ಬಾತ್ ರೂಮಿನಲ್ಲಿ ಜಾರಿಬಿದ್ದ ದೇವೇಗೌಡರು, ಆಸ್ಪತ್ರೆಗೆ ದಾಖಲು
Recommended Video

ಬಾತ್ ರೂಮಿನಲ್ಲಿ ಜಾರಿಬಿದ್ದ ದೇವೇಗೌಡರು, ಆಸ್ಪತ್ರೆಗೆ ದಾಖಲು | Oneindia Kannada
ಬೆಂಗಳೂರು, ಫೆಬ್ರವರಿ 02: ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮ್ಮ ನಿವಾಸದಲ್ಲಿ ಬಾತ್ ರೂಮಿನಲ್ಲಿ ಜಾರಿ ಬಿದ್ದ ಪರಿಣಾಮ ಅವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ಘಟನೆ ನಡೆದಿದ್ದು, ಬಲಗಾಲಿನ ಮೂಳೆಗೆ ಏಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಮನೆಗೆ ಆಗಮಿಸಿದ ವೈದ್ಯರು, ಮಂಡಿ ಬಳಿ ಉಳುಕಿದ್ದು, ಎಕ್ಸ್ ರೇ ಮಾಡಿಸುವಂತೆ ಸಲಹೆ ನೀಡಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications