಿ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂದಿನಿಂದ ಇನ್ನೂ ಮೂರುದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಲಿವೆ.
ನಿನ್ನೆ ಜೆಡಿಎಸ್ ಶಾಸಕರೊಂದಿಗೆ ಸಭೆ ನಡೆಸಿರುವ ಕುಮಾರಸ್ವಾಮಿ, ಉಪಚುನಾವಣೆ ಸೋಲಿನ ಕುರಿತು ಪರಾಮರ್ಶೆ ನಡೆಸಿದ್ದಾರೆ. ಜೆಡಿಎಸ್ ನ ಇನ್ನಷ್ಟು ಶಾಸಕರು ಬಿಜೆಪಿಗೆ ಪಲಾಯನ ಮಾಡಬಹುದು ಎಂಬ ಸುದ್ದಿ ಇರುವ ಕಾರಣ, ಎಲ್ಲರೂ ಒಗ್ಗಟ್ಟಿನಿಂದ ಇರುವಂತೆ ಎಚ್‌ಡಿಕೆ ಸೂಚಿಸಿದ್ದಾರೆ.












Click it and Unblock the Notifications