Get Updates
Get notified of breaking news, exclusive insights, and must-see stories!

ಬಾಯ್ತುಂಬ ಕವಳ, ತಲೆ ಮೇಲೆ ಕೊಪ್ಪೆ!ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ!

ಬೆಂಗಳೂರು, ಅಕ್ಟೋಬರ್ 10: ಬಾಯಿ ತುಂಬ ಕವಳ(ಪಾನ್) ತುಂಬಿಕೊಂಡು, ಕೊಪ್ಪೆ ಧರಿಸಿದ ಟಿಪಿಕಲ್ ಹವ್ಯಕ ವ್ಯಕ್ತಿಯೊಬ್ಬರು ವೇದಿಕೆ ಮೇಲೆ ಬರುತ್ತಿದ್ದಂತೆಯೆ ಶಿಳ್ಳೆ, ಚಪ್ಪಾಳೆಯ ಸುರಮಳೆ!

ಅ.7 ರಂದು ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಸಭಾಂಗಣದಲ್ಲಿ ನಡೆದ ಫ್ಯಾಷನ್ ಶೋ ಕತೆ ಇದು. ಈ ಫ್ಯಾಷನ್ ಶೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾಕಷ್ಟು ಜನರನ್ನು ನಕ್ಕು ನಲಿಸಿದೆ!

ಹವ್ಯಕರ ಉಡುಗೆ, ತೊಡುಗೆ, ಜೀವನ ವಿಧಾನವನ್ನು ಪರಿಚಯಿಸುವ, ಹವ್ಯಕತನದ ಸೊಗಡನ್ನು ಪ್ರತಿನಿಧಿಸುವ ವಿಡಿಯೋ ಇದು. ಉತ್ತರ ಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಶಿವಮೊಗ್ಗದ ಸಾಗರ ಮತ್ತು ಮಂಗಳೂರಿನಲ್ಲೂ ಹೆಚ್ಚಾಗಿ ಕಂಡುಬರುವ ಹವ್ಯಕರಲ್ಲಿ ಹಲವರು ಉದ್ಯಾನನಗರಿ ಬೆಂಗಳೂರಿಗೆ ವಲಸೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅವರೆಲ್ಲ ಸೇರಿ ಕಟ್ಟಿಕೊಂಡ ಹವ್ಯಕ ಮಹಾಸಭಾ ಆಗಾ ಇಂಥ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹವ್ಯಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ.

Havyaka fashion show video in Bengaluru

'ಎಂಥಾ ಸಾವಾ..!' ಹವ್ಯಕ ಮಾಣಿಯ ಈ ಮನದ ಹಾಡಿಗೆ ಫಿದಾ ಆಗದವರ್ಯಾರು?

ಅ.7 ರಂದು ನಡೆದ ಹವ್ಯಕ ಮಹಾಸಭಾದ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳು ನಡೆದವು, ಖ್ಯಾತ ಆಯುರ್ವೇದ ವೈದ್ಯರಾದ ಗಿರಿಧರ ಕಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂದು ಎಲ್ಲರ ಗಮನ ಸೆಳೆದ ಫ್ಯಾಷನ್ ಶೋನ ವಿಡಿಯೋ ಇಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+