ಗ್ರೇಟರ್ ಬೆಂಗಳೂರು: 5 ಪಾಲಿಕೆಗಳ ಬಗ್ಗೆ ಹೊಸ ಅಪ್ಡೇಟ್ಸ್ ಕೊಟ್ಟ ಡಿ.ಕೆ ಶಿವಕುಮಾರ್!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳನ್ನಾಗಿ ಗ್ರೇಟರ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ವಿಭಜನೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರನ್ನು ಐದು ವಿಭಾಗಗಳನ್ನಾಗಿ ವಿಭಜನೆ ಮಾಡಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಅದರಂತೆ ಐದು ಪಾಲಿಕೆಗಳನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ನಗರ ಪಾಲಿಕೆಗಳ ರಚನೆ, ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯ ಹೊಸ ನಕ್ಷೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ಕೆಲವೊಂದು ಪ್ರಮುಖ ಅಂಶಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ನಮ್ಮ ಬೆಂಗಳೂರು ಗ್ರೇಟರ್ ಬೆಂಗಳೂರು ಟ್ಯಾಗ್‌ಲೈನ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಐದು ಹೊಸ ಪಾಲಿಕೆಗಳ ವಿವರ ಇಲ್ಲಿದೆ
ನಗರ ಪಾಲಿಕೆಗಳು | ವಿಸ್ತೀರ್ಣ (ಚದರ ಕಿ.ಮೀ.) | ಜನಸಂಖ್ಯೆ (2023ರ ಸುಮಾರಿಗೆ)
ಬೆಂಗಳೂರು ಉತ್ತರ | 158 | 1.8 mn
ಬೆಂಗಳೂರು ದಕ್ಷಿಣ | 147 | 1.7 mn
ಬೆಂಗಳೂರು ಪೂರ್ವ | 168 | 0.9 mn
ಬೆಂಗಳೂರು ಪಶ್ಚಿಮ | 161 | 2.6 mn
ಬೆಂಗಳೂರು ಕೇಂದ್ರ | 78 | 1.5 mn
ವಲಯಗಳ ಮರುವಿಂಗಡಣೆ
ಬೆಂಗಳೂರು ಉತ್ತರ: ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ. ದಾಸರಹಳ್ಳಿ ಹೊರತುಪಡಿಸಿ), ಹೆಬ್ಬಾಳ, ಪುಲಕೇಶಿನಗರ (ಕುಶಾಲನಗರ ಹೊರತುಪಡಿಸಿ), ಆರ್.ಆರ್. ನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ಹೊರತುಪಡಿಸಿ), ಸರ್ವಜ್ಞನಗರ ಮತ್ತು ಯಲಹಂಕ.
ಬೆಂಗಳೂರು ಸೆಂಟ್ರಲ್: ಸಿವಿ ರಾಮನ್ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ ಹಾಗೂ ಶಿವಾಜಿನಗರ.
ಬೆಂಗಳೂರು ಪೂರ್ವ: ಕೆ.ಆರ್. ಪುರಂ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ).
ಬೆಂಗಳೂರು ದಕ್ಷಿಣ: ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಮಹದೇವಪುರ (ಬೆಳ್ಳಂದೂರು ಭಾಗ), ಪದ್ಮನಾಭನಗರ (ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲಸಂದ್ರ), ಆರ್‌ಆರ್ ನಗರ (ಆರ್.ಆರ್. ನಗರ ವಾರ್ಡ್), ಯಶವಂತಪುರ (ಹೆಮ್ಮಿಗೆಪುರ ಭಾಗ).
ಬೆಂಗಳೂರು ಪಶ್ಚಿಮ: ಬಸವನಗುಡಿ, ದಾಸರಹಳ್ಳಿ (ಚೊಕ್ಕಸಂದ್ರ, ಪಿಐಎ ರಾಜಗೋಪಾಲ ನಗರ, ಪೀಣ್ಯ ಇಂಡಸ್ಟ್ರಿಯಲ್), ಗೋವಿ೦ದರಾಜ ನಗರ, ಮಹಾಲಕ್ಷ್ಮಿಲೇಔಟ್, ಮಲ್ಲೇಶ್ವರ, ಪದ್ಮನಾಭ ನಗರ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿ ಸಂದ್ರ, ಯಡಿಯೂರು), ರಾಜಾಜಿನಗರ, ಆರ್‌ಆರ್‌ನಗರ ( ಹೆಚ್‌ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ಆರ್ಆರ್‌ನಗರ ವಾರ್ಡ್), ವಿಜಯನಗರ ಪ್ರದೇಶಗಳು ಸೇರಿರಲಿವೆ ಎಂದು ಡಿ.ಕೆ ಶಿವಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications