ಮೆಟ್ರೋ ನೌಕರರ ಮುಷ್ಕರ ಪ್ರಶ್ನಿಸಿ ಅಧಿಕಾರಿಗಳ ಅರ್ಜಿ: ವಿಚಾರಣೆ ಮುಂದಕ್ಕೆ

ಬೆಂಗಳೂರು, ಮೇ 29: ಬಿಎಂಆರ್‌ಸಿಎಲ್ ನೌಕರರು ಕರೆ ನೀಡಿದ್ದ ಪ್ರತಿಭಟನೆ ಪ್ರಶ್ನಿಸಿ ಮೆಟ್ರೋ ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 4ಕ್ಕೆ ಮುಂದೂಡಿದೆ. ಬುಧವಾರ ಕಾರ್ಮಿಕ ಆಯುಕ್ತರೊಂದಿಗೆ ನೌಕರರ ಸಂಘ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ನಮ್ಮ ಮೆಟ್ರೋ ನೌಕರರ ಸಂಘ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡು ಬಾರಿ ಮುಷ್ಕರವನ್ನು ನಡೆಸಲು ತೀರ್ಮಾನಿಸಿತ್ತು. ಆದರೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಮೆಟ್ರೋ ಅಧಿಕಾರಿಗಳ ಜತೆ ಸಭೆ ನಡೆಸಲು ಸಮ್ಮತಿ ಸೂಚಿಸಿತ್ತು. ಆದರೆ ನಡೆದ ಎಲ್ಲಾ ಸಭೆಯೂ ವಿಫಲವಾಗಿದೆ.

HC adjourns BMRCL plea on employees strike

ಮೆಟ್ರೋ ನೌಕರರಿಗೆ ಅನುಕೂಲವಾಗುವಂತಹ ಯಾವ ನಿರ್ಣಯವನ್ನೂ ಕೈಗೊಳ್ಳದ ಮೆಟ್ರೋ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಮೆಟ್ರೋ ನೌಕರರು ಪುನಃ ಮುಷ್ಕರವನ್ನು ಕೈಗೊಳ್ಳಲು ನಿರ್ಧರಿಸಿತ್ತು. ಇದೀಗ ಕಾರ್ಮಿಕ ಆಯುಕ್ತರೊಡನೆ ಸಭೆ ನಡೆಸಲಿರುವ ಕಾರಣ ಮೆಟ್ರೋ ನಿಗಮ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+