GBA Election: ಚುನಾವಣೆ ಕೆಲಸ ಮತ್ತು SIR ಪ್ರಕ್ರಿಯೆ ಚುರುಕುಗೊಳಿಸಿದ ನಗರ ಪಾಲಿಕೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಇನ್ನೊಂದು ತಿಂಗಳು ಮಾತ್ರವೇ ಬಾಕಿ ಇದೆ. ಜೂನ್ ಅಂತ್ಯದೊಳಗೆ ನಡೆಸಲು ರಾಜ್ಯ ಚುನಾವಣೆ ಆಯೋಗ ಸಜ್ಜಾಗಿದೆ. ಇತ್ತ ಬಾಕಿ ಉಳಿದಿರುವ ಕೆಲಸಗಳಿಗೆ ನಗರ ಪಾಲಿಕೆಗಳು ವೇಗ ನೀಡುತ್ತಿವೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಹಾಗೂ ಚುನಾವಣೆ ಕೆಲಸಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ಮಲ್ಲೇಶ್ವರಂನ ಜಲಮಂಡಳಿಯ ಸುವರ್ಣ ಭವನದಲ್ಲಿ ಕಂದಾಯ ಅಧಿಕಾರಿ, ಸಿಬ್ಬಂದಿ ಜತೆ ಸಭೆ ನಡೆಸಿ ಚರ್ಚಿಸಿದರು. ಪ್ರಮುಖ ಸೂಚನೆಗಳನ್ನು ನೀಡಿದರು.

Greater Bengaluru Authority Elections

ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ, ಪ್ರಸ್ತುತ ಎಸ್. ಐ.ಆರ್ ಹಂತ-III ರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿರುವ ಹಿನ್ನೆಲೆಯಲ್ಲಿ ಪೂರ್ಣ ಸಿದ್ಧತೆಯೊಂದಿಗೆ ಕಾರ್ಯ ಪ್ರವೃತ್ತರಾಗಬೇಕು. ಜನಗಣತಿ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಎಸ್.ಐ.ಆರ್ ಹಂತ-III ರ ಕೆಲಸ, ಸಿದ್ಧತೆಗಳು 2026 ಜೂನ್ 20ಕ್ಕೆ ಆರಂಭವಾಗಲಿದೆ. ಜೊತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳ ಚುನಾವಣೆಯೂ ನಡೆಯಲಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಸಂಪೂರ್ಣ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು ಎಂದು ಆಯುಕ್ತರು ಹೇಳಿದರು.

2026ರ ಬೆಂಗಳೂರು ಟಾಪ್ 10 ಕಂಪನಿಗಳು ಯಾವುವು? ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ಇನ್
2026ರ ಬೆಂಗಳೂರು ಟಾಪ್ 10 ಕಂಪನಿಗಳು ಯಾವುವು? ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ಇನ್

ಸಭೆಯ ಇತರ ಮಹತ್ವದ ಅಂಶಗಳು

* ಮತದಾರರ ನೋಂದಣಾಧಿಕಾರಿಗಳು (ERO) ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು (AERO) ಮತಗಟ್ಟೆ ಅಧಿಕಾರಿ (ಬಿ ಎಲ್ ಒ)ಗಳೊಂದಿಗೆ ತಮ್ಮ ತಮ್ಮ ವ್ಯಾಪ್ತಿಯ ಎಲ್ಲ ಮತಗಟ್ಟೆ (ಪೋಲಿಂಗ್ ಸ್ಟೇಷನ್)ಗಳಿಗೆ ಮುಂಚಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು.

* ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರುಗಳು (ಬಿ ಎಲ್‌ ಒ ಸೂಪರ್ವೈಸರ್) ಬಿ ಎಲ್‌ ಒ ಗಳನ್ನು ಸೂಕ್ತ ರೀತಿಯಲ್ಲಿ ಕೆಲಸಕ್ಕೆ ನಿಯೋಜಿಸಬೇಕು. ಅಗತ್ಯವಿದ್ದಲ್ಲಿ ತರಬೇತಿ ನೀಡಬೇಕು.

* ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ಬಳಿ ಎಸ್ ಐ ಆರ್ ಪ್ರಕ್ರಿಯೆಗೆ ತಮ್ಮಲ್ಲಿ ಲಭ್ಯವಿರುವ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ಆಯುಕ್ತರು, ಸಿಬ್ಬಂದಿ ನಿಯೋಜನೆ ಸಮರ್ಪಕವಾಗಿ ಇರುವಂತೆ ಖಚಿತಪಡಿಸಿಕೊಳ್ಳಿ.

* ಮತಗಟ್ಟೆ ಮೇಲ್ವಿಚಾರಕರು (ಸೂಪರ್ವೈಸರ್ ಗಳು) ಬಿ.ಎಲ್.ಒ ಗಳ ಜತೆ ಸಂಪರ್ಕದಲ್ಲಿರಬೇಕು. ಆ ಮೂಲಕ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಕ್ರಮವಹಿಸಿ.

ಸಾರಿಗೆ ಮುಷ್ಕರ: ಬೆಂಬಲ ಹಿಂಪಡೆದ KSRTC ನೌಕರರ ಸಂಘ: ಮೇ 25ಕ್ಕೆ ಮಹತ್ವದ ಸಭೆ
ಸಾರಿಗೆ ಮುಷ್ಕರ: ಬೆಂಬಲ ಹಿಂಪಡೆದ KSRTC ನೌಕರರ ಸಂಘ: ಮೇ 25ಕ್ಕೆ ಮಹತ್ವದ ಸಭೆ

* ಕಂದಾಯ ಅಧಿಕಾರಿಗಳು ಖಾತೆ ಕೆಲಸಗಳ ಜೊತೆಗೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಎಸ್ ಐ ಆರ್ ಗೆ ಸಮರ್ಪಕ ರೀತಿಯಲ್ಲಿ ಸಮಯ ಮೀಸಲಿಡಿ. ಖಾತಾ ಮೇಳದ ಕಡೆಗೂ ಗಮನ ಹರಿಸಿ.

* ಚುನಾವಣೆ ಕೆಲಸಗಳು ಯಾವುದೇ ಲೋಪದೋಷಗಳು ಆಗದ ಹಾಗೇ ಎಸ್.ಐ.ಆರ್ ಪ್ರಕ್ರಿಯೆ ಕೈಗೊಳ್ಳಬೇಕು.

* ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡ ಪ್ರಕಾರ ಮತದಾರರ ಪಟ್ಟಿ ನಿರ್ವಹಣೆಯಾಗಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+