ಹೊಸ ವರ್ಷ ಆಗಮನಕ್ಕೆ ನಿಮ್ಮ ಕೇಶ ವಿನ್ಯಾಸ ಹೀಗಿರಬೇಕು
ಬೆಂಗಳೂರು, ಡಿಸೆಂಬರ್, 22: ಹೊಸ ವರ್ಷಕ್ಕೆ ಹೊಸ ಹೇರ್ ಸ್ಟೈಲ್, ಹೊಸ ಉಡುಪು, ಹೊಸ ಉತ್ಸಾಹದಿಂದ ಮಿಂಚಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಅದಕ್ಕೆ ಹೇರ್‌ಲೈಲ್ ಸಂಸ್ಥೆ ಸುವರ್ಣಾವಕಾಶವನ್ನು ನಿಮ್ಮ ಮುಂದೆ ಇಡುತ್ತದೆ. ಯುವತಿಯರೂ ಮತ್ತು ಮಹಿಳೆಯರು ಈ ಫ್ಯಾಷನ್ ಜಗತ್ತಿನ ಮೇಲೆ ಒಂದು ಕಣ್ಣು ಹಾಯಿಸಲೇ ಬೇಕು.
ಹೇರ್‌ಲೈಲ್ ಸಂಸ್ಥೆ ಹೊಸ ಹಾಗೂ ಉತ್ತಮ ಆಯ್ಕೆಯೊಂದಿಗೆ ನಿಮ್ಮನ್ನು ತಯಾರು ಮಾಡಲು ಸಿದ್ಧವಾಗಿ ನಿಂತಿದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್ ತಾವು ಬಳಸುವ ವಸ್ತುಗಳಲ್ಲಿ ಅತ್ಯಂತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಎಲ್ಲಾ ಬಳಕೆಯ ವಸ್ತುಗಳೂ ಎಫ್‌ಡಿಎಯಿಂದ ಪ್ರಮಾಣೀಕೃತವಾಗಿರುತ್ತದೆ. ಬಳಕೆ ಮಾಡುವ ವಿಧಾನ ಹಾಗೂ ನುರಿತ ಸಿಬ್ಬಂದಿ ಮತ್ತು ನೂತನ ಉಪಕರಣಗಳಲ್ಲಿ ನುರುತ ಜ್ಞಾನ ಹೊಂದಿದ ವೈದ್ಯರನ್ನೇ ಇವುಗಳನ್ನು ನಿಮ್ಮ ಮೇಲೆ ಬಳಸಲು ನೇಮಿಸಲಾಗಿರುತ್ತದೆ. ನಿಮಗಾಗಿ ಕೆಲವೊಂದು ಉತ್ತಮ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.[ಲಲನೆಯರ ಮಾರ್ಜಾಲ ನಡಿಗೆಗೆ ಪುಳಕವಾಯಿತೆನ್ನ ಮನ]
ನಿಮಗೆ ಯಾವ ರೀತಿಯ ಸ್ಟೈಲ್ ಒಗ್ಗಿಕೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ಅಗತ್ಯ ಮಾರ್ಪಾಡು ಮಾಡಲಾಗುತ್ತದೆ. ಪುರುಷರಿಗಾಗಿ ರೂಪಿಸಿರುವ ಹೇರ್ ಟೋಪಿಗಳು ಮತ್ತೊಂದು ವಿಶೇಷ. ಥಿನ್ ಕೂದಲಿಗಾಗಿ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಟೋಪಿಯೊಂದಿಗೆ ಟೋಪಿ ಧರಿಸಿ ಹೆಚ್ಚು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ನವೀನ ಕೇಶ ವಿನ್ಯಾಸಗಳ ಮೇಲೆ ಒಂದು ನೋಟ ಹರಿಸೋಣ... ಹತ್ತಿರದ ಹೇರ್ ಲೈನ್ ಕೇಂದ್ರದಲ್ಲಿ ಈ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ.

ವೇಗವಾದ ಕೂದಲು ಜೋಡಣೆ
ಪಾರ್ಟಿಗೆ ಅಗತ್ಯವಾದ ಉತ್ತಮ ವಿನ್ಯಾಸ ಇದರ ಹೆಗ್ಗಳಿಕೆ. ಇರುವ ಕೂದಲುಗಳನ್ನೇ ಉದ್ದವನ್ನಾಗಿಸಿ, ಹೊಸ ರೀತಿಯ ಲುಕ್ ನಿಮಗೆ ನೀಡುತ್ತದೆ. ಹೆಚ್ಚು ರೀತಿಯಲ್ಲಿ ಕೂದಲನ್ನು ಉದ್ದವನ್ನಾಗಿಸಿ, ಹೊಸತನವನ್ನು ನೀಡುತ್ತದೆ. ನುರಿತ ತಜ್ಞರಿಂದ ಇದನ್ನು ಮಾಡಲಾಗುತ್ತದೆ. ನೈಸರ್ಗಿಕವಾದ ನಿಮ್ಮದೇ ಕೂದಲಿನಿಂದ ಇನ್ನಷ್ಟು ಉದ್ದನೆಯ ಕೂದಲನ್ನು ಪಡೆದುಕೊಂಡಂತಾಗುತ್ತದೆ.

ಹೈಲೈಟೆಡ್ ಹೇರ್ ಎಕ್ಸ್‌ಟೆಂಷನ್
ಯಾರಿಗೆ ಹೆಚ್ಚು ಸಮಯದ ಅಭಾವವಿದೆಯೋ, ಅಂತೆಯೇ ಅತ್ಯಂತ ಆಕರ್ಷಕವಾಗಿ ಕಾಣಬಯಸುತ್ತಾರೆಯೋ, ಅಂತೆಯೇ ನೈಸರ್ಗಿಕವಾದ ಬಣ್ಣವನ್ನು ಬಿಟ್ಟು ಬೇರೆ ಬಣ್ಣವನ್ನು ಇಷ್ಟಪಡುವುದಿಲ್ಲವೋ ಅಂತಹವರಿಗೆ ಹೇರ್ ಎಕ್ಸ್‌ಟೆಂಷನ್ ಉತ್ತಮವಾದ ಉತ್ತರವಾಗಿದೆ. ಪರ್ಪಲ್ ನಿಂದ ಕ್ಲಾಸಿಕ್ ಬ್ಲೊಂಡ್ ವರೆಗೆ ಎಲ್ಲಾ ರೀತಿಯ ಬಣ್ಣಗಳನ್ನು ಆಯ್ಕೆ ಮಾಡಬಹುದು.

ತ್ವರಿತ ಫೇಶಿಯಲ್ ಗ್ಲೋ, ಸ್ಕಿನ್ ಪಾಲಿಶಿಂಗ್
ಹೇರ್‌ಲೈನ್‌ನಿಂದ ಮತ್ತೊಂದು ಉತ್ತಮವಾದ ಉತ್ಪನ್ನವಾಗಿದ್ದು, ಇದು ನಿಮ್ಮನ್ನು ಹೆಚ್ಚು ಆಕರ್ಷಕ ಹಾಗೂ ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಚರ್ಮದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸುವ ತಾಂತ್ರಿಕತೆಯಾಗಿದ್ದು, ಇದರೊಂದಿಗೆ ಮುಖಕ್ಕೆ ಮಸಾಜ್(ಫೇಶಿಯಲ್ ಮಸಾಜ್), ಮೈಕ್ರೋದರ್ಮಬ್ರೇಷನ್(ಎಂಡಿಎ) ಮತ್ತು ವಿಟಮಿನ್ ಸಿ ಗಳನ್ನು ನೀಡಿ ನಿಮ್ಮ ಬಾಡಿದ ಚರ್ಮವನ್ನು ಮತ್ತೆ ಕಾಂತಿದಾಯಕವನ್ನಾಗಿ ಮಾಡುತ್ತದೆ.

ತ್ವರಿತ ಶೇಪ್ ಅಪ್
ಹೇರ್ ಲೈನ್ ಶೇಪ್ ಅಪ್‌ನೊಂದಿಗೆ ಕೈ ಜೋಡಿಸಿದರೆ ನಿಮ್ಮಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುವುದು ಖಂಡಿತ. ಐಸೋಗೈ ಎಂಬ ಒಂದು ಯಂತ್ರ ನಿಮ್ಮ ಮಸಲ್‌ಗಳ ಮೇಲೆ ಕೆಲಸ ಮಾಡಿ ಅವುಗಳನ್ನು ಹೆಚ್ಚು ಫರ್ಮ್ ಹಾಗೂ ಟೋನ್ ಮಾಡುವ ಕೆಲಸ ಮಾಡುತ್ತದೆ. ಸುಕ್ಕುಗಟ್ಟಿದ ತ್ವಚೆ ಕಾಂತಿಯುತವಾಗಲು 20 ನಿಮಿಷ ಸಾಕು.

ಬೊಜ್ಜು ಮಂಗ ಮಾಯ
ಅಂತೆಯೇ ಹೇರ್‌ಲೈನ್ ನ ಶೀಘ್ರ ಇಂಚ್ ಲಾಸ್ ಮೂಲಕ ಬೊಜ್ಜಿನಿಂದ ಮುಕ್ತಿ ಪಡೆಯಬಹುದು. ಟ್ರಾನ್‌ಶನ್ ಎಂಬ ಆಧುನಿಕ ಹೊಸ ಯಂತ್ರ ನಿಮ್ಮ ಬೊಜ್ಜಿನ ಕಣಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿ, ಬೊಜ್ಜಿನಿಂದ ನಿಮಗೆ ಮುಕ್ತಿ ನೀಡುತ್ತದೆ.












Click it and Unblock the Notifications